Asianet Suvarna News Asianet Suvarna News

ಮೂವತ್ತಡಿ ಆಳದ ಬಾವಿಗೆ ಬಿದ್ದಿದ್ದ ಬೆಕ್ಕಿನಮರಿ: ಅಗ್ನಿಶಾಮಕದಳದಿಂದ ರಕ್ಷಣಾ ಕಾರ್ಯ ಯಶಸ್ವಿ

ಮೂವತ್ತು ಅಡಿ ಅಳದ ತೆರೆದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ಸುರಕ್ಷಿತವಾಗಿ ಕಾರ್ಯಚಾರಣೆ ನಡೆಸಿ ಜೀವ ಉಳಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

Kitten fell into a well Rescue work by fire brigade was successfu  at chikkamagaluru rav
Author
First Published Mar 3, 2023, 12:31 PM IST

ಚಿಕ್ಕಮಗಳೂರು (ಮಾ.3): ಮೂವತ್ತು ಅಡಿ ಅಳದ ತೆರೆದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ಸುರಕ್ಷಿತವಾಗಿ ಕಾರ್ಯಚಾರಣೆ ನಡೆಸಿ ಜೀವ ಉಳಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ಓಡುವಾಗ ಆಯಾತಪ್ಪಿ ಬಾವಿಗೆ ಬಿದ್ದಿದ್ದ ಪುಟ್ಟ ಬೆಕ್ಕೊಂದನ್ನ ಅಗ್ನಿಶಾಮಕ ಸಿಬ್ಬಂದಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ‌. ನಗರದ ಎಂ.ಜಿ.ರಸ್ತೆ(MG Road) ಬ್ಯೂಟೆಕ್ ಫ್ಯಾನ್ಸಿ ಸ್ಟೋರ್(Beautech Fancy Store) ಹಿಂಭಾಗದ ರಸ್ತೆಯಲ್ಲಿ ಓಡುವಾಗ ಬಾವಿಗೆ ಬಿದ್ದಿದೆ. ಬಾವಿಗೆ ಗ್ರಿಲ್ ಹಾಕಿ ಮುಚ್ಚಿದ್ದರೂ ಕೂಡ ಬೆಕ್ಕು ನೀರು ಇದ್ದ ಕಾರಣ ಬೆಕ್ಕಿಗೆ ಮೇಲೆ ಬರಲು ಸಾಧ್ಯವಾಗಿಲ್ಲ. ಬಾವಿಯಲ್ಲಿ ಒಂದೇ ಸಮನೆ ಕೂಗುತ್ತಿತ್ತು. ಇದನ್ನ ಗಮನಿಸಿದ ಸ್ಥಳಿಯರು ಬೆಕ್ಕನ್ನ ಮೇಲೆ ತರಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಇದ್ದಾಗಕ ತಕ್ಷಣ ಪ್ರಾಣಿ ದಯಾ ಸಂಘದ ಸದಸ್ಯರಿಗೆ ಕರೆ ಮಾಡಿದ್ದಾರೆ. ಅವರು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ.\

Wildllife: ಬಸರಿಕಟ್ಟೆಗ್ರಾಮಸ್ಥರಿಗೆ ಎದುರಾಯ್ತು ಕಾಡಾನೆ ಭೀತಿ

ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿ ರಕ್ಷಣೆ

 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಾಗ ಬೆಕ್ಕು ಕೂಗುತ್ತಿತ್ತು. ಬೆಕ್ಕಿನ ಅರ್ಧ ಭಾಗ ನೀರಿನಲ್ಲಿ. ಇನ್ನರ್ಧ ಭಾಗ ಮೇಲೆ ನೋಡುತ್ತಿತ್ತು. ಬಾವಿಯೊಳಗಿದ್ದ ಕಲ್ಲಿನ ಮೇಲೆ ಕಾಲು ಇಟ್ಟುಕೊಂಡು ಬದುಕಲು ಹೋರಾಡುತ್ತಿತ್ತು. ಆಗ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಆಕ್ಸಿಜನ್ ಕೂಡ ಇಲ್ಲದ ಸುಮಾರು 30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನ ರಕ್ಷಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬಸವರಾಜ್ ಹಿರೇಮಠ್ ಎಂಬುವರು ಸೊಂಟಕ್ಕೆ ಹಗ್ಗವನ್ನ ಕಟ್ಟಿಕೊಂಡು ಕೆಳಕ್ಕೆ ಇಳಿದಿದ್ದಾರೆ. ಪುಟ್ಟಿಗೆ ಮತ್ತೊಂದು ಹಗ್ಗ ಕಟ್ಟಿ ಅದನ್ನ ಬೆಕ್ಕಿಗಾಗಿ ಬಾವಿಗೆ ಬಿಟ್ಟಿದ್ದಾರೆ. ಸಿಬ್ಬಂದಿ ಬಾವಿಯೊಳಗೆ ಇಳಿದು ಬೆಕ್ಕನ್ನ ಮತ್ತೊಂದು ಪುಟ್ಟಿಯಲ್ಲಿ ಮೇಲೆ ಕಳಿಸಿದ್ದಾರೆ. 30 ಅಡಿ ಆಳದ ಬಾವಿಯಲ್ಲಿ ಆಕ್ಸಿಜನ್ ಕೂಡ ಸರಿಯಾಗಿ ಇರಲಿಲ್ಲ. ಆಗ ಬಾವಿಯ ಮೇಲ್ಭಾಗ ಇದ್ದ ಅಗ್ನಿಶಾಮಕದ ಇತರೆ ಸಿಬ್ಬಂದಿ ಐದು ನಿಮಿಷಕ್ಕೊಮ್ಮೆ ಬಾವಿಯಳಕ್ಕೆ ವೇಗವಾಗಿ ಫ್ಯಾನ್ ಬಿಡುತ್ತಿದ್ದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೋಮಶೇಖರ್, ಉಮೇಶ್, ಮಂಜುನಾಥ್, ರವಿಚಂದ್ರ ಪಾಲ್ಗೊಂಡಿದ್ದರು.

Follow Us:
Download App:
  • android
  • ios