'ಬಿ.ಸಿ.ಪಾಟೀಲ ರಣಹೇಡಿ ಮಂತ್ರಿ, ಬಿಎಸ್ವೈ ಹೊಣಗೇಡಿ ಮುಖ್ಯಮಂತ್ರಿ'
ರೈತನ ಸಾವಿನ ಬಗ್ಗೆ ಹಗುರವಾದ ಮಾತುಗಳನ್ನಾಡುತ್ತಿರುವುದು ಕೃಷಿ ಸಚಿವ ಬಿ.ಸಿ. ಪಾಟೀಲ ಘನತೆಗೆ ತಕ್ಕುದಲ್ಲ| ಸಾಲವನ್ನು ತೀರಿಸಲಾಗದೇ ಕೃಷಿಕರು ಸಾವನ್ನಪ್ಪುತ್ತಿರುವುದನ್ನು ತಡೆಗಟ್ಟಬೇಕಾದ ಸಚಿವರೇ ಅವರ ಕುರಿತು ಹಗುರ ಮಾತುಗಳನ್ನಾಡಿರುವುದು ನಾಡಿನ ಅತ್ಯಂತ ದುರಂತದ ಸಂಗತಿ ಎಂದ ಕಿರಣ ಗಡಿಗೋಳ|
ಬ್ಯಾಡಗಿ(ಡಿ.05): ರೈತರನ್ನು ಹೇಡಿಗಳೆಂದು ಹೀಯಾಳಿಸಿ, ರೈತನ ಸಾವಿನ ಬಗ್ಗೆ ಹಗುರವಾದ ಮಾತುಗಳನ್ನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ, ರಾಜ್ಯ ಸಚಿವ ಸಂಪುಟದಲ್ಲಿರುವ ಒಬ್ಬ ರಣಹೇಡಿ ಮಂತ್ರಿಯಾಗಿದ್ದಾರೆ, ಇಂತಹ ಹೇಳಿಕೆಗಳಿಗೆ ಲಗಾಮು ಹಾಕಲಾಗದ ಬಿಎಸ್ವೈ ರಾಜ್ಯದ ಒಬ್ಬ ಹೊಣಗೇಡಿ ಮುಖ್ಯಮಂತ್ರಿ ಎಂದು ರೈತ ಮುಖಂಡ ಕಿರಣ ಗಡಿಗೋಳ ತಿರುಗೇಟು ನೀಡಿದ್ದಾರೆ.
ನಿನ್ನೆಯಷ್ಟೇ ಮಡಿಕೇರಿಯ ಪೊನ್ನಂಪೇಟೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಹೆಂಡತಿ ಮಕ್ಕಳನ್ನು ಸಾಕಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಹೇಡಿಗಳು ಎಂಬ ಹೇಳಿಕೆ ಕುರಿತು ಪಟ್ಟಣದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿ ಮಾತನಾಡಿದರು.
ಒಬ್ಬ ವ್ಯಕ್ತಿ ಸಾವನ್ನು ಅಷ್ಟಕ್ಕೂ ರೈತನ ಸಾವಿನ ಬಗ್ಗೆ ಹಗುರವಾದ ಮಾತುಗಳನ್ನಾಡುತ್ತಿರುವುದು ಕೃಷಿ ಸಚಿವ ಬಿ.ಸಿ. ಪಾಟೀಲ ಘನತೆಗೆ ತಕ್ಕುದಲ್ಲ, ಸಾಲವನ್ನು ತೀರಿಸಲಾಗದೇ ಕೃಷಿಕರು ಸಾವನ್ನಪ್ಪುತ್ತಿರುವುದನ್ನು ತಡೆಗಟ್ಟಬೇಕಾದ ಸಚಿವರೇ ಅವರ ಕುರಿತು ಹಗುರ ಮಾತುಗಳನ್ನಾಡಿರುವುದು ನಾಡಿನ ಅತ್ಯಂತ ದುರಂತದ ಸಂಗತಿ ಎಂದರು.
'ಮೋದಿ ಸರ್ಕಾರ ರೈತ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದೆ'
ಅತ್ತೂ ಕರೆದೂ ಸಚಿವ ಸ್ಥಾನ
ರೈತರ ಮೇಲೆ ಪ್ರಮಾಣ ಮಾಡಿದ ಮುಖ್ಯಮಂತ್ರಿಯಾಗಿರುವ ಬಿಎಸ್ವೈ ಅವರ ಸಚಿವ ಸಂಪುಟದ ಸದಸ್ಯರ ಬಾಯಿಂದ ಬಂದಂತಹ ಇಂತಹ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತೀರಾ? ಎಂದು ಸಿಎಂಗೆ ಪ್ರಶ್ನಿಸಿದ ಅವರು, ಅತ್ತೂ ಕರೆದೂ ಸಚಿವ ಸ್ಥಾನ ಪಡೆದ ಇಂತಹರಿಗೆ ಕೃಷಿ ಖಾತೆಯನ್ನು ನೀಡಿ ಬಿಎಸ್ವೈ ತಪ್ಪು ಮಾಡಿದ್ದಾರೆ ಎಂದರು.
ಸೋತಿದ್ದರೇ ಸಚಿವನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ
ಕಳೆದ ಚುನಾವಣೆಯಲ್ಲಿ ಬಿ.ಸಿ. ಪಾಟೀಲ ಸೋತಿದ್ದರೇ ಮಾಡಿದ ಸಾಲ ತೀರಿಸಲಾಗದೇ ಹೆಂಡತಿ ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಎಂದು ಪ್ರತ್ಯಾರೋಪ ಮಾಡಿದ ಅವರು, ಮಾಜಿ ಶಾಸಕ ಬಣಕಾರ ಕೃಪಾಶೀರ್ವಾದಿಂದ ಗೆದ್ದು ಬಂದ ಪಾಟೀಲ ಮುಂದಿನ ಚುನಾವಣೆಯಲ್ಲಿ ರೈತರ ಮನೆಯೆದುರು ಬಂದು ನಿಲ್ಲಲಿ ಎಂದು ಸವಾಲೆಸೆದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಳ್ಳಾರಿ, ಗಂಗಾಧರ ಎಲಿ, ರುದ್ರಗೌಡ ಕಾಡನಗೌಡ್ರ, ಮಲ್ಲೇಶಪ್ಪ ಡಂಬಳ, ಮೌನೇಶ ಕಮ್ಮಾರ ಇನ್ನಿತರಿದ್ದರು.