ಮಂಡ್ಯ(ಮೇ 27): ಶಾಸಕ ಕೆ. ಸುರೇಶ್‌ ಗೌಡ ಹಾಗೂ ಸಚಿವ ಕೆ. ಸಿ. ನಾರಾಯಣ ಗೌಡ ಅವರ ಮಧ್ಯೆ ಇತ್ತೀಚೆಗಷ್ಟೇ ಬ್ಲೂ ಫಿಲ್ಮ್‌ ಸಿಡಿ ವಾರ್ ನಡೆದಿತ್ತು. ಇದೀಗ ತಮ್ಮ ಜಗಳದ ಬಗ್ಗೆ ಮಾತನಾಡಿದ್ದಾರೆ ಸಚಿವ ನಾರಾಯಣ ಗೌಡ.

ಸಚಿವ ನಾರಾಯಣಗೌಡ ಹೇಳಿಕೆ ನೀಡಿದ್ದು, ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮದು ಕೋಳಿ ಜಗಳ. ನಾವು ಈ ಹಿಂದೆ ಒಂದೇ ಪಕ್ಷದಲ್ಲಿ ಇದ್ದವರು ಒಂದೇ ಕಾರಿನಲ್ಲಿ ಓಡಾಡುತ್ತಿದ್ದವರು. ಸಣ್ಣ-ಪುಟ್ಟ ನ್ಯೂನತೆಗಳು‌ ಇದ್ದವು. ಎಲ್ಲವನ್ನೂ ಈ ಸಭೆಯಲ್ಲಿ ಬಗೆಹರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಕೊರೋನಾ ನಡುವೆಯೂ JDS ಶಾಸಕನ ಬ್ಲೂ ಫಿಲ್ಮ್‌ ವಾರ್‌!

ಅನುಮಾನಗಳಿಗೆ ಈ ಸಭೆಯಲ್ಲಿ ತೆರೆಬಿದ್ದಿದೆ. ಇಂದಿನ ಸಭೆಯಲ್ಲಿ ಯಾವುದೇ ಜಗಳವಾಗಿಲ್ಲ. ಸಭೆಯಲ್ಲಿ ಕೇವಲ ಮಾತು ನಡೆದಿದ್ದು‌ ಅಷ್ಟೇ. ಇದು ಕೋಳಿ ಜಗಳ. ನಾವು ಮಂಡ್ಯದವರಲ್ಲವಾ ಅದಕ್ಕೆ ಹಾಗೆ ಆಡ್ತೀವಿ. ಇದೆಲ್ಲ ಸಾಮಾನ್ಯ ಎಂದು ಗಲಾಟೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.