ಸೂರಿಗಾಗಿ ವೃದ್ದೆ ಪರದಾಟ, 20 ವರ್ಷದಿಂದ ಅಲೆದಾಡಿ ಚಪ್ಪಲಿ ಸವಿಸಿದ್ರು ಮನೆ ಸಿಕ್ಕಿಲ್ಲ

* ಮನೆಗಾಗಿ ವೃದ್ದೆಯ ಪರದಾಟ
* ಮನೆಗಾಗಿ 20  ವರ್ಷ ಅಲೆದಾಡಿ ಚಪ್ಪಲಿ ಸವಿಸಿದ್ರು ಕರುಣೆ ತೋರಿಸುವವರು ಇಲ್ಲ
* ಬೀಳುವಂತೆ ಇರುವ ಸಣ್ಣದೊಂದು ಗುಡಿಸಲಿನಲ್ಲಿ ಜೀವನ ನಡೆಸುತ್ತಿರುವ ವೃದ್ಧೆ

Kolar 70 Years old woman struggling For house rbj

ವರದಿ ; ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ, (ಮಾ.21): ಆಗೋ ಈಗೋ ಅಂತಿರುವ ಆ ವೃದ್ಧೆಗೆ ಈಗಲೂ ಸರಿಯಾದ ಸೂರು ಇಲ್ಲ. ತನ್ನ ಜೀವನೋಪಾಯಕ್ಕೆ ಇನ್ನೊಬ್ಬರನ್ನು ಅವಲಂಬಿಸದೇ ಸ್ವಾವಲಂಬಿಯಾಗಿ ದುಡಿಯುತ್ತಿರುವ ಆಕೆಗೆ ದಿಕ್ಕು ದೆಸೆಯಿಲ್ಲ. ದೇವಾಲಯದ ಅವರಣ ಸ್ವಚ್ಚತೆ ಮಾಡಿ ಅರ್ಚಕರು,ಭಕ್ತಾದಿಗಳು ನೀಡುವ ಪ್ರಸಾದದಲ್ಲೆ ಜೀವನ ಸಾಗಿಸ್ತಿರುವ ಆ ವೃದ್ದೆ, ಮನೆಗಾಗಿ ಆಕೆ ಇಪ್ಪತ್ತು ವರ್ಷ ಅಲೆದಾಡಿ ಚಪ್ಪಲಿ ಸವಿಸಿದ್ರು ಕರುಣೆ ತೋರಿಸುವವರು ಯಾರು ಇಲ್ಲ.ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ...

ಹೌದು ದೇವಾಲಯದ ಆವರಣ ಸ್ವಚ್ಚತೆ ಮಾಡುತ್ತಿರುವ 70 ವಯಸ್ಸಿನ ವೃದ್ದೆ. ಸೂಕ್ತ ವಸತಿ ಇಲ್ಲದೆ ಗುಡಿಸಿಲಿನಲ್ಲೆ ವಾಸ ಮಾಡ್ತಿರುವ ವೃದ್ದೆ ಕೋಲಾರ ತಾಲ್ಲೂಕಿನ ದೊಡ್ನಹಳ್ಳಿ ಗ್ರಾಮದ ನಿವಾಸಿ.  ಈಕೆಯ ಹೆಸರು ವೆಂಕಟಮ್ಮ ಅಂತ ಈಕೆ ವಯಸ್ಸು 70 ವರ್ಷ.ವಸತಿ ಯೋಜನೆ ಮೂಲಕ ಬಡವರಿಗೆ ಲಕ್ಷಾಂತರ ಮನೆಗಳನ್ನು ನೀಡುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳತ್ತಿರುವ ಸರ್ಕಾರ,ಆದ್ರೆ ಜೀವನದ ಕೊನೆಯ ಘಟ್ಟದಲ್ಲಿ ಬದುಕು ಸಾಗಿಸುತ್ತಿರುವ ಕೋಲಾರದ ಈ ವೃದ್ದೆಗೆ ಕಳೆದ 20 ವರ್ಷಗಳಿಂದ ಸಣ್ಣದೊಂದು ಸೂರು ಸಹ ಕಲ್ಪಿಸಲು ಅಧಿಕಾರಿಗಳನ್ನು ಅಂಗಲಾಚಿ ಬೇಡುತ್ತಿದ್ದಾಳೆ.

Kolar: ಕ್ಲಾಕ್​ ಟವರ್​ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಬಹುದಿನಗಳ ಕನಸು ಕೊನೆಗೂ ನನಸು

ಆದ್ರೆ ಅಧಿಕಾರಿಗಳು ಮಾತ್ರ ಕರುಣೆ ತೋರುತ್ತಿಲ್ಲ, ವೆಂಕಟಮ್ಮ ಮಾತ್ರ ಇಂದು ನಾಳೇ ಬೀಳುವಂತೆ ಇರುವ ಸಣ್ಣದೊಂದು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಮಳೆ ಬಂದರೆ ಸಾಕು ಗುಡಿಸಲಿಗೆ ನೀರು ನುಗ್ಗಿ ಇಡೀ ಗುಡಿಸಲು ಜಲಾವೃತ್ತವಾಗುತ್ತದೆ, ಮಳೆಗಾಲದಲ್ಲಿ ಗ್ರಾಮದ ದೇವಾಲಯವೇ ವೆಂಕಟಮ್ಮ ಅವರಿಗೆ ಅಸರೆಯಾಗಿದೆ, ಇನ್ನೂ ಸರ್ಕಾರದ ಮನೆಗಾಗಿ ವೆಂಕಟಮ್ಮ ತಮ್ಮ ಇಳಿ ವಯಸ್ಸಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗೆ ಅಲೆದು ಚಪ್ಪಲಿ ಸವೆದಿದೆಯೆ ಹೊರತು ಯಾವೊಬ್ಬ ಅಧಿಕಾರಿಯ  ವೆಂಕಟಮ್ಮನಿಗೆ ವಸತಿ ಯೋಜನೆಯಿಂದ ಮನೆ ನೀಡುವ ಮನಸ್ಸು ಮಾಡ್ತಿಲ್ಲ.

Kolar 70 Years old woman struggling For house rbj

 ಇನ್ನು ಇಗಾಗಲೇ ಪಂಚಾಯಿಗೆ ದಾಖಲೆಗಳು ನೀಡಿದ್ರು ಕೆಲ ಆಧಿಕಾರಿಗಳು ವಸತಿ ಯೋಜನೆಯಡಿ ಮನೆ ಕಲ್ಪಿಸಲು  ಮುಂದಾಗುತ್ತಿಲ್ಲ,ಹಣ ನೀಡಲಾಗದೇ 20 ವರ್ಷದಿಂದ ವಾಸಿಸಲು ಯೋಗ್ಯವಲ್ಲದ ಗುಡಿಸಲಿನಲ್ಲಿ ವೃದ್ದೆ ಮಹಿಳೆ ವಾಸ ಮಾಡುತ್ತಿದ್ದಾರೆ.ಇನ್ನೂ ವೃದ್ದೆಯ ಪತಿ ನಿಧಾನರಾಗಿ ಹೋಗಿ ದಶಕಗಳು ಕಳೆದಿವೆ, ಇರುವ ಒಬ್ಬ ಮಗ ತಾಯಿಯನ್ನು ನೋಡಿಕೊಳ್ಳದೇ ಬಿಟ್ಟು ಹೋಗಿದ್ದಾನೆ, ತಮ್ಮವರು ಎನ್ನುವರು ಯಾರು ಇಲ್ಲದಿದ್ದರೂ ವೃದ್ದೆ ಮಾತ್ರ ಕಷ್ಟಜೀವಿ, ತಮ್ಮ ಇಳಿವಯಸ್ಸಿನಲ್ಲಿ ದುಡಿಯುತ್ತ  ಜೀವನ ಸಾಗಿಸುತ್ತಿದ್ದಾರೆ.

 ಪ್ರತಿದಿನ  ಕೋಲಾರದ ಅಂತರಗಂಗೆ ಬೆಟ್ಟದಲ್ಲಿರುವ ದಕ್ಷಿಣ ಕಾಶಿ ಶಿವನ ದೇವಾಲಯಕ್ಕೆ ಹೋಗಿ ದೇವಾಲಯ ಆವರಣ ಸುತ್ತಮುತ್ತ ಬೆಳೆದಿರುವ  ಗಿಡಗಂಟೆಗಳನ್ನು ತೆಗೆಯುವುದು, ಕಸ ಗುಡಿಸಿ ಅವರಣ ಸ್ವಚ್ಛ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ದೇವಾಲಯದ ಅರ್ಚಕರು ಹಾಗೂ ವ್ಯಾಪಾರಸ್ಥರು, ಭಕ್ತರು ನೀಡುವ ಅಲ್ಪಸ್ವಲ್ಪ ಹಣದಲ್ಲಿ ವೃದ್ದೆ ತನ್ನ ಜೀವನ ಸಾಗಿಸುತ್ತಿದ್ದಾಳೆ. ಇಂತಹ ವೃದ್ದೆಗೆ ಸರ್ಕಾರದ ನೆರವು ಬೇಕಾಗಿದೆ.

Kolar 70 Years old woman struggling For house rbj

 ಸರ್ಕಾರದಿಂದ ಏನೇನು ಅಪೇಕ್ಷಿಸದ ವೃದ್ದೆ ನನಗೆ ಇರಲು ಮನೆ ಕೊಟ್ಟರೆ ಸಾಕು ಅಂತಾ ಅಧಿಕಾರಿಗಳಲ್ಲಿ ಮನವಿ ಮಾಡುತ್ತಾರೆ.ಇನ್ನೂ ವಸತಿ ಯೋಜನೆಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಲಕ್ಷಾಂತರ ಮನೆಗಳನ್ನು ನೀಡಿದ್ದೇವೆ ಎಂದು ಹೇಳುವ ಸರ್ಕಾರ ವಸತಿ ಸೌಕರ್ಯ ನಿಜವಾದ ಫಲಾನುಭವಿಗಳಿಗೆ ಸಿಗುತ್ತಿದ್ದೆಯೆ ಎಂಬ ಅನುಮಾನ ಮೂಡಿಸುತ್ತಿದೆ. ವಸತಿ ಸಚಿವರು ಇದರ ಬಗ್ಗೆ ಗಮನಹರಿಸಿಬೇಕಿದೆ, ಇನ್ನೂ ಈಗಲಾದರೂ ವೃದ್ದೆಗೆ ವಸತಿ ಸೌಕರ್ಯ ಕಲ್ಪಿಸಿಕೊಡಲು ಅಧಿಕಾರಿಗಳು ಮುಂದಾಗಬೇಕಿದೆ.

 ಆದೇನೆ ಇರಲಿ 70 ರ ವಯಸ್ಸಿನಲ್ಲಿ ನೆಮ್ಮದಿಯಾಗಿ ಜಿವನ ಸಾಗಿಸಬೇಕಾದ ವೃದ್ದೆ ಮನೆಗಾಗಿ ಅಂಗಲಾಚುತ್ತಿರುವುದು ಮಾತ್ರ ಶೋಷನೀಯ ಇನ್ನಾದ್ರು ಜನಪ್ರತಿನಿಧಿಗಳು, ಅಧಿಕಾರಿಗಳು ಈ ವೃದ್ದೆಗೆ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಲಿ ಎಂಬುದು ನಮ್ಮ ಅಶಯ.

Latest Videos
Follow Us:
Download App:
  • android
  • ios