Asianet Suvarna News Asianet Suvarna News

ಮೂರ್ತಿ ವಿಸರ್ಜನೆಗೆ ಜೀವರಕ್ಷಕ ಜಾಕೆಟ್ ಕಡ್ಡಾಯ!

ಗೌರಿ-ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಜೀವರಕ್ಷಕ ಜಾಕೆಟ್ ಕಡ್ಡಾಯವಾಗಿ ಬಳಸಬೇಕು ವೃತ್ತ ನಿರೀಕ್ಷಕ ದಿವಾಕರ್| ಮೂರ್ತಿ ವಿಸರ್ಜನೆಗೆ ಜೀವರಕ್ಷ ಕ ಜಾಕೆಟ್ ಕಡ್ಡಾಯ!

kodagu While Dissolving Ganesh statue Must Wear Life jacket says circle Inspector Diwakar
Author
Bangalore, First Published Aug 26, 2019, 1:23 PM IST

ಕೊಡಗು[ಆ.26]: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಗೌರಿ-ಗಣೇಶ ಹಬ್ಬ ಶಾಂತಿ ಸಭೆ ಮತ್ತು ಸಲಹಾ ಸಭೆಯಲ್ಲಿ ಅವರು ಮಾತನಾಡಿ, ಮೂರ್ತಿ ವಿಸರ್ಜನೆ ಸಂದರ್ಭ ನುರಿತ ಈಜುಗಾರರನ್ನು ಆಯಾ ಗೌರಿ-ಗಣೇಶ ಉತ್ಸವ ಸಮಿತಿ ಆಯ್ಕೆ ಮಾಡಿಕೊಂಡು ಜೀವಕ್ಕೆ ಅಪಾಯವಾಗದಂತೆ ಯೋಜನೆ ರೂಪಿಸಿಕೊಳ್ಳಬೇಕಿದೆ. ಕಡ್ಡಾಯವಾಗಿ ನೀರಿನಲ್ಲಿ ತೇಲುವಂತ ತಂತ್ರಜ್ಞಾನವಿರುವ ಜೀವರಕ್ಷಕ ಜಾಕೆಟ್ ಬಳಸಿಕೊಂಡು ಉತ್ಸವ ಆಚರಿಸಲು ಸೂಚನೆ ನೀಡಿದರು.

ಶರತ್ತುಗಳು: ಎಲ್ಲಿಯೂ ಮತ್ತೊಂದು ಕೋಮಿಗೆ ನೋವುಂಟು ಮಾಡುವ ಉದ್ದೇಶವಿರಬಾರದು. ಹಬ್ಬವನ್ನು ಸಾಮರಸ್ಯದಿಂದ ಆಚರಿಸಬೇಕು. ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಡಿಜೆ ಬಸದೆ ವಿಸರ್ಜನಾ ಮೆರವಣಿಗೆ ನಡೆಸಬೇಕು. ಕಾನೂನಿಗೆ ಗೌರವ ನೀಡಬೇಕು. ಬೆಳಗ್ಗಿನ ಜಾವದವರೆಗೂ ಮುಂದುವರಿಯದಂತೆ ಸಲಹೆ ನೀಡಿದರು. ಪ್ರತಿ ಸಮಿತಿಗಳು ಕೂಡ ಪ್ರತಿಷ್ಠಾಪನೆ, ವಿಸರ್ಜನಾ ಮೆರವಣಿಗೆ, ಕಾರ್ಯಕ್ರಮಗಳು, ವಿಸರ್ಜನಾ ಮಾರ್ಗದ ಬಗ್ಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದರು. ಸಭೆಯಲ್ಲಿ ಈರಣ್ಣ ಕಾಲನಿ, ಉಮಾಮಹೇಶ್ವರಿ ದೇವಸ್ಥಾನ, ಮೈಸೂರು ನಗರ, ಜೋಡುಬೀಟಿ, ಮಡಿಕೆಬೀಡು, ಮಾಯಮುಡಿ, ಮರಪಾಲ, ಮರೂರು ಭಾಗದ ಉತ್ಸವ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮಳೆ ರಜೆ ಸರಿದೂಗಿಸಲು ಶನಿವಾರ ಇಡೀ ದಿನ ತರಗತಿ

ಪೊಲೀಸ್ ಉಪ ನಿರೀಕ್ಷಕ ಆರ್. ಮಂಚಯ್ಯ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎನ್. ಪ್ರಕಾಶ್, ಮಂಜುಳ, ಪ್ರಮುಖರಾದ ಕುಲ್ಲಚಂಡ ಚಿಣ್ಣಪ್ಪ, ಕಿಲನ್ ಗಣಪತಿ, ಅಬ್ದುಲ್ ಸಮ್ಮದ್, ತನ್ವಿರ್ ಅಹಮ್ಮದ್ ಇದ್ದರು.

Follow Us:
Download App:
  • android
  • ios