ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ PSI..!

ತುಂಬು ಗರ್ಭಿಣಿಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ ಪಿಎಸ್‌ಐ| ಜಿಲ್ಲೆಯ ಖಾನಾಪುರ ತಾಲೂಕಿನ ಕುಪ್ಪಟಗಿರಿಯಲ್ಲಿ ನಡೆದ ಘಟನೆ| ಹೆರಿಗೆ ನೋವಿನಿಂದ ತೊಂದರೆ ಅನುಭವಿಸುತ್ತಿದ್ದ ತುಂಬು ಗರ್ಭಿಣಿಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆತಂದು ಮಾನವೀಯತೆ ಮೆರೆದ ಖಾನಾಪುರ ಠಾಣೆಯ ಪಿಎಸ್‌ಐ ಬಸಗೌಡ ಪಾಟೀಲ|

Khanapura PSI Basagouda Patil Pregnent Women Admit to Hospital in Belagavi District

ಖಾನಾಪುರ(ಏ.18): ಹೆರಿಗೆ ನೋವಿನಿಂದ ತೊಂದರೆ ಅನುಭವಿಸುತ್ತಿದ್ದ ತುಂಬು ಗರ್ಭಿಣಿಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಪಿಎಸ್‌ಐಯೊಬ್ಬರು ಮಾನವೀಯತೆ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಪ್ಪಟಗಿರಿಯಲ್ಲಿ ನಡೆದಿದೆ.

ಕುಪ್ಪಟಗಿರಿ ಗ್ರಾಮದಲ್ಲಿ ಪೊಲೀಸ್‌ ಸಿಬ್ಬಂದಿಯೊಂದಿಗೆ ಪರೇಡ್‌ ನಡೆಸುತ್ತಿದ್ದ ಖಾನಾಪುರ ಠಾಣೆಯ ಪಿಎಸ್‌ಐ ಬಸಗೌಡ ಪಾಟೀಲ, ಗ್ರಾಮದಲ್ಲಿ ಹೆರಿಗೆ ನೋವಿನಿಂದ ತೊಂದರೆ ಅನುಭವಿಸುತ್ತಿದ್ದ ತುಂಬು ಗರ್ಭಿಣಿಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. 

ಮಧ್ಯದಾರಿಯಲ್ಲೇ ಹೆರಿಗೆ, ತಾಯಿ ಮಗುವಿಗೆ ಮರುಜನ್ಮ ನೀಡಿದ ಬೆಂಗಳೂರಿನ ಡಾ. ರಮ್ಯ

ಆಸ್ಪತ್ರೆಯಲ್ಲಿ ಗರ್ಭಿಣಿಯ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಆಕೆಯ ಹೆರಿಗೆಯನ್ನು ತಕ್ಷಣವೇ ಮಾಡಿಸಿದ್ದಾರೆ. ಸಕಾಲದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದಿದ್ದರಿಂದ ಆಕೆಗೆ ಸುಗಮ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿದೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios