ಸದ್ಯ ಎಲ್ಲೆಡೆ ಕೊರೋನಾತಂಕ ಮನೆ ಮಾಡಿದ್ದು, ಇದರ ವಿರುದ್ಧ ಹೋರಾಡಲು ವಿವಿಧ ರಿತಿಯ ಆರೋಗ್ಯ ಕ್ರಮಗಳ ಸಂಶೋಧನೆ ನಿರಂತರವಾಗಿದೆ. ಇದೀಗ ಮೆಐಸೂರಿನಲ್ಲಿ ಕಷಾಯ ಪುಡಿಯೊಂದನ್ನು ಮಾರುಕಟ್ಟೆಗ ಪರಿಚಯಿಸಲಾಗಿದೆ.

ಮೈಸೂರು (ಆ.14):  ಕೋವಿಡ್‌-19 ವಿರುದ್ಧ ಹೋರಾಡಲು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಪುಡಿಯನ್ನು ಶ್ರೀ ವಿಜಯಲಕ್ಷ್ಮೀ ಫುಡ್‌ ಪ್ರಾಡೆಕ್ಟ್ ಮಾರುಕಟ್ಟೆಗೆ ತಂದಿದೆ ಎಂದು ಸಂಸ್ಥೆಯ ಮುಖ್ಯಸ್ಥ ರಂಗನಾಥ್‌ ತಿಳಿಸಿದರು.

ಓಂಕಾಳು, ಜೀರಿಗೆ, ಅರಿಶಿನ, ತುಳಸಿ, ಅಮೃತಬಳ್ಳಿ, ಲಾವಂಚ, ಧನಿಯ, ಬಾಲ ಮೆಣಸು ಮುಂತಾದ 40 ಔಷಧಿಯುಕ್ತ ತಯಾರಾದ ಗಿಡಮೂಲಿಕೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಉಪಯುಕ್ತವಾದ ಕಷಾಯ ಪುಡಿ ಇದಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭಾರತದಲ್ಲಿ ಲಸಿಕೆ ಉತ್ಪಾದನೆಗೆ ರಷ್ಯಾ ತವಕ..!...

ಇದನ್ನು ಒಂದು ಲೋಟ (100 ಎಂಎಲ್‌) ಹಾಲು ಅಥವಾ ನೀರಿಗೆ 1 ಗ್ರಾಂ ಕಷಾಯ ಪುಡಿ ಹಾಕಿ ಬಿಸಿ ಮಾಡಿ ಸಕ್ಕರೆ ಬೆಲ್ಲ ಅಥವಾ ಜೇನುತುಪ್ಪದೊಂದಿಗೆ ಕುಡಿಯಬೇಕು. ಸಕ್ಕರೆ ಕಾಯಿಲೆ ಇದ್ದದವರು ಶುದ್ಧ ಜೇನುತುಪ್ಪದೊಂದಿಗೆ ತೆಗೆದುಕೊಳ್ಳಬಹುದು.

ಗುರುವಾರ ದೇಶದಲ್ಲಿ ದಾಖಲೆಯ 69612 ಕೊರೋನಾ ಕೇಸ್, 1010 ಸಾವು....

(ಕಾಲು ಚಮಚ) ಕಷಾಡ ಪುಡಿ ಹಾಗೂ ಅರ್ಧ ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಗೆ ತೆಗೆದುಕೊಳ್ಳಬೇಕು. ಕಷಾಯ ಪುಡಿಯು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕಡುಬಡವರಿಗೆ ಉಚಿತವಾಗಿ ನೀಡಲಾಗುವುದು. ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ. 73490 57709 ಸಂಪರ್ಕಿಸಬಹುದು ಎಂದರು. ಸಂಸ್ಥೆಯ ವೆಂಕಟೇಶ್‌, ಕುಮಾರ್‌ ಇದ್ದರು.