ಚಳವಳಿ ಹತ್ತಿಕ್ಕಲು ಸರ್ಕಾರ ಶಕ್ತಿ ಮೀರಿ ಯತ್ನ : ಬೇರೆ ವ್ಯವಸ್ಥೆ ಎಷ್ಟು ಸಫಲ ಆಗುತ್ತೋ.?
ಬರುವ ಅರ್ಧ ಸಂಬಳದಲ್ಲಿ ಸಾರಿಗೆ ನೌಕರರು ಬದುಕುವುದು ಹೇಗೆ..? ಸರ್ಕಾರ ನ್ಯಾಯ ಕೊಡುವ ಬದಲು ದಮನಕಾರಿ ನೀತಿಯನ್ನ ಯಾವಾಗ ಶುರುಮಾಡಿತೋ ಆವಾಗಿನಿಂದ ಇದು ಸತ್ಯಾಗ್ರಹವಾಗಿ ಪರಿವರ್ತನೆ ಆಗಿದೆ. ಈಗ ಅನಿರ್ದಿಷ್ಟ ಅವಧಿ ಸತ್ಯಾಗ್ರಹ ವಾಗಿ ಮಾಡಲು ತೀರ್ಮಾನ ತಗೆದುಕೊಂಡಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತುಮಕೂರು (ಏ.07): ಚಳವಳಿಯನ್ನ ಹತ್ತಿಕ್ಕಲು ಸರ್ಕಾರ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ತುಮಕೂರಿನಲ್ಲಿಂದು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಬಸ್ ಗಳನ್ನು ಓಡಿಸಲು ಬೇರೆ ಚಾಲಕರನ್ನ ನೇಮಿಸಿಕೊಂಡು ಪರ್ಯಾಯ ವ್ಯವಸ್ಥೆ ಮಾಡುತ್ತಾರೆ. ಅವರ ಪ್ರಯತ್ನ ಎಷ್ಟರ ಮಟ್ಟಿಗೆ ಸಫಲ ಆಗುತ್ತದೆಯೋ ಗೊತ್ತಿಲ್ಲ. ಆದರೇ ಸಾರಿಗೆ ಇಲಾಖೆಯಲ್ಲಿ ದುಡಿಯುತ್ತಿರುವ ಜನ ಇವತ್ತು ಕೂಡ ಸರ್ಕಾರಿ ನೌಕರಿಗೆ ಹೋಲಿಸಿದರೆ ಅರ್ಧ ಸಂಬಳದಲ್ಲಿ ಬದುಕುತ್ತಿದ್ದಾರೆ ಎಂದರು.
ಬರುವ ಅರ್ಧ ಸಂಬಳದಲ್ಲಿ ಅವರು ಬದುಕುವುದು ಹೇಗೆ..? ಸರ್ಕಾರ ನ್ಯಾಯ ಕೊಡುವ ಬದಲು ದಮನಕಾರಿ ನೀತಿಯನ್ನ ಯಾವಾಗ ಶುರುಮಾಡಿತೋ ಆವಾಗಿನಿಂದ ಇದು ಸತ್ಯಾಗ್ರಹವಾಗಿ ಪರಿವರ್ತನೆ ಆಗಿದೆ. ಈಗ ಅನಿರ್ದಿಷ್ಟ ಅವಧಿ ಸತ್ಯಾಗ್ರಹವಾಗಿ ಮಾಡಲು ತೀರ್ಮಾನ ತಗೆದುಕೊಂಡಿದ್ದೇವೆ ಎಂದು ಕೋಡಿಹಳ್ಳಿ ಹೇಳಿದರು.
ಇದೆಲ್ಲಾ ಬೇಕಿತ್ತಾ..? : ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ
ಬಸ್ ಓಡಿಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ ವಿಫಲರಾಗುತ್ತಿದ್ದಾರೆ. ಕೊರೋನಾ ಮುಂಚೆ ಸಾರಿಗೆ ಇಲಾಖೆ ಲಾಭದಲ್ಲಿತ್ತಾ ? ಕೊರೋನಾ ನಂತರ ಇಲಾಖೆ ಲಾಭ ಗಳಿಸುತ್ತಾ ? ಯಾವತ್ತು ನೀವು ಲಾಭ ತೋರಿಸುವರಲ್ಲ. ಇದು ಸೇವಾವಲಯ ಎಂದು ಘೋಷಣೆ ಮಾಡಿಕೊಂಡಿದ್ದೀರಿ ನಷ್ಟವಾದರೆ ಸರ್ಕಾರವೇ ಸರಿದೂಗಿಸಿಕೊಳ್ಳಬೇಕು. ಆಂಧ್ರದಲ್ಲಿ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಘೋಷಿಸಿದ್ದಾರೆ ಎಂದರು.
ಆರನೇ ವೇತನ ಆಯೋಗ ಜಾರಿ ಮಾಡೋದಾಗಿ ಸರ್ಕಾರ ಹೇಳಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಎಸ್ಮಾ ಜಾರಿ ಮಾಡಲು ಯಾವ ನಿಯಮ ಉಲ್ಲಂಘನೆ ಮಾಡಿದೆ ಅಂತ ಸರ್ಕಾರ ಹೇಳಬೇಕು. ಅನ್ಯಾಯಾ ಪ್ರಶ್ನಿಸಿದ್ದಕ್ಕೆ ಎಸ್ಮಾ ಜಾರಿ ಮಾಡುವುದೇ ಎಂದು ಪ್ರಶ್ನೆ ಮಾಡಿದರು.
ಯಾವುದೋ ಜಾತಿ ಮಠ ಮಾನ್ಯಗಳಿಗೆ ಅನುದಾನ ಕೊಡಲು ನಿಮ್ಮಲ್ಲಿ ದುಡ್ಡಿದೆ ಬಡ ಕಾರ್ಮಿಕರಿಗೆ ನೌಕರಿಗೆ ಕೊಡಲು ದುಡ್ಡಿಲ್ಲವೇ ಎಂದು ತುಮಕೂರಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ.