Milk Price Hike: ಕೆಎಂಎಫ್‌ನಿಂದ ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಕೆ!

ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ‌ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕಾರ್ಮಿಕರಿಗೆ ಸಿಹಿ ಹಂಚುವ ಮೂಲಕ ಕೆಎಂಎಫ್ ಅರ್ಥಪೂರ್ಣವಾಗಿ ವಿಶ್ವ ಹಾಲು ದಿನಾಚರಣೆ ಆಚರಿಸಲಾಯಿತು. 

Kmf Proposes 5 rupees Hike In Milk Price Per Liter gvd

ಬೆಂಗಳೂರು (ಜೂ.02): ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ‌ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕಾರ್ಮಿಕರಿಗೆ ಸಿಹಿ ಹಂಚುವ ಮೂಲಕ ಕೆಎಂಎಫ್ ಅರ್ಥಪೂರ್ಣವಾಗಿ ವಿಶ್ವ ಹಾಲು ದಿನಾಚರಣೆ ಆಚರಿಸಲಾಯಿತು. ಇದೇ ವೇಳೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ‌ ರೈಲುಗಳ ಮೂಲಕ ನಂದಿನಿ ಉತ್ಪನ್ನಗಳ ಜಾಹೀರಾತಿಗೆ ವ್ಯವಸ್ಥಾಪಕ ನಿರ್ದೇಶಕರಾದ ಬಿಸಿ ಸತೀಶ್ ಚಾಲನೆ‌ ನೀಡಿದರು.  ಈ‌ವೇಳೆ ಮಾತನಾಡಿದ ಅವರು ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಇದೇ ಮೊದಲ ಭಾರಿಗೆ ರೈಲುಗಳ ‌ಮೂಲಕ ನಂದಿನಿ ಉತ್ಪನ್ನಗಳ  ಜಾಹೀರಾತು ನೀಡುತ್ತಿದ್ದೇವೆ. ಈ ಮೂಲಕ ಉತ್ಪನ್ನಗಳ ಪ್ರಚಾರ ಇನ್ನಷ್ಟು ಹೆಚ್ಚಾಗಲಿದೆ ಎಂದರು.

ಇನ್ನೂ ಕೆಎಂಎಫ್ ಜೊತೆಯಲ್ಲಿ ದಶಕಗಳಿಂದ ಸುಮಾರು 26 ಲಕ್ಷ ರೈತರು ಹಾಗೂ 2 ಲಕ್ಷ ಶ್ರಮಿಕ ವರ್ಗದವರು ಇದ್ದು, ಯಾವಾಗಲೂ ಕೆಎಂಎಫ್ ಶ್ರಮಿಕರ ಜೊತೆ ಇದೆ ಅನ್ನೋದನ್ನ ಶ್ರಮಿಕರಿಗೆ ಸಿಹಿ ಹಂಚುವ ‌ಮೂಲಕ ಕೆಎಂಎಫ್ ತೋರಿಸಿದೆ. ಅಲ್ಲದೆ ವಿಶ್ವ ಹಾಲು ದಿನಾಚರಣೆಯನ್ನ 2021 ರಲ್ಲೂ ಆಚರಣೆ ‌ಮಾಡಲಾಗಿತ್ತು. ರಾಜ್ಯದ ಎಂ.ಕೃಷ್ಣಪ್ಪನವರು ಹೈನುಗಾರಿಕೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ ಅಂತ ಕೆಎಂಎಫ್ ವ್ಯವಸ್ಥಾಪಕ ‌ನಿರ್ದೇಶಕ ಸತೀಶ್ ಹೇಳಿದರು.

Milk Price Hike ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ, ಲೀಟರ್‌ ಹಾಲು 3 ರು. ದುಬಾರಿ?

ಹಾಲಿನ ದರ ಏರಿಕೆ ಆಗುತ್ತಾ?: ಪ್ರತಿ ಲೀಟರ್ ಹಾಲಿನ ಮೇಲೆ 5 ರೂ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಸಿಎಂ ಅವರನ್ನ ಭೇಟಿ ಮಾಡಿ ದರ ಹೆಚ್ಚಳ‌ ಮಾಡುವಂತೆ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಕೂಡ ಮನವಿ‌ ಮಾಡಿದ್ದಾರೆ. ಅಲ್ಲದೆ ಸೂಕ್ತ ಸಮಯದಲ್ಲಿ ದರ ಏರಿಕೆ ‌ಪ್ರಸ್ತಾಪವನ್ನ ನಾವು ಕೂಡ ಮಾಡುತ್ತೇವೆ. ಇತರೆ ಹಾಲಿನ ಮಹಾ ಮಂಡಳಿಗಳ ಬೆಲೆ 10 ರಿಂದ 12 ರಷ್ಟು ದರ ಹೆಚ್ಚಿಸಿದೆ. ಹೀಗಾಗಿ ದರ ಹೆಚ್ಚಳದಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಅಂತ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿಸಿ ಸತೀಶ್ ತಿಳಿಸಿದರು.

NCDFY: ಕೆಎಂಎಫ್‌ಗೆ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಗರಿ

ಪವರ್ ಸ್ಟಾರ್ ಅಪ್ಪು ಅನಘ್ರ್ಯ ರತ್ನ: ಕೆಎಂಎಫ್‌ ನಂದಿನಿ ರಾಯಭಾರಿಯಾಗಿದ್ದ ನಟ ದಿವಂತ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿದ್ದರೂ ಅವರ ನೆನಪು ಜನರ ಹೃದಯದಲ್ಲಿ ಶಾಶ್ವತವಾಗಿರುತ್ತದೆ. ಅವರು ಕರ್ನಾಟಕದ ಅನಘ್ರ್ಯ ರತ್ನ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.  ಕೆಎಂಎಫ್‌ ಬೆಳವಣಿಗೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪಾತ್ರ ಹಿರಿದಾಗಿತ್ತು. ಕೆಎಂಎಫ್‌ ರಾಜ್ಯದ ಎಲ್ಲ ವರ್ಗಗಳ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ರುಚಿ, ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಒದಗಿಸುತ್ತಿದೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿಯೂ ನಮ್ಮ ನಂದಿನಿ ಬ್ರ್ಯಾಂಡ್‌ ಗ್ರಾಹಕರ ಆಯ್ಕೆಯಾಗಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios