Karwar: ಮುಂಗುಸಿಯೊಂದಿಗೆ ಕಾದಾಡಿ ಕಣ್ಣು ಕಳೆದುಕೊಂಡ ನಾಗರ ಹಾವು: ಒಂಟಿ ಕಣ್ಣಿನ ನಾಗರ ಹಾವಿಗೆ ಕುಳಿಯುಂಟು ಕಣ್ಣಿಲ್ಲ
ಅತಿ ವಿರಳವಾಗಿರುವ ಒಕ್ಕಣ್ಣಿನ (ಒಂದೇ ಕಣ್ಣು) ನಾಗರಹಾವು ಕಾರವಾರ ತಾಲೂಕಿನ ಕದ್ರಾದಲ್ಲಿ ಪತ್ತೆಯಾಗಿದ್ದು, ಅಧಿಕಾರಿಗಳಿಂದ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಉತ್ತರ ಕನ್ನಡ (ಫೆ.22): ಅತಿ ವಿರಳವಾಗಿರುವ ಒಕ್ಕಣ್ಣಿನ (ಒಂದೇ ಕಣ್ಣು) ನಾಗರಹಾವು ಕಾರವಾರ ತಾಲೂಕಿನ ಕದ್ರಾದಲ್ಲಿ ಪತ್ತೆಯಾಗಿದ್ದು, ಅಧಿಕಾರಿಗಳಿಂದ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಕಾರವಾರ ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ಆಕಾಶ ಎನ್.ಚೌಗ್ಲೆ ಎಂಬವರ ಮನೆಯ ಬಳಿ ಸುಮಾರು 4.5 ಅಡಿಯ ಉದ್ದದ ಹಾವೊಂದು ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರಿಗೆ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ತೆರಳಿದ ಅವರು, ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಟಣನಕರ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.
ಚೌಗ್ಲೆಯವರ ಮನೆ ಹತ್ತಿರ ರಕ್ಷಿಸಿದ್ದ ನಾಗರ ಹಾವಿಗೆ ಒಂದು ಕಣ್ಣು ಇರಲಿಲ್ಲ. ಈ ಒಕ್ಕಣ್ಣಿನ ಹಾವು ಒಂದು ಕಣ್ಣಿನ ಸಂಪೂರ್ಣ ದೃಷ್ಠಿ ಕಳೆದುಕೊಂಡಿದೆ. ಈ ರೀತಿ ಒಕ್ಕಣ್ಣಿನ ನಾಗರ ಹಾವು ಸಾಮಾನ್ಯವಾಗಿ ಕಾಣ ಸಿಗುವುದು ತೀರಾ ವಿರಳ. ಈ ನಾಗರ ಹಾವಿಗೆ ಕಣ್ಣಿನ ಗುಳಿ ಮಾತ್ರವಿದ್ದು, ಕಣ್ಣುಗುಡ್ಡೆ ಇರುವುದಿಲ್ಲ. ಕೆಲವು ಸಂದರ್ಭದಲ್ಲಿ ಹಾವುಗಳು ಮುಂಗುಸಿ ಜೊತೆ ಕಾದಾಡುವ ಸಂದರ್ಭದಲ್ಲಿ ಕಣ್ಣನ್ನು ಕಳೆದುಕೊಳ್ಳವ ಸಾಧ್ಯತೆ ಇರುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ಇಲಿಗಳು ಕಚ್ಚುವುದರಿಂದಲೂ ಹೀಗೆ ಆಗಿರುವ ಸಾಧ್ಯತೆ ಇರುತ್ತದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ತಿಳಿಸಿದ್ದಾರೆ.
ಕಾಲು ನೀಡಿ ಕುಳಿತ ಮಹಿಳೆಯ ಕಾಲಿನ ಕೆಳಗೆ ಸಾಗಿದ ಹಾವು: ತಣ್ಣಗೆ ಕುಳಿತ ಗಟ್ಟಿಗಿತ್ತಿ
ಒಂದು ಕಣ್ಣು ಹೋದರೂ ಸಮಸ್ಯೆಯಿಲ್ಲ: ಅತೀ ವಿರಳವಾಗಿ ಅನುವಂಶೀಯವಾಗಿ ಹಠಾತ್ ಬದಲಾವಣೆಯಿಂದಲೂ ಇಂತಹ ವಿದ್ಯಾಮಾನಗಳಿಗೆ ಕಾರಣವಾಗುತ್ತದೆ. ಒಂದು ಕಣ್ಣಿನ ದೃಷ್ಠಿ ಕುಂಠಿತಗೊಂಡರೆ ಹಾವುಗಳ ಜೀವನಕ್ರಮದ ಮೇಲೇನೂ ಪರಿಣಾಮ ಬೀರುವುದಿಲ್ಲ. ಅವು ನಿಸರ್ಗದಲ್ಲಿ ಸಹಜ ಜೀವನವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಇದು ನಾಗರ ಹಾವುಗಳ ಮಿಲನ ಋತುವಾಗಿರುವುದರಿಂದ ನಾಗರ ಹಾವುಗಳು ಹೆಚ್ಚು ಚಟುವಟಿಕೆಯಿಂದ ಇರುತ್ತವೆ. ಒಂದು ಹೆಣ್ಣು ನಾಗರ ಹಾವು ಇದ್ದ ಜಾಗದ ಆಸುಪಾಸಿನಲ್ಲಿ ಎರಡು ನಾಗರ ಹಾವುಗಳಿರುವ ಸಾಧ್ಯತೆ ಕೂಡಾ ಇರುತ್ತದೆ ಎನ್ನುತ್ತಾರೆ ತಜ್ಞರು.
ಲವ್ಲಿಸ್ಟಾರ್ ಪ್ರೇಮ್ ಮನೆಯಲ್ಲಿ ಹಾವು ಪ್ರತ್ಯಕ್ಷ: ಕನ್ನಡ ಚಿತ್ರರಂಗದ ಲವ್ಲಿ ಸ್ಟಾರ್ ಪ್ರೇಮ್ ಕೆಲವು ದಿನಗಳ ಹಿಂದೆ ನಿರ್ಮಾಪಕ ವೆಂಕರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಮನೆ ಹತ್ತಿರ 6 ಅಡಿ ನಾಗರಹಾವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಹಾವು ನೋಡುತ್ತಿದ್ದಂತೆ ಅವುಗಳ ಬಗ್ಗೆ ತಿಳಿದುಕೊಳ್ಳಲು ಪ್ರೇಮ್ ಪ್ರಶ್ನೆ ಕೇಳಿದ್ದಾರೆ. ಉರಗತಜ್ಞ ಸಂಗಮೇಶ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಕುಟುಂಬಸ್ಥರು ಮತ್ತು ಅಕ್ಕ ಪಕ್ಕದ ಮನೆಯವರು ಅಲ್ಲಿಗೆ ಬಂದು ತಮ್ಮ ಫೋನುಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
Mahashivratri 2023: ಕನಸಿನಲ್ಲಿ ಹಾವು ಬರುತ್ತಾ? ಹಬ್ಬಕ್ಕೂ ಮುನ್ನ ಹಾವಿನ ಕನಸು ಬಿದ್ದರೆ ಸಂಪತ್ತಿನ ಸೂಚನೆ!
ನಿರ್ಮಾಪಕ ವೆಂಕರೆಡ್ಡಿ ಮನೆ ಹಿಂದಿ ಲಕ್ಷ್ಮಿ ದೇವಸ್ಥಾನವಿದೆ ಅದರ ಬಳಿ ಅಂದಾಜು 6 ಅಡಿಯ ನಾಗರಹಾವು ಕಾಣಿಸಿಕೊಂಡಿದೆ. ಹಾವು ಹೆಡೆ ಎತ್ತಿ ಬುಸುಗುತ್ತಿತ್ತು ಅದಕ್ಕೆ ಹೆದರಿಕೊಂಡು ದೇವ್ಥಾನಕ್ಕೆ ಬಂದ ಭಕ್ತರು ಹಾಗೂ ಸ್ಥಳೀಯರು ಭಯಗೊಂಡಿದ್ದಾರೆ. ತಕ್ಷಣವೇ ಉರಗತಜ್ಞ ಸಂಗಮೇಶ್ ಅವರನ್ನು ಸಂಪರ್ಕಿಸಿದ್ದಾರೆ. ಹಾವು ಹಿಡಿದ ಸಂಗಮೇಶ್ ಹಾವುಗಳ ಗುಣದ ಬಗ್ಗೆ ಅಲ್ಲಿದ್ದ ಜನರಿಗೆ ತಿಳಿಸಿದ್ದಾರೆ.