ಕಾರವಾರ, (ಮಾ.17): ಕರ್ನಾಟದಲ್ಲಿ ಈವರೆಗೆ ಒಟ್ಟು 10 ಜನರಿಗೆ ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಇದರಿಂದ ರಾಜ್ಯದಲ್ಲಿ ಮೆಡಿಕಲ್‌ ಎಮರ್ಜೆನ್ಸಿ ಎಂದು ಘೋಷಿಸಿದೆ.

ಆದ್ರೆ, ಕೊರೋನಾ ಎಫೆಕ್ಟ್ ಇದೀಗ ಕಾರವಾರ ಹಳಗಾದ ಸೇಂಟ್ ಮೇರೀಸ್ ಪಾರ್ಶ್ವವಾಯು ಆಸ್ಪತ್ರೆಗೆ ತಗುಲಿದೆ. ರೋಗಿಗಳನ್ನ ಗುಣಮುಖರಾಗಿ ಮಾಡವ ಆಸ್ಪತ್ರೆಯೇ ಕೊರೋನಾ ವೈರಸ್‌ಗೆ ಬೆದರಿ ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದೆ.

ಭಯವೇ ಬೇಡ ಎಂದ್ರು ಕೊರೋನಾ ಪೀಡಿತರ ಜೊತೆಗೆ ಇದ್ದ ಕಾರವಾರದ ಅಭಿಷೇಕ್

ಇದು ಅಚ್ಚರಿ ಎನಿಸಿದರೂ ಸತ್ಯ. ಉತ್ತರಕನ್ನಡ ಜಿಲ್ಲೆಯ ಕಾರವಾರ ಹಳಗಾದ ಸೇಂಟ್ ಮೇರೀಸ್ ಪಾರ್ಶ್ವವಾಯು ಆಸ್ಪತ್ರೆ ಏಕಾಏಕಿ ಚಿಕಿತ್ಸೆ ನೀಡುವುದನ್ನ ನಿಲ್ಲಿಸಿದೆ. ಇದರಿಂದ ಸರಿಯಾಗಿ ಸಮಯಕ್ಕೆ ಚಿಕಿತ್ಸೆ ಸಿಗದೇ ಪಾರ್ಶ್ವವಾಯು ಪೀಡಿತರು ಪರದಾಡುತ್ತಿದ್ದಾರೆ.

ನಿನ್ನೆ ರಾತ್ರಿಯಿಂದ ಅಂದ್ರೆ ಸೋಮವಾರದಿಂದ ಚಿಕಿತ್ಸೆ ನೀಡುವುದು ಆಸ್ಪತ್ರೆ ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ನೂರಾರು ಕಿ.ಮೀ ದೂರದಿಂದ ಬಂದ ರೋಗಿಗಳು ಚಿಕಿತ್ಸೆ ಸಿಗದೇ ಗೋಳಾಡುವಂತಾಗಿದೆ.

ಕೊರೋನಾ ಗೆದ್ದು ಬಂದ ಅಭಿಷೇಕ್ ಸಂದರ್ಶನ..!

ಚಿಕಿತ್ಸೆ ಸಿಗದೇ ಕೊನೆಗೆ ರೋಗಿಗಳು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಮೊರೆ ಹೋಗಿದ್ದಾರೆ. ಕೂಡಲೇ ಡಾ. ಹರೀಶ್ ಕುಮಾರ್ ರೋಗಿಗಳ ಸಂಕಟಕ್ಕೆ ಸ್ಪಂದಿಸಿದ್ದು, ಸಮಸ್ಯೆಯನ್ನು ಪರಿಹರಿಸಿದ್ದಾರೆ. ಇದರಿಂದ ರೋಗಿಗಳು ನಿಟ್ಟುಸಿರುಬಿಡುವಂತಾಗಿದೆ.