ಕಾರವಾರ[ಸೆ. 01]  ಕಾರವಾರ ಸಮೀಪ ಕಾಳಿ ನದಿ ಕಾಡಿನಲ್ಲಿ  ಕಾರವಾರ ಡಿವೈಎಸ್​ಪಿ ಶಂಕರ್​ ಮಾರಿಯಾಳ್​ ನಾಪತ್ತೆಯಾಗಿದ್ದಾರೆ. ಮಾಹಿತಿ ತಿಳಿದ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಪ್ರಕರಣವೊಂದರ ತನಿಖೆಗೆ ಕಾಳಿ ನದಿ ಸಮೀಪದ ಕಾಡಿಗೆ ಡಿವೈಎಸ್‌ ಪಿ ತೆರಳಿದ್ದರು. ಕಾಳಿ ನದಿಯಲ್ಲಿ ಸಿಲುಕಿರುವ ಶಂಕೆಯನ್ನು ಸಹ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ದಾರಿ ತಪ್ಪಿ ಅವರು ಮಿಸ್ ಆಗಿರಬಹುದು ಎಂದು ಹೇಳಲಾಗಿದೆ. ಕಾರವಾರ ಮತ್ತು ಹೆರೂರು ಪೊಲೀಸರು ಕೂಂಬಿಂಗ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.