ಉಳ್ಳಾಲ(ಏ.09): ತೊಕ್ಕೊಟ್ಟು ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ವಾಚ್‌ಮೆನ್‌ ಆಗಿ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಗೆ 1 ಕೋಟಿ ಲಾಟರಿ ಒಲಿದಿದೆ. 

ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಸ್ಮಾರ್ಟ್‌ ಪ್ಲಾನೆಟ್‌ ವಸತಿ ಸಂಕೀರ್ಣದಲ್ಲಿ ಮೂರು ವರ್ಷಗಳಿಂದ ಸೆಕ್ಯುರಿಟಿ ಕೆಲಸ ಮಾಡುತ್ತಿರುವ ಕೇರಳ ಕಲ್ಲಿಕೋಟೆ ಮೂಲದ ಮೊಯ್ದಿನ್‌ ಕುಟ್ಟಿ(65) ಅವರಿಗೆ ಕೇರಳ ರಾಜ್ಯ ಭಾಗ್ಯಮಿತ್ರ ಲಾಟರಿಯಲ್ಲಿ ಒಂದು ಕೋಟಿ ರು. ಪ್ರಥಮ ಬಹುಮಾನ ಲಭಿಸಿದೆ. ಕಳೆದ ಹಲವು ದಶಕಗಳಿಂದ ಲಾಟರಿ ಖರೀದಿಸುವ ಗೀಳು ಇಟ್ಟುಕೊಂಡಿದ್ದ ಕುಟ್ಟಿಗೆ ಈ ಬಾರಿ ಅದೃಷ್ಟ ಕೈಹಿಡಿದೆ.

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ

ಲಾಟರಿ ಖರೀದಿಸುವ ಹವ್ಯಾಸವಿದ್ದ ಮೊಯ್ದಿನ್‌ ಕುಟ್ಟಿ, ಉಪ್ಪಳದಲ್ಲಿ ಖರೀದಿಸಿದ ಲಾಟರಿಗೆ ಅದೃಷ್ಟ ಖುಲಾಯಿಸಿದೆ. ಮೊಯ್ದೀನ್‌ ಕುಟ್ಟಿ ಅವರು ಸ್ಮಾರ್ಟ್‌ ಸಿಟಿಯಲ್ಲಿ ಒಮೆಗಾ ಟೈಲರ್‌ ಅಂಗಡಿ ಮಾಲೀಕ ರವಿ ಅವರಿಂದ ಐನೂರು ರು. ಸಾಲ ಪಡೆದು ಉಪ್ಪಳಕ್ಕೆ ತೆರಳಿ ಲಾಟರಿ ಖರೀದಿಸಿದ್ದರು. ಕಳೆದ ಹಲವು ದಶಕಗಳಿಂದ ಲಾಟರಿ ಖರೀದಿಸುವ ಗೀಳು ಇಟ್ಟುಕೊಂಡಿದ್ದ ಕುಟ್ಟಿಗೆ ಈ ಬಾರಿ ಅದೃಷ್ಟ ಕೈಹಿಡಿದೆ.