ಚತುಷ್ಪಥಕ್ಕಾಗಿ ಶತಮಾನಕ್ಕಿಂತ ಹಳೆಯ ಸೇತುವೆ ನೆಲಸಮ| 1900ರಲ್ಲಿ ಬ್ರಿಟಿಷರು ನಿರ್ಮಾಣ ಮಾಡಿದ್ದ ಸೇತುವೆ| ಲಂಡನ್ ಬ್ರಿಡ್ಜ್ ಎಂದೇ ಪ್ರಸಿದ್ಧಿಯಾಗಿದ್ದ ಸೇತುವೆ| ಗೋವಾ ಭಾಗಕ್ಕೆ ತೆರಳಲು ಸೇತುವೆ ನಿರ್ಮಿಸಿಕೊಂಡಿದ್ದ ಬ್ರಿಟಿಷರು|
ಕಾರವಾರ(ಫೆ.18): ಇಲ್ಲಿನ ಲಂಡನ್ ಬ್ರಿಡ್ಜ್ ಇತಿಹಾಸದ ಪುಟ ಸೇರುತ್ತಿದೆ. ಚತುಷ್ಪಥಕ್ಕಾಗಿ ಶತಮಾನಕ್ಕಿಂತ ಹಳೆಯದಾದ ಈ ಸೇತುವೆಯನ್ನು ಕೆಡವಲಾಗುತ್ತಿದೆ.
ಇಂಧನ ಬೆಲೆ ಏರಿಕೆ ಬಿಸಿ: ಬಂದರಿನಲ್ಲೇ ಲಂಗರು ಹಾಕಿದ ಬೋಟ್‌ಗಳು..!
ಬ್ರಿಟಿಷರು 1900ರಲ್ಲಿ ನಿರ್ಮಾಣ ಮಾಡಿದ್ದು, 120 ವರ್ಷ ಕಳೆದಿದೆ. ಇದುವರೆಗೂ ಈ ಸೇತುವೆ ಗಟ್ಟಿಮುಟ್ಟಾಗಿದೆ. ಈಗಿನ ಜಿಲ್ಲಾಧಿಕಾರಿ ಬಂಗಲೆ, ಸರ್ಕ್ಯೂಟ್ ಹೌಸ್ ಹಿಂದೆ ಬ್ರಿಟಿಷ್ ಅಧಿಕಾರಿಗಳ ನಿವಾಸಗಳಾಗಿದ್ದವು. ತಮ್ಮ ಮನೆಯಿಂದ ನಗರ, ಗೋವಾ ಭಾಗಕ್ಕೆ ತೆರಳಲು ಈ ಸೇತುವೆ ನಿರ್ಮಿಸಿಕೊಂಡಿದ್ದರು.
ಲಂಡನ್‌ನಲ್ಲಿ ಇರುವ ಪ್ರಸಿದ್ಧ ಲಂಡನ್ ಬಿಡ್ಜ್ ಮಾದರಿಯಲ್ಲಿ ನಗರದ ಲಂಡನ್ ಬ್ರಿಡ್ಜ್‌ನ ಕಂಬ, ಕೆಲವು ವಸ್ತು ಅದರ ಹೋಲಿಕೆ ಇರುವುದರಿಂದ ಲಂಡನ್ ಬ್ರಿಡ್ಜ್ ಎಂದೇ ಕರೆಯಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ರಾಷ್ಟ್ರೀಯ ಹೆದ್ದಾರಿ ಎಂದಾದ ಬಳಿಕವೂ ಈ ಸೇತುವೆ ಬಳಕೆಯಲ್ಲಿತ್ತು. ಈ ಸೇತುವೆ ಇತಿಹಾಸದ ಪುಟ ಸೇರಲಿದ್ದು, ಇನ್ನು ನೆನಪು ಮಾತ್ರ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 18, 2021, 12:32 PM IST