Asianet Suvarna News Asianet Suvarna News

ಕ್ಷೇತ್ರದ ಅಭಿವೃದ್ಧಿಗೆ ಕೈ ನಾಯಕ ರಾಜಣ್ಣರನ್ನು ಗೆಲ್ಲಿಸಿ :BJP ಸಂಸದ

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಶಾಸಕರಾಗಿದ್ದಾಗ ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸಿದ್ದರು. ಆ ನಿಟ್ಟಿನಲ್ಲಿ ಮತ್ತೆ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕೆಲಸ ಮಾಡುವ ಕೆ.ಎನ್‌.ರಾಜಣ್ಣರನ್ನು ಗೆಲ್ಲಿಸುವಂತೆ ತುಮಕೂರು ಬಿಜೆಪಿ ಸಂಸದ ಜಿ.ಎಸ್‌.ಬಸವರಾಜು ಕರೆ ನೀಡಿದರು.

KN Rajanna Should win in Tumakur says GS Basavaraju snr
Author
First Published Jan 9, 2023, 5:53 AM IST

 ಮಧುಗಿರಿ (ಜ. 09 ):  ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಶಾಸಕರಾಗಿದ್ದಾಗ ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸಿದ್ದರು. ಆ ನಿಟ್ಟಿನಲ್ಲಿ ಮತ್ತೆ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕೆಲಸ ಮಾಡುವ ಕೆ.ಎನ್‌.ರಾಜಣ್ಣರನ್ನು ಗೆಲ್ಲಿಸುವಂತೆ ತುಮಕೂರು ಬಿಜೆಪಿ ಸಂಸದ ಜಿ.ಎಸ್‌.ಬಸವರಾಜು ಕರೆ ನೀಡಿದರು.

ಶನಿವಾರ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಸುದ್ದೇ ಕುಂಟೆಯಲ್ಲಿ ನಡೆದ ಶ್ರೀ ವೇಣು ಗೋಪಾಲಸ್ವಾಮಿ ದೇಗುಲದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬರಪೀಡಿತ ಪ್ರದೇಶ ಮಧುಗಿರಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಈ ಹಿಂದೆ ಶಾಸಕರಾಗಿದ್ದ ಕೆ.ಎನ್‌.ರಾಜಣ್ಣ ಸಾಕಷ್ಟುಕೆಲಸ ಮಾಡಿದ್ದು, ಕ್ಷೇತ್ರದ ಚಿತ್ರಣವೇ ಬದಲಾಗಿ

ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮಾದರಿ ಕ್ಷೇತ್ರ ಮಾಡಿದ್ದರು. ನಮ್ಮದು ಟೀಕಿಸುವ ಜಾಯಮಾನದವರಲ್ಲ. ಶ್ರೀಸಾಮಾನ್ಯರ ಕೆಲಸ ಕಾರ್ಯ ಮಾಡುವುದೇ ನಮ್ಮ ಗುರಿ. ನಾನು,ಕೆ.ಎನ್‌.ರಾಜಣ್ಣ ಸೇರಿ ನೀರಾವರಿ ಯೋಜನೆ ಜಾರಿಗೆ ಚಿಂತನೆ ನಡೆಸಿದ್ದೇವೆ. ಆದ್ದರಿಂದ ಕೆಲಸ ಮಾಡುವ ವ್ಯಕ್ತಿಯನ್ನು ಆರಿಸಿ ಕಳಿಸಿ. ರಾಜಣ್ಣನ ಸಹಕಾರದಿಂದ ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಗೆದ್ದ ನಂತರ ಇದೇ ಮೊದಲ ಬಾರಿ ವೇದಿಕೆ ಹಂಚಿಕೊಂಡಿದ್ದೇನೆ ಎಂದು ಸಂಸದ ಬಸವರಾಜು ಕೆ.ಎನ್‌.ರಾಜಣ್ಣ ಪರ ಬ್ಯಾಟಿಂಗ್‌ ಮಾಡಿದರು.

ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಮಾತನಾಡಿ, ಮುಂದಿನ ಪೀಳಿಗೆಗೆ ಒಳಿತು ಮಾಡಲು ಸಮುದಾಯದ ಜನರು ಸಂಘಟಿತರಾಗಬೇಕು. ಇದರಿಂದ ಸಮಾಜಕ್ಕೆ, ದೇಶಕ್ಕೆ ಹಾಗೂ ಜನಾಂಗಕ್ಕೆ ಉತ್ತಮ ಗೌರವ ಬರುತ್ತದೆ. ನಾನು ಸೋಲಲು ಅರಿಶಿಣ , ಕುಂಕುಮ ಕಾರಣವಾಯಿತು. ಈ ಬಗ್ಗೆ ನನಗೆ ಬೇಸರವಿಲ್ಲ, ನನ್ನ ಸೋಲಿನಿಂದ ನನಗೆ ನಷ್ಟವಾಗಿಲ್ಲ, ಜನಪರ ಕೆಲಸಗಳು ಕುಂಠಿತವಾಗಿವೆ. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಆಶೀರ್ವಾದ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಆಂಧ್ರಪ್ರದೇಶದ ಮಾಜಿ ಸಚಿವ ಎನ್‌. ರಘುವೀರರೆಡ್ಡಿ ಮಾತನಾಡಿ, ರಾಜಣ್ಣನ ಸೋಲಿನಿಂದ ಮಧುಗಿರಿ ಕ್ಷೇತ್ರಕ್ಕೆ ಸಾಕಷ್ಟುನಷ್ಟಉಂಟಾಗಿದೆ. ಮತ್ತೆ ಚುನಾವಣೆ ಬಂದಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ರಾಜಣ್ಣನನ್ನು ಗೆಲ್ಲಿಸಿ ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆದಿನಾರಾಯಣ ರೆಡ್ಡಿ, ಮಲ್ಲಿಕಾರ್ಜುನಯ್ಯ, ಯಾದವ ಸಮಿತಿಯ ಅಧ್ಯಕ್ಷ ನರಾಯಣಗೌಡ, ಗ್ರಾಪಂ ಅಧ್ಯಕ್ಷ ಮಂಜುನಾಥ್‌ರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ರಾಜಮೋಹನ್‌,ಯಾದವ ಸಮಾಜದ ಮುಖಂಡರಾದ ಮೂಡ್ಲಗಿರೀಶ್‌, ಪ್ರೊ.ಸಿ.ಕೃಷ್ಣಪ್ಪ, ಲಕ್ಷ್ಮೇನರಸೇಗೌಡ, ಲಕ್ಷ್ಮೇರಂಗಯ್ಯ ಸೇರಿದಂತೆ ಅನೇಕರಿದ್ದರು.

ಈ ಹಿಂದೆ ನಾನು ಸೋತಾಗ ಮಧುಗಿರಿಯಿಂದ 22 ಸಾವಿರ ಮತ ನೀಡಿದ್ದು, ಈ ಸಲ ಗೆದ್ದಾಗ 71 ಸಾವಿರ ಮತಗಳನ್ನು ಕೊಟ್ಟಿದ್ದೀರಾ. ಇದು ರಾಜಣ್ಣರ ಮೇಲಿನ ಪ್ರೀತಿ, ವಿಶ್ವಾಸ ಎಂದು ಭಾವಿಸಿದ್ದೇನೆ. ಹಣ, ಸೀರೆ, ಅರಿಶಿನ, ಕುಂಕುಮ ಕೊಡುವವರನ್ನು ದೂರವಿಟ್ಟು ಕೆಲಸ ಮಾಡುವ ವ್ಯಕ್ತಿ ರಾಜಣ್ಣನನ್ನು ಗೆಲ್ಲಿಸಿ. ನಾನು ಒಂದು ಪಕ್ಷ, ರಾಜಣ್ಣ ಒಂದು ಪಕ್ಷ. ಆದರೆ ನಾವಿಬ್ಬರು ಕೆಲಸ ಮಾಡುವ ವ್ಯಕ್ತಿಗಳು. ಆದ್ದರಿಂದ ಈ ಸಲ ಎಲ್ಲರೂ ಒಟ್ಟಾಗಿ ಕೆ.ಎನ್‌.ರಾಜಣ್ಣರನ್ನು ಗೆಲ್ಲಿಸಿ.

ಜಿ.ಎಸ್‌.ಬಸವರಾಜು ಬಿಜೆಪಿ ಸಂಸದ

ಬಿಜೆಪಿ ಟೆಂಡರ್ ರದ್ದು

ಬೆಂಗಳೂರು   ಇನ್ನು 60 ದಿನಗಳು ಕಳೆದ ಬಳಿಕ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಸರ್ಕಾರ ಪ್ರಸ್ತುತ ತರಾತುರಿಯಲ್ಲಿ ಮಾಡುತ್ತಿರುವ ಎಲ್ಲ ಟೆಂಡರ್‌ಗಳನ್ನೂ ಮರು ಪರಿಶೀಲನೆ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ಇರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Karnataka Politics: ಡಿ.ಕೆ.ಶಿವಕುಮಾರ್ ಯಾರಿಗೆ ಚಹಾ ಕೊಡುತ್ತಿದ್ದರೆಂದು ತಿಳಿದುಕೊಳ್ಳಲಿ: ಸಚಿವ ಪ್ರಹ್ಲಾದ್‌ ಜೋಶಿ

ಭಾನುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಆಡಳಿತ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತರಾತುರಿಯಲ್ಲಿ ಅನೇಕ ಯೋಜನೆಗಳಿಗೆ ಟೆಂಡರ್‌ ಕರೆಯಲು ಹೊರಟಿದೆ. ನಾನು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುತ್ತೇನೆ. ಅಧಿಕಾರಿಗಳು ಯಾರದ್ದೋ ಏಜೆಂಟ್‌ಗಳಾಗಬೇಡಿ. ಗುತ್ತಿಗೆದಾರರು ಸುಮ್ಮನೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ. ಇನ್ನು 60 ದಿನಗಳು ಕಳೆದ ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಆ ಎಲ್ಲ ಟೆಂಡರ್‌ಗಳ ಅಂದಾಜು ಮೊತ್ತವನ್ನು ಮರು ಪರಿಶೀಲನೆ ಮಾಡಿಸುತ್ತೇವೆ ಎಚ್ಚರವಿರಲಿ’ ಎಂದು ಹೇಳಿದರು.

Karnataka Assembly election: ಕಾಂಗ್ರೆಸ್‌ನಿಂದ ಪ್ರತ್ಯೇಕ ಮಹಿಳಾ ಪ್ರಣಾಳಿಕೆ ಸಿದ್ಧ: ಡಿ.ಕೆ. ಶಿವಕುಮಾರ್

ಜ.16ಕ್ಕೆ ನಾ ನಾಯಕಿ ಕಾರ್ಯಕ್ರಮ:

ರಾಜ್ಯ ಮಹಿಳಾ ಕಾಂಗ್ರೆಸ್‌ನಿಂದ ಆಯೋಜಿಸಿರುವ ‘ನಾ ನಾಯಕಿ’ ವಿಶೇಷ ಮಹಿಳಾ ಸಮಾವೇಶವನ್ನು ಕಾರಣಾಂತರಗಳಿಂದ ಜ.16ಕ್ಕೆ ಮುಂದೂಡಲಾಗಿದೆ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್‌ ತಿಳಿಸಿದರು.
ನಾ ನಾಯಕಿ ಕಾರ್ಯಕ್ರಮಕ್ಕೆ ಪ್ರಿಯಾಂಕ ಗಾಂಧಿ ಬರುತ್ತಾರಾ ಎಂಬ ಪ್ರಶ್ನೆಗೆ, ಯಾವೆಲ್ಲಾ ರಾಷ್ಟ್ರೀಯ ನಾಯಕರು ಬರುತ್ತಾರೆ ಎಂಬ ಬಗ್ಗೆ ಶೀಘ್ರದಲ್ಲೇ ಗೊತ್ತಾಗಲಿದೆ. ಬಳಿಕ ಮಾಹಿತಿ ನೀಡುತ್ತೇವೆ. ಪ್ರತಿ ಬೂತ್‌ನಿಂದ ಮಹಿಳಾ ಕಾರ್ಯಕರ್ತರನ್ನು ಕರೆತರುತ್ತೇವೆ. ಸಮಾವೇಶವನ್ನು ಯಶಸ್ವಿಗೊಳಿಸಲು ನಾನು ಕೂಡ ಜೂಮ್‌ ಮೀಟಿಂಗ್‌ ನಡೆಸುತ್ತಿದ್ದು ಎಲ್ಲಾ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.

Follow Us:
Download App:
  • android
  • ios