Asianet Suvarna News Asianet Suvarna News

ಕೊರೋನಾ ನಡುವೆಯೂ JDS ಶಾಸಕನ ಬ್ಲೂ ಫಿಲ್ಮ್‌ ವಾರ್‌!

ಕೊರೋನಾ ಪಾಸಿಟಿವ್‌ ಸಂಖ್ಯೆಯಲ್ಲಿ ಮಂಡ್ಯ ಜಿಲ್ಲೆಯು ನಂಬರ್‌ 1 ಸ್ಥಾನಕ್ಕೆ ಹೋಗುವ ಪರಿಸ್ಥಿತಿ ಇರುವಾಗ ಇತ್ತ ಜಿಲ್ಲಾ ಮಂತ್ರಿ ಹಾಗೂ ಜೆಡಿಎಸ್‌ ಶಾಸಕರ ನಡುವೆ ಬ್ಲೂ ಫಿಲ್ಮ್‌ ಸಿಡಿ ವಾರ್‌ ಆರಂಭವಾಗಿದೆ.

Blue film cd issues between narayn gowda and suresh gowda in mandya
Author
Bangalore, First Published May 26, 2020, 4:15 PM IST

ಮಂಡ್ಯ(ಮೇ 26): ಕೊರೋನಾ ಪಾಸಿಟಿವ್‌ ಸಂಖ್ಯೆಯಲ್ಲಿ ಮಂಡ್ಯ ಜಿಲ್ಲೆಯು ನಂಬರ್‌ 1 ಸ್ಥಾನಕ್ಕೆ ಹೋಗುವ ಪರಿಸ್ಥಿತಿ ಇರುವಾಗ ಇತ್ತ ಜಿಲ್ಲಾ ಮಂತ್ರಿ ಹಾಗೂ ಜೆಡಿಎಸ್‌ ಶಾಸಕರ ನಡುವೆ ಬ್ಲೂ ಫಿಲ್ಮ್‌ ಸಿಡಿ ವಾರ್‌ ಆರಂಭವಾಗಿದೆ.

ಜಿಲ್ಲಾ ಮಂತ್ರಿ ನಾರಾಯಣಗೌಡರು ಭಾನುವಾರ ಶಾಸಕರ ಪರ್ನಸಲ್‌ ಎಲ್ಲವನ್ನೂ ಬ್ಲ್ಯಾಸ್ಟ್‌ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಜೆಡಿಎಸ್‌ ಶಾಸಕರ ಜಂಟಿ ಸುದ್ದಿಗೋಷ್ಟಿಯಲ್ಲಿ ನಾಗಮಂಗಲ ಶಾಸಕ ಕೆ. ಸುರೇಶ್‌ ಗೌಡ ಮಾತ್ರ ಕೊರೋನಾ ನಡುವೆಯೂ ಸಚಿವರು ಹಾಗೂ ಶಾಸಕರ ನಡುವೆ ವಾಕ್ಸಮರ ಭಾರೀ ಸದ್ದಿನ ನಡುವೆಯೂ, ನಿಮಗೆ ತಾಕತ್ತು ಇದ್ದರೆ ನೀವು ಬ್ಲೂ ಫಿಲ್ಮ್‌ ಸಿಡಿ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು. ಅಸಲಿಗೆ ಸಚಿವರು ಸಿಡಿ ಬಗ್ಗೆ ಯಾವುದೇ ಮಾತು ಹೇಳದೇ ಹೋದರೂ ಶಾಸಕರು ಮಾತ್ರ ಸಿಡಿ ಗುಟ್ಟು ರಟ್ಟು ಮಾಡಿದರು. ಸಚಿವ ನಾರಾಯಣಗೌಡ್ರ ಸಿಡಿ ವಿಚಾರ ಏನು ಎಂಬುದೇ ಗೌಪ್ಯವಾಗಿದೆ. ಆದರೆ ಶಾಸಕ ಸುರೇಶ್‌ಗೌಡರು ಮಾತ್ರ ಬ್ಲೂ ಫಿಲ್ಮ್‌ ಸಿಡಿ ವಿಚಾರ ತಂದು ಮತ್ತಷ್ಟುಚರ್ಚೆ ಅನುಮಾನಗಳಿಗೆ ಎಡೆ ಮಾಡಿದರು.

ಕಾಂಗ್ರೆಸ್ ಮೇಲ್ಮನೆ ಟಿಕೆಟ್‌ಗೆ ಭಾರೀ ಲಾಬಿ: 2 ಸ್ಥಾನಕ್ಕೆ ಡಜನ್‌ ಮಂದಿ ರೇಸ್‌ನಲ್ಲಿ!

ಸುದ್ದಿಗೋಷ್ಠಿಯಲ್ಲಿ ತೀವ್ರ ಕುತೂಹಲ ಕೆರಳಿಸಿದ ಶಾಸಕರ ಬ್ಲೂ ಫಿಲ್ಮ್‌ ಸಿಡಿ ಮಾತುಗಳು ಸಚಿವರ ಬ್ಲಾಸ್ವ್‌ ಮಾತಿಗೆ ಶಾಸಕರ ತಿರುಗೇಟು ನೀಡುವುದಾಗಿತ್ತು. ನಾರಾಯಣಗೌಡನಿಗೆ ತಾಕತ್ತು ಇದ್ದರೆ ಅದ್ಯಾವ ಸಿಡಿ, ಅದೇನು ಪರ್ನಸಲ್‌ ಮ್ಯಾಟರ್‌ ಇದೆ ಹೇಳಿ ಬಿಡೋಕೆ ಹೇಳಿ ಎಂದು ಸವಾಲು ಹಾಕಿದರು. ನಮಗ್ಯಾರಿಗೂ ಭಯವೂ ಇಲ್ಲ. ನಾರಾಯಣಗೌಡ ಏನು ದೇವಲೋಕದಿಂದ ಇಳಿದೂ ಬಂದಿಲ್ಲ. ಜಿಲ್ಲಾಡಳಿತದ ನ್ಯೂನತೆಯನ್ನು ನಾವುಗಳು ಎತ್ತಿ ತೋರಿಸಿದರೆ ಅದೇ ತಪ್ಪು ಎಂದು ಹೇಳುತ್ತಾನೆ. ಆತ ಒಬ್ಬ ಫೂಲ್ ಎಂದು ಶಾಸಕರು ಮಂತ್ರಿಯನ್ನು ಏಕ ವಚನದಲ್ಲೇ ನಿಂದಿಸಿದರು.

ನಮಗೂ ಜಿಲ್ಲೆಯ ಹಾಗೂ ತಾಲೂಕಿನ ಬಗ್ಗೆ ಸಮಗ್ರ ಮಾಹಿತಿಗಳು ಗೊತ್ತಿರುತ್ತವೆ. ಆದರೂ ನಾವು ಜಿಲ್ಲಾಡಳಿತ ಕೊಟ್ಟತಪ್ಪು ಮಾಹಿತಿಯನ್ನು ಒಪ್ಪಿಕೊಳ್ಳಬೇಕೆ? ರಾಜಕಾರಣದಲ್ಲಿ ನಾರಾಯಣಗೌಡನಿಗಿಂತ ನಾನು ಸೀನಿಯರ್‌ ಕಣ್ರಿ. ಅವರಿಗಿಂತ ಮುಂಚೆ ಎಂಎಲ್‌ಎ ಆಗಿದ್ದವರು ನಾವು ನಮ್ಮನ್ನು ಈ ರೀತಿಯಲ್ಲೆಲ್ಲ ಬೆದರಿಸಲು ಪ್ರಯತ್ನಿಸಿದರೆ ಆಗಲ್ಲ ಎಂದು ಹೇಳಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ‌ಹುಟ್ಟುಹಬ್ಬ, ಸರಳ ಆಚರಣೆ: ಇಲ್ಲಿವೆ ಫೋಟೋಸ್

ಬಾಂಬೆ ಗೌಡ್ರೆ, ನೀವು ಆ ಸಿಡಿಗಳನ್ನು ಬಿಡಿ ಅದರಲ್ಲಿ ಏನೇನಿದೆ ನಾವು ನೋಡೋಣ ನಮ್ಮ ತಪ್ಪುಗಳು, ನ್ಯೂನ್ಯತೆಗಳು ಏನೇನು ಇವೆಯೋ ಜನರಿಗೂ ಗೊತ್ತಗಲಿ ಅಥವಾ ಯಾವುದಾದರೂ ಬ್ಲೂ ಫಿಲ್ಮ್‌ ಇದೆಯೋ? ನೋಡಿಯೇ ಬಿಡೋಣ. ನಾವು ನೋಡೋಕೆ ರೆಡಿ ಇದ್ದೀವಿ. ನಾವು ಬಾಂಬೆಗೆಲ್ಲ ಹೋಗರಲ್ಲಪ್ಪ. ಎಲ್ಲವೂ ಇಲ್ಲೇ ಬೆಂಗಳೂರಲ್ಲೇ ಸಿಗುತ್ತವೆ. ಬಾಂಬೆಗೆ ಯಾಕ್‌ ಹೋಗೋಣ ಎಂದು ಬಹಳ ಸೂಕ್ಷ್ಮವಾಗಿ ಪ್ರಶ್ನೆ ಮಾಡಿದ ಸುರೇಶ್‌ ಗೌಡರು ನಮ್ಮ ವ್ಯಾಪಾರ ವಹಿವಾಟು ಎಲ್ಲವೂ ಬೆಂಗಳೂರಿನಲ್ಲೇ ಎಂದು ಮಾತು ತಿರುಗಿಸಿದರು.

ದಾರಿ ತಪ್ಪಿಸುವ ಕೆಲಸ ಸಮಂಜಸವಲ್ಲ: ರವೀಂದ್ರ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ರಮೇಶ್‌ ಬಾಬು ದಾರಿ ತಪ್ಪಿಸುವ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದು ಶಾಸಕ ಶಾಸಕ ರವೀಂದ್ರ ಶ್ರೀಕಂಠಯ್ಯ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರ ಜಿಲ್ಲೆಯ ರೈತರಿಗೆ ಶಕ್ತಿ ತುಂಬಲು ಪರ್ಯಾಯವಾಗಿ ಮೈಷುಗರ್‌ ಕಾರ್ಖಾನೆಗೆ ಹೊಸ ಮಿಲ… ಅಳವಡಿಕೆಗೆ ತಮ್ಮ ಆಯ-ವ್ಯಯದಲ್ಲಿ 100 ಕೋಟಿ ರು ಅನುದಾನ ಘೋಷಣೆ ಮಾಡಿ, 17 ಕೋಟಿ ರು. ಹಣ ಬಿಡುಗಡೆಗೊಳಿಸಿದ ಕುಮಾರಸ್ವಾಮಿ ವಿರುದ್ಧ ಅಡ್ಡಾದಿಡ್ಡಿ ಹೇಳಿಕೆ ನೀಡುವ ಬದಲು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿ ಎಂದು ಸಲಹೆ ನೀಡಿದರು.

ಹಿಂದಿನ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಆಗಿರುವ ಸಂಕಷ್ಟಮರುಕಳಿಸಬಾರದೆಂಬ ಉದ್ದೇಶದಿಂದ ಈಗಾಗಲೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಬೆಳೆದು ನಿಂತಿರುವ ಕಬ್ಬಿನ ವಿಲೇವಾರಿ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

Follow Us:
Download App:
  • android
  • ios