Baby Bump Photoshoot: ಎರಡನೇ ಮಗುವಿನ ಬೇಬಿಬಂಪ್‌ ಫೋಟೋಶೂಟ್‌ ಮಾಡಿಸುವಾಗ ಮೊದಲ ಮಗು ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆಯು ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ನೆಲಮಂಗಲ: ಬೇಬಿಬಂಪ್‌ ಫೋಟೋಶೂಟ್‌ ಮಾಡಿಸೋದು ಟ್ರೆಂಡ್‌ ಆಗಿದೆ, ಹೀಗೆ ಫೋಟೋಶೂಟ್‌ ಮಾಡಿಸುವಾಗ ಮಗುವೊಂದು ನೀರಿನ ಪೂಲ್‌ಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದೆ. ಇತ್ತೀಚೆಗೆ ಎಲ್ಲದಕ್ಕೂ ಫೋಟೋಶೂಟ್‌ ಮಾಡಿಸಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲದಕ್ಕೂ ಫೋಟೋಶೂಟ್‌ ಅಬ್ಬರ

ಮದುವೆಗೂ ಮುನ್ನ ಪ್ರಿ ವೆಡ್ಡಿಂಗ್‌, ಮದುವೆ ಫೋಟೋಶೂಟ್‌, ಆಮೇಲೆ ಗರ್ಭಿಣಿಯಾದ ಮೇಲೆ ಫೋಟೋಶೂಟ್‌, ಮಗು ಜನನದ ಬಳಿಕ ಫೋಟೋಶೂಟ್‌, ಅಷ್ಟೇ ಯಾಕೆ? ಎರಡು ವರ್ಷಗಳ ಹಿಂದೆ ನಟಿಯೋರ್ವರು ಡಿವೋರ್ಸ್‌ ಆಗಿದೆ ಎಂದು ಕೂಡ ಫೋಟೋಶೂಟ್‌ ಮಾಡಿಸಿದ್ದರು.

ಎಲ್ಲಿ ನಡೆದಿದೆ?

ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀರ್‌ ಮೃತು ಮಗು. ತಾಯಿ ಗರ್ಭಿಣಿ ಫೋಟೋಶೂಟ್‌ಮಾಡಿಸುತ್ತಿದ್ದರು. ಆಗ ಸಣ್ಣ ನೀರಿನ ಪೂಲ್‌ಗೆ ಬಿದ್ದಿದೆ. ಮಗುವನ್ನು ನಿರ್ಲಕ್ಷ್ಯ ಮಾಡಿರೋದು ಈ ಘಟನೆಗೆ ಕಾರಣವಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಘಟನೆ ಹೇಗೆ ಆಯ್ತು?

ಜೆಪಿ ನಗರ ನಿವಾಸಿಯಾಗಿರುವ ಸ್ವಾತಿ ಹಾಗೂ ಚರಣ್‌ ರಾಜ್‌ ದಂಪತಿ ಮಗು ಲಕ್ಷ್ಮೀರ್.‌ ಕೆಲಸದ ನಿಮಿತ್ತ ಚರಣ್‌ರಾಜ್‌ಅವರು ಒಂದು ವಾರದ ಹಿಂದೆ ವಿದೇಶಕ್ಕೆ ಹೋಗಿದ್ದರು. ಇತ್ತ ಎಂಟು ತಿಂಗಳ ಗರ್ಭಿಣಿ ಸ್ವಾತಿ ಅವರು ಮಗು ಜೊತೆ ಸ್ನೇಹಿತೆ ಕರೆದುಕೊಂಡು ಫೋಟೋಶೂಟ್‌ ಮಾಡಿಸುತ್ತಿದ್ದರು. ಆ ವೇಳೆ ಸಣ್ಣ ನೀರಿನ ಪೂಲ್‌ನಲ್ಲಿ ಆಟ ಆಡುತ್ತಿದ್ದ ಮಗು ನೀರಿಗೆ ಬಿದ್ದು ತೀರಿಕೊಂಡಿದೆ. ಚರಣ್‌ರಾಜ್‌ ಅವರು ನಾಳೆ ಬೆಂಗಳೂರಿಗೆ ಬರಲಿದ್ದು, ನಾಳೆ ಮರಣೋತ್ತರ ಪರೀಕ್ಷೆ ಆಗಲಿದೆ ಎನ್ನಲಾಗಿದೆ. ಮೃತ ಮಗುವಿನ ದೇಹ ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ. ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗೆ ಇದು, ದೊಡ್ಡ ಶಾಕ್‌ ನೀಡಿದೆ. ನಿನ್ನೆಯ ಘಟನೆಯಿಂದ ಅಘಾತಕ್ಕೊಳಗಾಗಿರುವ ತಾಯಿ ಆಸ್ಪತ್ರೆ ಸೇರಿದ್ದಾರೆ.