‘ಮೇಕೆ​ದಾಟು’ : ಕಾವೇರಿಗೆ ಮತ್ತೊಂದು ಅಣೆಕಟ್ಟು ನಿರ್ಮಾಣಕ್ಕೆ ರೆಕ್ಕೆಪುಕ್ಕ

ಕಾವೇರಿ ನದಿಗೆ ಮತ್ತೊಂದು ಅಣೆಕಟ್ಟು ನಿರ್ಮಾಣ ಮಾಡುವ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಸಚಿವ ರಮೇಶ್ ಜಾರಕಿಹೊಳಿ ಸಾಕಷ್ಟು ಚರ್ಚೆ ನಡೆಸಿದ್ದಾರೆ. 

Karnataka To Seek Approval from Centre over Mekedatu Dam Project Ram

ರಾಮ​ನ​ಗರ (ಸೆ.15): ನೆರೆಯ ತಮಿಳುನಾಡಿನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ರಾಜ್ಯದ ಮಹತ್ವಾಕಾಂಕ್ಷಿ ‘ಮೇಕೆದಾಟು ಸಮತೋಲನ ಜಲಾಶಯ ಯೋಜನೆ’ ಅನುಷ್ಠಾನ ವಿಚಾರಕ್ಕೆ ಇದೀಗ ಮತ್ತೆ ರೆಕ್ಕೆ ಪುಕ್ಕ ಬಂದಂತಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿರುವ ಯೋಜನಾ ಪ್ರದೇಶಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆಯನ್ನೂ ನಡೆಸಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಯೋಜನೆಯ ಅನು​ಷ್ಠಾನ ಕುರಿ​ತಂತೆ ಮುಖ್ಯ​ಮಂತ್ರಿ ಯಡಿ​ಯೂ​ರಪ್ಪ ನವರ ನೇತೃ​ತ್ವ​ದಲ್ಲಿ ಕೇಂದ್ರ ಜಲ​ಶಕ್ತಿ ಹಾಗೂ ಕೇಂದ್ರ ಅರಣ್ಯ ಸಚಿ​ವ​ರನ್ನು ಶೀಘ್ರ​ದಲ್ಲಿ ಭೇ​ಟಿ​ಯಾಗಿ ಚರ್ಚೆ ನಡೆ​ಸ​ಲಾ​ಗು​ವುದು ಎಂದು ತಿಳಿಸಿದ್ದಾರೆ.

ಯೋಜನೆ ಅನುಷ್ಠಾನಕ್ಕೆ ಉದ್ದೇಶಿಸಿರುವ ಒಂಟಿಗುಂಡು ಸ್ಥಳ ವೀಕ್ಷಿಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಅನು​ಷ್ಠಾನ ಸಂಬಂಧ ಕೇಂದ್ರ ಅರಣ್ಯ ಸಚಿವ ಪ್ರಕಾಶ್‌ ಜಾವ​ಡೇ​ಕರ್‌ ಮತ್ತು ಜಲಶಕ್ತಿ ಸಚಿವ ಗಜೇಂದ್ರ​ಸಿಂಗ್‌ ಶೇಖಾ​ವತ್‌ ಅವ​ರನ್ನು ಮೂರ್ನಾಲ್ಕು ಬಾರಿ ಭೇಟಿ​ಯಾ​ಗಿ​ದ್ದೇವೆ. ಮುಂದಿನ ವಾರ ಮುಖ್ಯ​ಮಂತ್ರಿ​ಗ​ಳ ನೇತೃ​ತ್ವ​ದಲ್ಲಿ ಭೇಟಿಯಾಗಿ ಚರ್ಚೆ ನಡೆ​ಸ​ಲಿ​ದ್ದೇವೆ.ಯೋಜ​ನೆಯ ಪರಿ​ಷ್ಕೃತ ಪ್ರಸ್ತಾ​ವ​ನೆ​ಯನ್ನು ಸಲ್ಲಿಸಿ ಒಪ್ಪಿಗೆ ಪಡೆಯುತ್ತೇವೆ ಎಂದು ಹೇಳಿ​ದರು.

ರಮೇಶ್ ಜಾರಕಿಹೊಳಿ ಭೇಟಿ : ಮಹತ್ವ ಪಡೆದುಕೊಂಡ ಚರ್ಚೆ .

ಕೇಂದ್ರ ಜಲ ಆಯೋಗ ಕೆಲ ನಿಬಂಧ​ನೆ​ಗ​ಳೊಂದಿಗೆ ವಿವ​ರ​ವಾದ ಯೋಜನಾ ವರದಿ ತಯಾ​ರಿ​ಸಲು ಸೂಚಿ​ಸಿತ್ತು. ಅದ​ಕ್ಕೆ ಅನು​ಸಾ​ರ​ವಾಗಿ .9 ಸಾವಿರ ಕೋಟಿ ಮೊತ್ತಕ್ಕೆ ಯೋಜನಾ ವರ​ದಿ​ ಸಿದ್ಧ​ಪ​ಡಿಸಿ ಸಲ್ಲಿ​ಸ​ಲಾ​ಗಿದೆ. ತಮಿ​ಳು​ನಾಡು ಸರ್ಕಾರ ಈ ಯೋಜನೆಯನ್ನು ತಡೆ ಹಿಡಿ​ಯಲು ಕೋರಿ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿ​ಸಿದೆ. ಇದಕ್ಕೆ ಕೇಂದ್ರ ಹಾಗೂ ಕರ್ನಾ​ಟಕ ಸರ್ಕಾ​ರ​ಗಳು ಪ್ರತಿ ಪ್ರಮಾಣ ಪತ್ರ​ಗ​ಳಿಗೆ ಪ್ರತ್ಯು​ತ್ತರ ಸಲ್ಲಿ​ಸಿದೆ ಎಂದ​ರು.

ತಮಿಳುನಾಡು ಆತಂಕ ಪಡು​ವು​ದನ್ನು ಬಿಟ್ಟು ಮಾತು​ಕ​ತೆಗೆ ಮುಂದಾ​ದರೆ ಅಲ್ಲಿನ ಮುಖ್ಯಮಂತ್ರಿಗಳಾದಿ​ಯಾಗಿ ಎಲ್ಲ​ರಿಗೂ ಯೋಜನೆ ಸಾಧಕ ಬಾಧ​ಕ​ಗಳನ್ನು ಮನ​ವ​ರಿಕೆ ಮಾಡಿ​ಕೊಡು​ತ್ತೇವೆ ಎಂ​ದರು. ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ಇದ್ದರು.

Latest Videos
Follow Us:
Download App:
  • android
  • ios