ಮಂಗಳೂರು(ಮೇ.01): ಕೊರೋನಾ ಲಾಕ್‌ಡೌನ್‌ನಿಂದಾಗಿ ಕೇಂದ್ರ ಸ್ವಾಮ್ಯದ ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌) ಎರಡು ವಾರಗಳ ಕಾಲ ಅದಿರು ಉಂಡೆಕಟ್ಟುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಇದೀಗ ಮತ್ತೆ ಘಟಕವನ್ನು ಭಾಗಶಃ ಪುನರಾರಂಭಿಸಿದೆ.

ಲಾಕ್‌ಡೌನ್‌ ಹೊರತೂ ಮಾಚ್‌ರ್‍ ತಿಂಗಳು ಈ ಕಂಪನಿ ಪೂರ್ತಿ ಅದಿರು ಉಂಡೆಕಟ್ಟುವ ಕೆಲಸ ನಡೆಸಿತ್ತು. ಆದರೆ ಏಪ್ರಿಲ್‌ ಮೊದಲ ದಿನದಿಂದಲೇ ಲಾಕ್‌ಡೌನ್‌ ಬಿಗುಗೊಳಿಸಿದ ಪರಿಣಾಮ ಸಮುದ್ರ ಮಾರ್ಗದಿಂದಲೂ ಅದಿರು ನಿಕ್ಷೇಪ ಆಮದಿಗೆ ಅಡ್ಡಿಯುಂಟಾಗಿತ್ತು.

ಚಿತ್ರದುರ್ಗದ ಮಹಿಳೆಯಿಂದ 172 ಚೀಲ ಈರುಳ್ಳಿ ಖರೀದಿಸಿದ ಉಡುಪಿಯ ರೈತ

ಇದರಿಂದ ಛತ್ತೀಸಗಡದಿಂದ ಅದಿರು ಬಾರದೆ ಅನಿವಾರ್ಯವಾಗಿ ಘಟಕದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು. ಈ ಅವಧಿಯಲ್ಲಿ ಘಟಕದ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲಾಗಿದೆ. ಸುಮಾರು 14 ದಿನಗಳ ಬಿಡುವಿನ ಬಳಿಕ ಏ.15ರಿಂದ ಮತ್ತೆ ಘಟಕ ಕಾರ್ಯಾರಂಭ ಮಾಡಿದೆ. ಘಟಕ ಸ್ಥಗಿತಗೊಂಡ ಪರಿಣಾಮ ಕಂಪನಿ ಅಂದಾಜು 10 ಕೋಟಿ ರು.ಗಳಷ್ಟುನಷ್ಟಅನುಭವಿಸುವಂತಾಗಿದೆ.

ಗುತ್ತಿಗೆ ಕಾರ್ಮಿಕರ ಹಿತರಕ್ಷಣೆ: ಲಾಕ್‌ಡೌನ್‌ ಅವಧಿಯಲ್ಲಿ ಸಾಮಾನ್ಯವಾಗಿ ಕೆಲಸದ ಅಭದ್ರತೆ ತಲೆದೋರುವುದು ಗುತ್ತಿಗೆ ಕಾರ್ಮಿಕರಿಗೆ. ಆದರೆ ಇಲ್ಲಿ 400ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿದ್ದು, ಎಲ್ಲರೂ ದುಡಿಯುತ್ತಿದ್ದಾರೆ. ಅಲ್ಲದೆ ಸುಮಾರು 600ಕ್ಕೂ ಅಧಿಕ ಕಾಯಂ ನೌಕರರಿದ್ದಾರೆ. ಲಾಕ್‌ಡೌನ್‌ ಹಾಗೂ ಸಾಮಾಜಿಕ ಅಂತರ ಪಾಲನೆ ಸಲುವಾಗಿ ಇವರಲ್ಲಿ ಶೇ.33ರಷ್ಟುಮಂದಿ ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಉಳಿದವರು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.

ಗುಡ್‌ ನ್ಯೂಸ್: 95 ವರ್ಷದ ಅಜ್ಜಿ ಕೊರೋನಾದಿಂದ ಗುಣಮುಖ

ಈ ಕಂಪನಿ 3 ಲಕ್ಷ ಟನ್‌ ಉಂಡೆಗಟ್ಟಿದ ಅದಿರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ದಿನದಲ್ಲಿ 11 ಸಾವಿರ ಟನ್‌ ವರೆಗೆ ಉಂಡೆಗಟ್ಟುವ ಕೆಲಸ ನಡೆಯುತ್ತಿದೆ. ಪ್ರಸ್ತುತ ಛತ್ತೀಸ್‌ಗಡ ಸೇರಿದಂತೆ ವಿದೇಶದಿಂದ ಹಡಗಿನ ಮೂಲಕ ಕಬ್ಬಿಣ ಅದಿರು ಆಮದಾಗುತ್ತಿದೆ. ಹಾಗಾಗಿ ದಿನದ 24 ಗಂಟೆಯೂ ಘಟಕ ಕಾರ್ಯಾಚರಿಸುತ್ತಿದೆ.

ಇಲ್ಲಿಂದ ಕಬ್ಬಿಣದ ಉಂಡೆಯನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಈ ಹಿಂದೆ ಯುರೋಪ್‌ ರಾಷ್ಟ್ರಗಳಿಗೆ ಕಳುಹಿಸಲಾಗುತ್ತಿತ್ತು. ಭಾರತದ ವಿವಿಧ ರಾಜ್ಯಗಳಿಗೂ ಅದಿರು ಉಂಡೆಯನ್ನು ಪೂರೈಸಲಾಗುತ್ತಿದೆ.

ಕೋವಿಡ್‌ಗೆ ಮೊದಲ ಕಂಪನಿ ದೇಣಿಗೆ

ಆಗ ಇನ್ನೂ ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಕಾಣಿಸಿರಲಿಲ್ಲ. ಅದಕ್ಕೂ ಮೊದಲೇ ಅಂದರೆ ಮಾ.7ರಂದು ಕೆಐಒಸಿಎಲ್‌ ಮುಖ್ಯಮಂತ್ರಿ ಪರಿಹಾರ ನಿಧಿಗೆ 15 ಲಕ್ಷ ರು. ದೇಣಿಗೆ ನೀಡಿತ್ತು. ಬಳಿಕ ಕಂಪನಿ ನೌಕರರ ಒಂದು ದಿನದ ವೇತನ 24 ಲಕ್ಷ ರು. ಹಾಗೂ ಸಿಎಸ್‌ಆರ್‌ ಫಂಡ್‌ನಿಂದ 10.01 ಕೋಟಿ ರು. ಮೊತ್ತವನ್ನು ಪ್ರಧಾನಿ ಕೋವಿಡ್‌ ನಿಧಿಗೆ ಅರ್ಪಿಸಿತ್ತು. ಅಲ್ಲದೆ 20 ಸಾವಿರ ಮಂದಿಗೆ ಲಾಕ್‌ಡೌನ್‌ ವೇಳೆ ಆಹಾರ ಕಿಟ್‌, ಇನ್ನು ಮುಂದೆ ಬೃಹತ್‌ ಪ್ರಮಾಣದಲ್ಲಿ ಮಾಸ್ಕ್‌ ವಿತರಿಸಲು ಕಂಪನಿ ನಿರ್ಧರಿಸಿದೆ.

150ರ ಬದಲು 550 ಕೊಟ್ಟು ಚಿತ್ರದುರ್ಗದ ಮಹಿಳೆಯಿಂದ ಈರುಳ್ಳಿ ಖರೀದಿಸಿದ ಉಡುಪಿಯ ರೈತ

ಘಟಕ ಸ್ಥಗಿತಗೊಂಡ ಅವಧಿಯನ್ನು ನಿರ್ವಹಣೆಗೆ ಬಳಸಿಕೊಳ್ಳಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಸೂಚನೆಯಂತೆ ಶೇ.33 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಿರು ಉಂಡೆ ಕಟ್ಟುವ ಘಟಕ ಈಗ ಯಥಾಪ್ರಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಸುಬ್ಬ ರಾವ್‌ ತಿಳಿಸಿದ್ದಾರೆ.

-ಆತ್ಮಭೂಷಣ್‌