ಬೆಂಗಳೂರು, (ಫೆ.13): ಫೆ.14 ಪ್ರೇಮಿಗಳ ದಿನ. ಪ್ರೇಮಿಯನ್ನು ಒಲಿಸಿಕೊಳ್ಳಲು ಪ್ರಿಯತಮ ಅಥವಾ ಪ್ರಿಯತಮೆ ಉಡುಗೊರೆ ಕೊಡುವ ದಿನ. ಹುಡುಗನಿಗಾದರೆ ಏನು ಉಡುಗೊರೆ ಕೊಡುವುದು ಎಂದು ಹುಡುಗಿ ಚಿಂತಿಸುತ್ತಿದ್ದರೆ, ಹುಡುಗಿಗೆ ಏನು ಉಡುಗೊರೆ ಕೊಡಲಿ ಎಂದು ಹುಡುಗ ಗೊಂದಲದಲ್ಲಿರುತ್ತಾನೆ.ಇದರ ಗದ್ದಲದ ನಡುವೆ  ಕೆರೆ ಹಬ್ಬ ಬಂದಿದೆ.

ರಾಜಧಾನಿ ಬೆಂಗಳೂರಿನ ಸೌಂದರ್ಯ ಹಾಗೂ ವಾತಾವರಣಕ್ಕೆ ಕಾರಣವಾಗಿದ್ದ ಕೆರೆಗಳು ಇಂದು ಬಹುತೇಕರಿಗೆ ಮರೆತುಹೋಗಿವೆ. ಇದೀಗ ಅವುಗಳನ್ನ ಹಿಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಲು 'ಕೆರೆ ಹಬ್ಬ' ಆಚರಿಸುವ ಮೂಲಕ ನಮ್ಮ ಬೆಂಗಳೂರು ಪೌಂಡೇಶನ್ ಮಹತ್ವದ ಹೆಜ್ಜೆ ಇಟ್ಟಿದೆ.

ಕೆರೆಗಳಿಗೆ ಬಫರ್ ಜೋನ್ ನಿಗದಿ-ಬೆಂಗಳೂರು ಪ್ರತಿಷ್ಠಾನ ಬೆಂಬಲಿಸಿ : ಆರ್ ಸಿ

ಕೆರೆಹಬ್ಬ ಹೆಸರಿನಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ ಅಭಿಯಾನ ಆರಂಭಿಸಿದ್ದು, ಈ ಬಾರಿ ಜೋಗಿ ಕೆರೆಯನ್ನ ಆಯ್ಕೆ ಮಾಡಲಾಗಿದೆ. ಸ್ಥಳೀಯ ಸರ್ಕಾರಿ ಶಾಲೆ ಸಹಯೋಗದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ  ಫೆ.14 (ಶುಕ್ರವಾರ)ರಂದು 'ಜೋಗಿ ಕೆರೆ ಹಬ್ಬ' ಆಯೋಜಿಸಿದೆ. 

'ಜೋಗಿ ಕೆರೆ ಹಬ್ಬ'ದಲ್ಲಿ  ಚಿಣ್ಣರಿಗೆ ನಾನಾ ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಕ್ವೀಜ್, ಪೇಟಿಂಗ್ ಸೇರಿಂದತೆ ಇನ್ನು ಹಲವು ಸ್ಪರ್ಧೆಗಳನ್ನ ಏರ್ಪಡಿಲಾಗಿದ್ದು, ಫೆ. 14ರಂದು ಬೆಳಗ್ಗೆ 9.15AM ರಿಂದ 11AM ವರೆಗೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನ ಕರೆತಂದು ಒಂದು ದಿನ ಸಂತಸ ಕ್ಷಣಗಳನ್ನ ಕಳೆಯಬಹುದು.

ನಮ್ಮ ಬೆಂಗಳೂರು ಪ್ರಶಸ್ತಿಗೆ ನಾಮ ನಿರ್ದೇಶನ, ರಮೇಶ್‌ ಅರವಿಂದ್‌ ಬ್ರಾಂಡ್‌ ಅಂಬಾಸಿಡರ್

ಕೆರೆ ಹಬ್ಬದ ಉದ್ದೇಶ..?
ಜೋಗಿ ಕೆರೆ ಹಬ್ಬ ಮಾಡುತ್ತಿರುವುದಕ್ಕೆ ಪ್ರಮುಖ ಕಾರಣವಿದೆ. ನಗರದಲ್ಲಿ ಹಲವು ಕೆರೆಗಳು ಅಸ್ತಿತ್ವಕ್ಕೇ ಹೋರಾಟ ಮಾಡುತ್ತಿವೆ. ಕೆಲವುಗಳ ಅಸ್ತಿತ್ವವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆರೆಗೊಂದು ಹಬ್ಬ ಮಾಡಿ ಹಿಂದಿನ ಸಂಸ್ಕೃತಿಯನ್ನು ತಿಳಿಸಿಕೊಡುವ ಜೊತೆಗೆ, ಮಕ್ಕಳನ್ನು ಜೊತೆಗೂಡಿಸಿಕೊಂಡು ಅವರಿಗೆ ಪರಿಸರ, ಕೆರೆಯ ಮಹತ್ವ ತಿಳಿಸಿಕೊಡುವುದು. ಕೆರೆಗಳ ಸ್ವಚ್ಛತೆ ಹಾಗೂ ಅದರ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಮಹತ್ವದ ಕಾರ್ಯ ಇದಾಗಿದ್ದು, ಮತ್ತಷ್ಟು ನಾಗರಿಕರಿಗೆ, ಸಂಘ-ಸಂಸ್ಥೆಗಳಿಗೆ ಇದು ಮಾದರಿ ಆಗಬೇಕು ಎಂಬುದೇ ಇದರ ಉದ್ದೇಶವಾಗಿದೆ.

ಸ್ಥಳ
ಜೋಗಿ ಕರೆ, ವಕಿಲ್ ಗಾರ್ಡನ್ ಸಿಟಿ, ತಲಘಟ್ಟಪುರ, ಬೆಂಗಳೂರು,