ಕೋಲಾರದಲ್ಲಿ ಬಿಜೆಪಿಯಿಂದ ಪೌರಕಾರ್ಮಿಕರ ಪಾದಪೂಜೆ..!
ಕೊರೊನ ವೈರಸ್ ಮಹಾಮಾರಿ ದೇಶಾದ್ಯಂತ ಹರಡಿ ಜನಸಾಮಾನ್ಯರ ದಿನನಿತ್ಯದ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಒಂದೆಡೆ ದೇಶವೇ ಲಾಕ್‌ಡೌನ್ ಆಗಿದ್ದರೂ ಯಾವುದೇ ಹಿಂಜರಿಯದೆ, ಆರೋಗ್ಯವನ್ನು ಲೆಕ್ಕಿಸದೆ ದಿನನಿತ್ಯ ನಗರವನ್ನು ಸ್ವಚ್ಛ ಮಾಡುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಶ್ಲಾಘಿಸಿ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌ನಾರಾಯಣ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪೌರಕಾರ್ಮಿಕರಿಗೆ ಪಾದಪೂಜೆಯನ್ನು ನೆರವೇರಿಸಿದ್ದಾರೆ.
ಕೋಲಾರ(ಏ.29): ಕೊರೊನ ವೈರಸ್ ಮಹಾಮಾರಿ ದೇಶಾದ್ಯಂತ ಹರಡಿ ಜನಸಾಮಾನ್ಯರ ದಿನನಿತ್ಯದ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಒಂದೆಡೆ ದೇಶವೇ ಲಾಕ್‌ಡೌನ್ ಆಗಿದ್ದರೂ ಯಾವುದೇ ಹಿಂಜರಿಯದೆ, ಆರೋಗ್ಯವನ್ನು ಲೆಕ್ಕಿಸದೆ ದಿನನಿತ್ಯ ನಗರವನ್ನು ಸ್ವಚ್ಛ ಮಾಡುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಶ್ಲಾಘಿಸಿ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌ನಾರಾಯಣ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪೌರಕಾರ್ಮಿಕರಿಗೆ ಪಾದಪೂಜೆಯನ್ನು ನೆರವೇರಿಸಿದರು.
ಲಾಕ್‌ಡೌನ್ ದಿನದಿಂದ ಮುಂದುವರೆದು ಸುಮಾರು 32 ದಿನಗಳಿಂದ ನಗರ ಅಧ್ಯಕ್ಷ ಕಮಲ್‌ನಾಥ್ ನೇತೃತ್ವದಲ್ಲಿ ದಿನಕ್ಕೆ 2 ಸಾವಿರ ಆಹಾರ ಮತ್ತು ತರಕಾರಿ ಪ್ಯಾಕ್‌ಗಳನ್ನು ಎಲ್ಲಾ ಬಡ ಕುಟುಂಬಗಳಿಗೆ ಸರಬರಾಜು ಮಾಡುತ್ತಿರುವ ನಿಟ್ಟಿನಲ್ಲಿ ಮಂಗಳವಾರ ಎಲ್ಲಾ ನಗರಸಭೆ ಪೌರಕಾರ್ಮಿಕರಿಗೆ ಬಿರಿಯಾನಿ ಪ್ಯಾಕೆಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಬಟ್ಟೆ ವರ್ತಕನಿಂದ 17 ಮಂದಿಗೆ ಕೊರೋನಾ ಸೋಂಕು: ಬೆಚ್ಚಿ ಬಿದ್ದ ಕಲಬುರಗಿ ಜನತೆ..!
ಕೋಲಾರ ಜಿಲ್ಲೆ ಗ್ರೀನ್ ಝೋನ್‌ಗೆ ಒಳಪಟ್ಟಿದೆ. ಇದು ಜಿಲ್ಲೆಯ ಎಲ್ಲಾ ನಾಗರೀಕರು ಮಾಡಿದ ಪುಣ್ಯ. ಇದಕ್ಕೆ ಕಾರಣ ಜಿಲ್ಲಾಡಳಿತ ತೆಗೆದುಕೊಂಡ ಸೂಕ್ತ ಕ್ರಮಗಳು. ಪೊಲೀಸ್ ಇಲಾಖೆ, ವೈದ್ಯರು, ಆಶಾ ಕಾರ್ಯಕರ್ತರು, ಜೊತೆಗೆ ಪ್ರಮುಖವಾಗಿ ನಮ್ಮ ಆರೋಗ್ಯ ಉತ್ತಮವಾಗಿರಲು ಪೌರಕಾರ್ಮಿಕರ ನಿರಂತರ ಸೇವೆ ಕಾರಣವಾಗಿದೆ.
ಇಂತಹ ಸೇವಕರನ್ನು ಪ್ರತಿಯೊಬ್ಬರೂ ಗುರುತಿಸಿ ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಇಂದು ಬಿಜೆಪಿ ಪಕ್ಷದ ಜಿಲ್ಲಾ ಮತ್ತು ಕೆಜಿಎಫ್ ತಾಲ್ಲೂಕಿನ ಘಟಕದ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ನಾಲ್ಕು ತಿಂಗಳು ಮಗು ಸೇರಿದಂತೆ ಐವರಿಗೆ ಕೊರೋನಾ ಸೋಂಕು ದೃಢ: ಆತಂಕದಲ್ಲಿ ಕಲಬುರಗಿ ಜನತೆ
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಕಮಲ್‌ನಾಥ್, ಮುಖಂಡರಾದ ರವಿಕುಮಾರ್, ಜಗದೀಶ್, ಹರೀಶ್, ಗಾಂಧಿ, ಪಾಂಡಿಯನ್, ನಾಗರಾಜ್ ಸೇರಿದಂತೆ ಇತರೆ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.