ಬೆಂಗಳೂರು(ಮೇ.13): ಆಮ್ಲಜನಕ ಟ್ಯಾಂಕರ್ ಖರೀದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಖನಿಜ ಅಭಿವೃದ್ಧಿ ನಿಧಿ (ಎಂಡಿಎಫ್) ಅಡಿಯಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ  ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಗೆ ಎಂಡಿಎಫ್ ಅಡಿಯಲ್ಲಿ ಆಕ್ಸಿಜನ್ ಸಂಗ್ರಹಿಸಲು ಅಗತ್ಯವಾದ ಆಮ್ಲಜನಕ ಟ್ಯಾಂಕರ್ ಖರೀದಿಸಲು ಮತ್ತು ಅದನ್ನು ಜಿಲ್ಲೆಯ ಆಸ್ಪತ್ರೆಗಳಿಗೆ ಸಾಗಿಸಲು ಕೋವಿಡ್-19 ಗೆ ಚಿಕಿತ್ಸೆ ನೀಡಲು ಸಚಿವ ಮುರುಗೇಶ್ ನಿರಾಣಿ ಅವಕಾಶ ಮಾಡಿಕೊಟ್ಟಿದ್ದಾರೆ. ಅತ್ಯಂತ ‌ಕ್ಷಿಪ್ರಗತಿಯಲ್ಲಿ ಸ್ಪಂದನೆ ಮಾಡಿದ ಅವರ ಕಾರ್ಯಶೈಲಿಗೆ ಮೆಚ್ಚುಗೆ ಸೂಚಿಸಿದ್ದಾರೆ.

"

ಸಮುದ್ರ ಸೇತು; ಕುವೈತ್‌ನಿಂದ ಮಂಗಳೂರಿಗೆ ಬಂದಿಳಿದಿದ 100 MT ಆಕ್ಸಿಜನ್

ಇದಕ್ಕೂ ಮುನ್ನ ನಳಿನ್ ಕುಮಾರ್ ಕಟೀಲ್ ಅವರು ‌ಸಚಿವ ಮುರುಗೇಶ್ ನಿರಾಣಿಯವರ ಜೊತೆ ಮಾತುಕತೆ ನಡೆಸಿ ಜಿಲ್ಲೆಯಲ್ಲಿ ಕರೋನಾ ವೈರಸ್ ಸೋಂಕು ತಡೆಗಟ್ಟಲು ಮತ್ತು ಸೋಂಕು ನಿವಾರಣೆಗೆ ಅವಶ್ಯವಿರುವ ಆಕ್ಸಿಜನ್ ಸಂಗ್ರಹಿಸಲು ಮತ್ತು ಸಾಗಿಸಲು 24 ಮೆಟ್ರಿಕ್ ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯದ  ಆಕ್ಸಿಜನ್ ಟ್ಯಾಂಕರ್ ಖರೀದಿ ಮಾಡಲು  ಎಂಡಿಎಫ್ ನಿಧಿ ಬಳಸಿಕೊಳ್ಳುವಂತೆ ಮನವಿ ಮಾಡಿದ್ದರು.

ಅಧ್ಯಕ್ಷರ ಮನವಿ ಮೇರೆಗೆ ಸಚಿವ ನಿರಾಣಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ‌ ಅಗತ್ಯವಿರುವ ಕಡೆ ಆಕ್ಸಿಜನ್ ಟ್ಯಾಂಕರ್ ಖರೀದಿಸಲು ತೀರ್ಮಾನಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಬೇಡಿಕೆ ಬಂದರೆ ಸಕಾರಾತ್ಮಕವಾಗಿ ಪರಿಗಣಿಸಲು ಸಚಿವ ನಿರಾಣಿ ಅವರು ತೀರ್ಮಾನಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona