Asianet Suvarna News Asianet Suvarna News

ಅಮವಾಸ್ಯೆಯಂದು ಶಕ್ತಿ ಪ್ರದರ್ಶಿಸಿದ ಮಹಿಳೆಯರು: ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ ಫುಲ್‌ ರಶ್‌

ಕಾಂಗ್ರೆಸ್‌ ಉಚಿತ ಗ್ಯಾರಂಟಿ ಶಕ್ತಿ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಕರ್ನಾಟಕ ಮಹಿಳೆಯರು ಶನಿವಾರ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ್ದರೆ. ಎಲ್ಲ ಬಸ್‌ಗಳು ಫುಲ್‌ ರಶ್‌ ಆಗಿದ್ದವು.

Karnataka Women show strength on Saturday Amavasya All KSRTC buses full rush sat
Author
First Published Oct 14, 2023, 7:28 PM IST

ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಅ.14): ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉಚಿತ ಪ್ರಯಾಣಕ್ಕೆ ಅನುಕೂಲ ಆಗುವಂತೆ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಿಂದ ಕಳೆದ ಮೂರು ತಿಂಗಳಲ್ಲಿ 60 ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇಂದು ಶನಿವಾರ ಅಮಾವಾಸ್ಯೆ ನಿಮಿತ್ಯವಾಗಿ ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ನಲ್ಲಿ ಬಸ್ ಗಳಲ್ಲಿ ಹೌಸ್ ಫುಲ್ ಆದ ಪರಿಣಾಮ ಮಹಿಳೆಯರು ಬಸ್ ಗಳಿಗಾಗಿ ಪರದಾಟ ನಡೆಸಿದ ಘಟನೆ ನಡೆದಿದೆ. 

ಬಾಗಲಕೋಟೆ ಸಮೀಪದ ಗದ್ದನಕೇರಿ ಕ್ರಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 217ರಲ್ಲಿ ಹುಬ್ಬಳ್ಳಿ ಕಡೆಗೆ ಹೋಗುವ ಬಸ್ ಗಳು ಕಿಕ್ಕಿರಿದು ತುಂಬಿ ಹೋಗುತ್ತಿದ್ದವು. ಅಮವಾಸ್ಯೆ ನಿಮಿತ್ಯ ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹಾಗೂ ಗದ್ದನಕೇರಿ ಸಮೀಪದ ಲಡ್ಡುಮುತ್ಯಾ ದೇವಸ್ಥಾನಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ನಾನಾ ಭಾಗಗಳಿಂದ‌ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ರು. ಸಂಜೆ ವೇಳೆ  ಗದ್ದನಕೇರಿ ಕ್ರಾಸ್ ನಲ್ಲಿ ಬಸ್ ಗಾಗಿ ಪ್ರಯಾಣಿಕರ ದಂಡೇ ಅಲ್ಲಿತ್ತು. ಹೆಚ್ಚಾಗಿ ಪ್ರಯಾಣಿಕರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಈ ವೇಳೆ ಹುಬ್ಬಳ್ಳಿ ಮಾರ್ಗವಾಗಿ ಹೊರಡುವ ಬಸ್ ಗಳು ಭರ್ತಿಯಾಗಿ ಹೋಗುತ್ತಿದ್ದವು. ಅಲ್ಪಸ್ವಲ್ಪ ಖಾಲಿಯಾಗಿ ಕಂಡ ಕೆಎಸ್ಆರ್ಟಿಸಿ ಬಸ್ ಗಳನ್ನು ಹತ್ತಲು ಮಹಿಳಾ ಪ್ರಯಾಣಿಕರು ಓಡೋಡಿ ಹೋದ ಪ್ರಸಂಗಗಳು ನಡೆದವು.

ಬೆಂಗಳೂರಿಗೆ ಬೆಂಕಿ ದಿನವಾದ ಶನಿವಾರ: ಕಳೆದ ವಾರ ಪಟಾಕಿ ಮಳಿಗೆ, ಈ ವಾರ ಅಗರಬತ್ತಿ ಮತ್ತು ಗುಜರಿ ಅಂಗಡಿ

ತಾಯಿಯಿಂದ ಹಲ್ಲೆಗೊಳಗಾಗಿ ಮಗಳು ಸಾವು, ಕೋಮಾಗೆ ಜಾರಿದ ಮಗ: ವಿಜಯನಗರ: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿ ತಾಯಿಯಿಂದಲೇ ಹಲ್ಲೆಗೊಳಗಾದ  ಮಗಳು ಸಾವನ್ನಪ್ಪಿದ್ದು, ಮಗನ ಸ್ಥಿತಿ ಗಂಭೀರವಾಗಿದೆ. ಹರಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ.  ತಾಯಿ ಬೇಗಮ್‌ಬಿ (45) ತನ್ನ ಮಗಳು ಮಗಳು ಶಮಬಾನು (17) ಮೇಲೆ ಹಲ್ಲೆ ಆಡಿ ಸಾಯಿಸಿದ್ದಾಳೆ. ಮಗ ಅಮಾನುಲ್ಲಾ(16) ಮೇಲೆ ಹಲ್ಲೆ ಮಾಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇನ್ನು ಮಕ್ಕಳ ಮೇಲೆ ಹಲ್ಲೆ ಮಾಡಿದ ನಂತರ ತಾಯಿ ಬೇಗಮ್ ಬಿ ಸಹ ನೇಣಿಗೆ ಶರಣಾಗಿದ್ದಾಳೆ.

ಕರ್ನಾಟಕ ಗುತ್ತಿಗೆದಾರರ ಸಂಘವು ಸರ್ಕಾರದ ಕಮೀಷನ್‌ ವಸೂಲಿ ಕೇಂದ್ರವಾಗಿದೆ: ಮಾಜಿ ಸಿಎಂ ಬೊಮ್ಮಾಯಿ ಆರೋಪ

ಮೊದಲಿಗೆ ತಾಯಿಯಿಂದ  ಮಗಳು ಶಮಬಾನು ಹಾಗೂ ಮಗನ ಮೇಲೆ ಹಲ್ಲೆ ಮಾಡಿದ್ದು, ಮಗಳು ಶಮಬಾನು ಸ್ಥಳದಲ್ಲೇ ಸಾವನ್ನಪ್ಪಿದರೆ, ಮಗ ಕೋಮದಲ್ಲಿದ್ದಾನೆ. ವಿಜಯನಗರ ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಗ್ರಾಮಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ತಾಯಿ ಬೇಗಮ್ ಬಿ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಎಂಬ ಅನುಮಾನ ಕಂಡುಬಂದಿದೆ.

Follow Us:
Download App:
  • android
  • ios