ರಾಷ್ಟ್ರೀಯ ಹೆದ್ದಾರಿ 275ರ ವಿಸ್ತರಣೆಗೆ ಮನೆ, ಭೂಮಿ ಕಳೆದುಕೊಳ್ಳುತ್ತಿರೋ ನೂರಾರು ರೈತರು, ಪರಿಹಾರ ಸಿಗದೆ ಕಣ್ಣೀರು
ಮೈಸೂರಿನಿಂದ ಮಂಗಳೂರಿಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275 ಅನ್ನು ಮತ್ತಷ್ಟು ಅಗಲೀಕರಣ ಮಾಡುವ ಸಲುವಾಗಿ ನೂರಾರು ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ದಾಖಲೆಗಳ ಸಮಸ್ಯೆಯಿಂದ ಪರಿಹಾರ ಸಿಗದೆ ಜನರು ಕಣ್ಣೀರು ಹಾಕುತ್ತಿದ್ದಾರೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.17): ಮೈಸೂರಿನಿಂದ ಮಂಗಳೂರಿಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275 ಅನ್ನು ಮತ್ತಷ್ಟು ಅಗಲೀಕರಣ ಮಾಡಿ ಸುಧಾರಣೆ ಮಾಡುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ನಿರ್ಧರಿಸಿ ಭೂಮಿಯನ್ನು ಗುರುತ್ತಿಸಿದೆ. ಆದರೆ ನೂರಾರು ರೈತರಿಗೆ ಸಿಗಬೇಕಾಗಿರುವ ಪರಿಹಾರ ಸರಿಯಾಗಿ ದೊರೆತ್ತಿಲ್ಲ. ಹೀಗಾಗಿ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು, ಬಸವನಹಳ್ಳಿ ಸೇರಿದಂತೆ ಮಡಿಕೇರಿವರೆಗಿನ ಹಲವು ಹಳ್ಳಿಗಳ ನೂರಾರು ರೈತರು ಈಗ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ.
ಈಗಾಗಲೇ ಮೈಸೂರಿನಿಂದ ಮಂಗಳೂರಿಗೆ ಕುಶಾಲನಗರ ಮಾರ್ಗವಾಗಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಮೈಸೂರಿನಿಂದ ಕುಶಾಲನಗರದವರೆಗೆ ಚತುಶ್ಪಥ ರಸ್ತೆಯನ್ನಾಗಿ ಪರಿವರ್ತಿಸಲು ಆದೇಶವಾಗಿದ್ದು ರಸ್ತೆ ಅಗಲೀಕರಣಕ್ಕಾಗಿ ಜಾಗದ ಗಡಿಯನ್ನು ಗುರುತ್ತಿಸಲಾಗಿದೆ. ಇದರಿಂದ ನೂರಾರು ರೈತರ ಭೂಮಿ, ಮನೆಗಳು ಹೆದ್ದಾರಿಗೆ ಹೋಗುತ್ತಿವೆ. ಇವರಲ್ಲಿ ಪಕ್ಕಾ ದಾಖಲೆಗಳಿರುವ ಮನೆ ಹಾಗೂ ಭೂಮಿಗೆ ಒಂದಷ್ಟು ಪರಿಹಾರ ಘೋಷಿಸಲಾಗಿದೆ.
32ರ ಹರೆಯದ ಲಿಂಗಸೂರು ಶಾಸಕ ಮಾನಪ್ಪ ವಜ್ಜಲ್ ಪುತ್ರ ಹೃದಯಾಘಾತದಿಂದ ನಿಧನ!
ಎಲ್ಲಾ ದಾಖಲೆಗಳಿರುವ ರೈತರ ಭೂಮಿಗೆ ಏಕರೆಗೆ 8 ಲಕ್ಷದಂತೆ ಪರಿಹಾರ ಘೋಷಿಸಿ ಅದಕ್ಕೆ ಮೂರುಪಟ್ಟು ಪರಿಹಾರ ನೀಡುವ ಭರವಸೆ ನೀಡಲಾಗಿದೆ. ಆದರೆ ಇದುವರೆಗೆ ಪರಿಹಾರ ದೊರೆತ್ತಿಲ್ಲ. ಭೂಮಿ ಹಾಗೂ ಮನೆಗಳಿಗೆ ಕೇವಲ ಹಕ್ಕುಪತ್ರಗಳು ಅಥವಾ ಸಾಗುವಳಿಗಳು ಇದ್ದರೆ ಅಂತಹ ರೈತರಿಗೆ ಹಾಗೂ ಮನೆಗಳ ಮಾಲೀಕರಿಗೆ ನಯಾಪೈಸೆ ಪರಿಹಾರ ಘೋಷಿಸಿಲ್ಲ. ಬದಲಾಗಿ ಅವರ ಅರ್ಜಿಗಳು ಎಸಿ, ಡಿಸಿ, ಮೈಸೂರು ಹಾಗೂ ಡೆಲ್ಲಿ ಅಂತ ವಿವಿಧ ಕಚೇರಿಗಳಲ್ಲಿ ಇವೆ.
ಹೀಗಾಗಿ ಇತ್ತೀಚೆಗೆ ಕುಶಾಲನಗರ ತಾಲ್ಲೂಕಿನ ಗುಡ್ಡೇಹೊಸೂರಿನಲ್ಲಿ ಕೊಡಗು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿವತಿಯಿಂದ ಸಾರ್ವಜನಿಕ ಸಭೆ ನಡೆಸಿ ಜನರಿಂದ ನಿರಪೇಕ್ಷಣ ಪಡೆಯಲು ಪ್ರಯತ್ನಿಸಲಾಗಿದೆ.
ಬೆಂಗಳೂರು: ಹೊಸ ಪಾರ್ಕಿಂಗ್ ವ್ಯವಸ್ಥೆ ಸದ್ಯಕ್ಕಿಲ್ಲ, ಬಿಬಿಎಂಪಿ ಸ್ಪಷ್ಟನೆ
ಈ ಸಭೆಯಲ್ಲೇ ಜನರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ವಿವಿಧ ಅಹವಾಲುಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳ ಹಿಂದೆಯಷ್ಟೇ ಕೆಲವು ಬಡಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಅದಾದ ಮೇಲೆ ನಮಗೆ ಹಕ್ಕುಪತ್ರ ಪಡೆದುಕೊಳ್ಳುವುದು ಹೇಗೆ ಎನ್ನುವುದೇ ಗೊತ್ತಾಗಲಿಲ್ಲ. ಅಷ್ಟರಲ್ಲೇ ಕಳೆದ ಮೂರು ವರ್ಷಗಳ ಹಿಂದಿನಿಂದಲೂ ನಮಗೆ ಯಾವುದೇ ಬೆಳೆ ಬೆಳೆಯುವುದಕ್ಕೂ ಬಿಡಲಿಲ್ಲ. ಮನೆಗಳ ಮೇಲೆಯೂ ಏನೂ ಮಾಡುವುದಕ್ಕೂ ಬಿಡಲಿಲ್ಲ. ಈಗ ಯಾವುದೇ ಪರಿಹಾರವೂ ಸಿಕ್ಕಿಲ್ಲ, ಅಧಿಕಾರಿಗಳನ್ನು ಕೇಳಿದರೆ ದಾಖಲೆಗಳಿಲ್ಲ ಎನ್ನುತ್ತಾರೆ.
ಹಾಗಾದರೆ ನಮಗೆ ಹಕ್ಕುಪತ್ರವನ್ನಾದರೂ ಏಕೆ ಕೊಟ್ಟರು. ಇರುವ ಮನೆ, ತುಂಡು ಭೂಮಿಯನ್ನು ಕಳೆದುಕೊಂಡು ನಾವು ಎಲ್ಲಿಗೆ ಹೋಗಬೇಕು ಎನ್ನುವುದು ಭೂಮಿ ಕಳೆದುಕೊಂಡು ದಾಖಲೆಗಳು ಸರಿಯಿಲ್ಲದೆ ಭೂಮಿ ಕಳೆದುಕೊಂಡರೂ ಪರಿಹಾರವೂ ದೊರಕೆ ಪರದಾಡುತ್ತಿರುವ ದಿವ್ಯಾ ಅವರ ಪ್ರಶ್ನೆ. ಮತ್ತೊಂದೆಡೆ ರಸ್ತೆ ಬದಿಗಳಲ್ಲಿ ಕೋಟಿ ಕೋಟಿ ಬಂಡವಾಳ ಹೂಡಿ ಭೂಮಿಯನ್ನು ಖರೀದಿ ವಾಣಿಜ್ಯ ಉದ್ದೇಶಗಳಿಗಾಗಿ ಕಾಯ್ದಿರಿಸಿಕೊಂಡಿದ್ದ ಜನರಿಗೂ ಏಕರೆ 8 ಸಾವಿರದಂತೆ ಬೆಲೆ ನಿಗಧಿ ಮಾಡಿರುವುದರಿಂದ ಸಾಕಷ್ಟು ಜನರು ದಿಕ್ಕುತೋಚದಂತೆ ಆಗಿದೆ. ಇನ್ನಷ್ಟು ಕುಟುಂಬಗಳು ಇರುವ ಭೂಮಿಯನ್ನು ನಂಬಿ ಹೇಗೆ ಜೀವನ ಮಾಡುತ್ತಿದ್ದರು.
ಆದರೀಗ ಭೂಮಿ ಕಳೆದುಕೊಂಡು ಇವರು ಕೊಡುವ ಹಣವನ್ನು ಹರಿದು ಹಂಚಿಕೊಂಡು ಏನು ಮಾಡಬೇಕೆಂದು ದಿಕ್ಕುತೋಚದಂತೆ ಆಗಿದೆ ಎನ್ನುತ್ತಿದ್ದಾರೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಭೂಮಿ ಕಳೆದುಕೊಂಡಿರುವ ಪ್ರದೀಪ್. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಪರಿಹಾರವೂ ಸಿಗದೆ ಕಂಗಾಲಾಗುವಂತೆ ಆಗಿದೆ.