ಶಾಲಾ ತರಗತಿ ಕೊಠಡಿಯಲ್ಲಿ ಸೃಷ್ಟಿಯಾದ ಬಾಹ್ಯಾಕಾಶ: ವಿದ್ಯಾರ್ಥಿಗಳ ಬಾಹ್ಯಾಕಾಶಕ್ಕೆ ಕರೆದೊಯ್ದ ಸರ್ಕಾರಿ ಶಾಲೆ ಶಿಕ್ಷಕರು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ರನ್ನು ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ಆಗಸ್ಟ್ 23 ನ್ನು ಪ್ರಧಾನಿ ಮೋದಿ ಅವರು ಅಂತರಾಷ್ಟ್ರೀಯ ಬಾಹ್ಯಕಾಶ ದಿನ ಎಂದು   ಘೋಷಿಸಿದ್ದಾರೆ. 

Kodagu Government school teachers who took the students to space gvd

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಆ.24): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ರನ್ನು ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ಆಗಸ್ಟ್ 23 ನ್ನು ಪ್ರಧಾನಿ ಮೋದಿ ಅವರು ಅಂತರಾಷ್ಟ್ರೀಯ ಬಾಹ್ಯಕಾಶ ದಿನ ಎಂದು   ಘೋಷಿಸಿದ್ದಾರೆ. ಈ ಬಾಹ್ಯಾಕಾಶ ದಿನಾಚರಣೆಗಾಗಿ ಈ ಶಾಲೆಯಲ್ಲಿ ಬಾಹ್ಯಕಾಶವನ್ನೇ ತರಗತಿಗೆ ಇಳಿಸಿದ್ದಾರೆ. ಹೌದು ಅದು ಬೇರೆ ಎಲ್ಲೂ ಅಲ್ಲ, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮುಳ್ಳೂರು ಶಾಲೆಯಲ್ಲಿ. ಬಾಹ್ಯಾಕಾಶವನ್ನು ಭೂಮಿ ಅಥವಾ ಶಾಲೆಗೆ ಇಳಿಸಲು ಸಾಧ್ಯವೇ ಎನ್ನುವ ಅನುಮಾನ ಅಚ್ಚರಿ ಕಾಡುತ್ತದೆ ಅಲ್ವಾ ಆದರೂ ಅದು ನಿಜವೇ..! ಹಾಗಾದ್ರೆ ಶಾಲೆಗೆ ಇಳಿದ ಬಾಹ್ಯಾಕಾಶ ಹೇಗಿದೆ ಅಂತ್ತೀರಾ. ಇಲ್ಲಿದೆ ನೋಡಿ ಆ ಕುರಿತ ಒಂದು ಸ್ಪೇಷಲ್ ರಿಪೋರ್ಟ್. 

ಶಾಲಾ ಬಾಗಿಲಲ್ಲೇ ಬಾಹ್ಯಾಕಾಶಕ್ಕೆ ಸ್ವಾಗತ,  ಅದನ್ನು ಪ್ರವೇಶಿಸಿ ತಲೆಎತ್ತಿದರೆ ಸಾಕು ಮಿನುಗುವ ನಕ್ಷತ್ರಗಳ ರಾಶಿ, ಹೊಳೆಯುವ ಚಂದ್ರನಿದ್ದ ಆಕಾಶ ಹೊಳೆಯುತಿತ್ತು. ತರಗತಿಯ ಒಂದು ಭಾಗದಲ್ಲಿ ಚಂದ್ರನ ಅಂಗಳಕ್ಕೆ ಜಿಗಿಯಲು ಸಿದ್ಧಗೊಂಡಿರುವ ರಾಕೆಟ್ ಹೌದು ಹಿಗೋಂದು ದೃಶ್ಯ ಕಂಡು ಬಂದಿದ್ದು ಇದೇ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಹೀಗೆ ಬಾಹ್ಯಾಕಾಶವನ್ನೆ ಧರೆಗಿಳಿಸಿದವರು ಯಾವುದೋ ಸಂಶೋಧಕ ಅಥವಾ ವಿಜ್ಞಾನಿ ಅಲ್ಲ. ಸರ್ಕಾರಿ ಶಾಲೆಯ ಒಬ್ಬ ಮುಖ್ಯ ಶಿಕ್ಷಕ ಸತೀಶ್. ಹಲವು ವರ್ಷಗಳಿಂದ ಇದೇ ಶಾಲೆಯಲ್ಲಿ ಶಿಕ್ಷಕರಾಗಿರುವ ಸತೀಶ್ ಶಾಲೆಯಲ್ಲಿ ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಇದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿದ್ದು, 25 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯ ವಿಜ್ಞಾನ ಪ್ರಯೋಗಾಲಯವನ್ನೇ ಅಂತರಿಕ್ಷವಾಗಿಸಿದ್ರು. ಶಿಕ್ಷಕ ಸತೀಶ್ ಅವರು ಈ  ಅಂತರಿಕ್ಷದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳು ಧೂಮಕೇತು ಉಲ್ಕೆಗಳು ಎಲ್ಲವನ್ನ ನಿರ್ಮಿಸಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಕುರಿತಾದ ಎಲ್ಲಾ ವಿಷಯಗಳನ್ನು ಮನದಟ್ಟಾಗುವಂತೆ ಮಾಡಿದ್ರು. ಚಂದ್ರಯಾನ, ಉಪಗ್ರಹಗಳ ಕಾರ್ಯವೈಖರಿ, ಸೂರ್ಯ ಚಂದ್ರ ನಕ್ಷತ್ರ ಗ್ರಹಗಳ ಕುರಿತಾದ ಕೌತುಕ ವಿಷಯಗಳನ್ನು ತಿಳಿಸಿಕೊಟ್ಟರು. ಜೊತೆಗೆ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ರಾಕೆಟ್ ತಯಾರಿಸಿ ಚಂದ್ರಯಾನ ಕುರಿತಾದ ರಸಪ್ರಶ್ನೆ, ಚಿತ್ರಕಲೆ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಸಂಭ್ರಮಿಸಿದರು. ವಿದ್ಯಾರ್ಥಿಗಳು ಕೃತಕ ರಾಕೆಟ್ ಹಾರಿಸಿ ಆನಂದಿಸಿದರು. 

ಮತ್ತೊಂದು ಅವತಾರ ಎತ್ತಿ ಬಂದ ನಟ ರಾಕ್ಷಸ: ಗನ್​ಗಳ ಮಧ್ಯೆ ಮೈಕ್ ಹಿಡಿದು ಬಂದ ಡಾಲಿ ಧನಂಜಯ್

ಇದೇ ಸಂದರ್ಭದಲ್ಲಿ  ಎ ಪಿ ಜೆ ಅಬ್ದುಲ್ ಕಲಾಂ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಇವರ ಅಂತರಿಕ್ಷದಲ್ಲಿಯ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಪ್ರೊಜೆಕ್ಟರ್ ಮೂಲಕ ಚಂದ್ರಯಾನ ಯಶಸ್ವಿಯಾದ ವಿಡಿಯೋ ತುಣುಕುಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ಚಂದ್ರಯಾನ 3 ರ ಬಗ್ಗೆ ಅರಿವು ಮೂಡಿಸಲಾಯಿತು. ಶಿಕ್ಷಕ ಸತೀಶ್ ಗೆ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಾನ್ ಪೌಲ್ ಡಿಸೋಜ ಹಾಗೂ ಶಾಲಾ ಶಿಕ್ಷಕಿ ಶೀಲಾ ಕೂಡ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಹಕಾರ ನೀಡಿ ಯಶಸ್ವಿಗೊಳಿಸಿದ್ರು. ಒಟ್ಟಿನಲ್ಲಿ ಸರ್ಕಾರಿ ಶಾಲೆ ಎಂದರೆ ಪೋಷಕರು ಮೂಗು ಮುರಿಯುವ ಇಂದಿನ ದಿನಗಳಲ್ಲೂ ವಿದ್ಯಾರ್ಥಿಗಳಿಗೆ ಹೊಸ ಹೊಸ ಪ್ರಯೋಗಗನ್ನೂ ಮಾಡಿ ಪಾಠ ಮಾಡುವ ಮೂಲಕ ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಭವಿಷ್ಯದ ವಿಜ್ಞಾನಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

Latest Videos
Follow Us:
Download App:
  • android
  • ios