ಸೋಮೇಶ್ವರ ದೇಗುಲಕ್ಕೆ ಹಿಂದೂ ಹುಡುಗಿಯೊಂದಿಗೆ ತೆರಳಿ ತಿಲಕವಿಟ್ಟುಕೊಂಡ ಮುಸ್ಲಿಂ ಯುವಕ: ಮುಂದಾಗಿದ್ದೇ ಬೇರೆ!
ಮಂಗಳೂರು ಬಳಿಯ ಉಳ್ಳಾಲ ಸೋಮೇಶ್ವರ ದೇವಸ್ಥಾನಕ್ಕೆ ಹಿಂದೂ ಹುಡುಗಿಯೊಂದಿಗೆ ತೆರಳಿ ಹಣೆಗೆ ತಿಲಕ ಹಚ್ಚಿಕೊಂಡ ಮುಸ್ಲಿಂ ಯುವಕ.
ಮಂಗಳೂರು (ಡಿ.25): ಮಂಗಳೂರಿನ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾದ ಸೋಮೇಶ್ವರ ದೇವಸ್ಥಾನಕ್ಕೆ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಬಂದಿದೆ. ಇಬ್ಬರು ಹುಡುಗರು ಹಾಗೂ ಇಬ್ಬರು ಹುಡುಗಿಯರಿದ್ದ ಕಾಲೇಜು ವಿದ್ಯಾರ್ಥಿಗಳಲ್ಲಿ ಒಬ್ಬ ಮುಸ್ಲಿಂ ಯುವಕನಿದ್ದನು. ಆತನೂ ಕೂಡ ದೇವಸ್ಥಾನದೊಳಗೆ ಹೋಗಿ ಹಣೆಗೆ ತಿಲಕವಿಟ್ಟುಕೊಂಡು ಬಂದಿದ್ದಾನೆ. ಇದನ್ನು ನೋಡಿದ ಕೆಲವರು ನೈತಿಕ ಪೊಲೀಸ್‌ಗಿರಿ ನಡೆಸಿ ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ.
ಹೌದು, ಮಂಗಳೂರಿನ ಸೋಮೇಶ್ವರ ದೇವಸ್ಥಾನದ ಬಳಿ ಮತ್ತೆ ನೈತಿಕ ಪೊಲೀಸ್ ಗಿರಿ ಕಂಡುಬಂದಿದೆ. ಕೇರಳ ಮೂಲದ ಅನ್ಯಕೋಮಿನ ವಿದ್ಯಾರ್ಥಿಗಳನ್ನು ಹಿಂದೂ ಕಾರ್ಯಕರ್ತರು ತಡೆದಿದ್ದಾರೆ. ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಅದರ ಸುತ್ತಮುತ್ತ ನಾಲ್ವರು ವಿದ್ಯಾರ್ಥಿಗಳು ಓಡಾಡುತ್ತಿದ್ದರು. ಅದರಲ್ಲಿ ಇಬ್ಬರು ಹಿಂದೂ ಯುವತಿಯರು, ಓರ್ವ ಹಿಂದೂ ಯುವಕ ಮತ್ತು ಓರ್ವ ಮುಸ್ಲಿಂ ಯುವಕನಿದ್ದನು. ಇವರು ಉಳ್ಳಾಲದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದರು.
ದತ್ತಮಾಲೆ ಧಾರಣೆಯಿಂದ ಅಂತರ ಕಾಯ್ದುಕೊಂಡರೇ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ!
ದೇವಸ್ಥಾನಕ್ಕೆ ಆಗಮಿಸಿ ಸ್ಥಳೀಯವಾಗಿ ಸುತ್ತಾಡುತ್ತಿದ್ದ ವೇಳೆ ಹಿಂದೂ ಕಾರ್ಯಕರ್ತರು ಅಲ್ಲಿದ್ದ ಹಿಂದೂ ಯುವತಿಯರನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ತನ್ನ ಸ್ನೇಹಿತರೊಂದಿಗೆ ಸೇರಿ ದೇವಸ್ಥಾನದ ಒಳಗೆ ಹೋಗಿದ್ದ ಮುಸ್ಲಿಂ ಯುವಕ ಹಣೆಗೆ ಗಂಧ ಹಚ್ಚಿಕೊಂಡು ಬಂದಿರುವುದು ತಿಳಿದಿದೆ. ಸೋಮೇಶ್ವರ ದೇವಸ್ಥಾನದಲ್ಲಿ ಸುತ್ತಾಡಿ ಹಣೆಗೆ ಗಂಧ ಹಚ್ಚಿಕೊಂಡು ಬಂದಿರುವುದಾಗಿ ಯುವತಿಯರು ತಿಳಿಸಿದ್ದಾರೆ. ಆತ ಮುಸ್ಲಿಂ ಯುವಕನೆಂದು ತಿಳಿದ ನಂತರ ನೀವು ಅನ್ಯಕೋಮಿನವರೊಂದಿಗೆ ಸುತ್ತಾಡಬೇಡಿ ಎಂದು ಹೇಳಿದ್ದಾರೆ. ನಂತರ, ಸ್ಥಳೀಯ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮುಸ್ಲಿಂ ಯುವಕ ಸೋಮೇಶ್ವರ ದೇವಸ್ಥಾನಕ್ಕೆ ನುಗ್ಗಿದ್ದಾನೆ ಎಂದು ಹಿಂದೂ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಸಿಎಂ ಪೈಕಿ ಯೋಗಿಗೆ ಮಾತ್ರ ಆಹ್ವಾನ, ರಾಜ್ಯಪಾಲರಿಗೂ ಇಲ್ಲ ಆಮಂತ್ರಣ!
ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ಹಿಂದೂ ಕಾರ್ಯಕರ್ತರು ಪೊಲೀಸರನ್ನ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕ-ಯುವತಿಯನ್ನ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಎಲ್ಲರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದು ಬಿಟ್ಟು ಕಳುಹಿಸಿದ್ದಾರೆ. ಈ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.