ಮಂಡ್ಯ[ಜ.12]: ಗಣೇಶ, ಈಶ್ವರ, ವೆಂಕಟೇಶ್ವರ, ಶನೇಶ್ವರ ಮತ್ತಿತರ ದೇವರುಗಳ ದೇವಸ್ಥಾನಗಳಿರುವುದು ಎಲ್ಲರಿಗೂ ಗೊತ್ತು. ಆದರೆ ಸಾವಿನ ಪ್ರತೀಕ ಯಮರಾಜನಿಗೆ ದೇಗುಲ ಕಟ್ಟುವ ಬಗ್ಗೆ ನೀವು ಕೇಳಿರಲಾರಿರಿ. ರಾಜ್ಯದಲ್ಲೇ ಮೊದಲ ಬಾರಿಗೆ ಯಮರಾಜನ ದೇಗುಲವನ್ನು ಮಂಡ್ಯದಲ್ಲಿ ನಿರ್ಮಿಸಲು ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ. ಆದರೆ ಇದಕ್ಕೆ ಆರಂಭದಲ್ಲೇ ಅಡ್ಡಿ ಎದುರಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಹೊಸ ಉಂಡವಾಡಿ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಎನ್.ರಾಜು ಎಂಬವರು ಸಾವಿನ ಅಧಿಪತಿ ಯಮರಾಜನಿಗೆ ಕಟ್ಟಲು ಹೊರಟಿದ್ದ ದೇವಾಲಯವನ್ನು ವ್ಯಕ್ತಿಯೊಬ್ಬರು ನಿರ್ಮಾಣ ಹಂತದಲ್ಲೇ ಕೆಡವಿ ಹಾಕಿದ್ದಾರೆ. ಸ್ಥಳ ವಿವಾದವೇ ಇದಕ್ಕೆ ಕಾರಣ ಎನ್ನಲಾಗಿದ್ದು, ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿ

ತುಮಕೂರು: ಹುಂಡಿಗೆ ಕನ್ನ ಹಾಕಲು ಬಂದು ಕಾಲು ಮುರಿದುಕೊಂಡ

ಕೆಆರ್‌ಎಸ್ ಸಮೀಪದ ಹೊಸ ಉಂಡವಾಡಿ ಗ್ರಾಮದಲ್ಲಿ ₹4 ಲಕ್ಷ ವೆಚ್ಚದಲ್ಲಿ ಶ್ರೀ ಕ್ಷೇತ್ರ ಶನಿ ಮಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಯಮನ ದೇಗುಲ ನಿರ್ಮಾಣ ಹಂತದಲ್ಲಿತ್ತು. ಈ ವೇಳೆ ಈ ಜಾಗ ತನ್ನದೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು ದೇವಸ್ಥಾನ ಪೂರ್ಣಗೊಳ್ಳುವ ಹಂತದಲ್ಲಿದ್ದಾಗ ದೇವಸ್ಥಾನವನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದಾರೆ ಎನ್ನಲಾಗಿ

ಬೆಳಗೊಳ ಹೋಬಳಿ ಹೊಂಗಳ್ಳಿ ಸರ್ವೆ ನಂ.291ರ ಪೈಕಿ ಪಿ-42ರಲ್ಲಿ 13 ಗುಂಟೆ ಭೂ ಮಿಯಲ್ಲಿ ಈ ದೇಗುಲವಿದೆ. ಆ ಜಾಗದಲ್ಲಿ ಮೊದಲಿಗೆ ಶನಿದೇವರ ದೇಗುಲ ನಿರ್ಮಿಸಲಾ ಗಿತ್ತು. ನಂತರ ಶನಿದೇವರ ದೇಗುಲದ ಬಳಿಯೇ ಯಮನ ದೇಗುಲ ನಿರ್ಮಾಣಕ್ಕೆ ಮುಂದಾಗಿ ದ್ದಾರೆ. ಆದರೆ ಇದೀಗ ಸ್ಥಳೀಯ ಮಹಿಳೆಯರೊ ಬ್ಬರು ಯಮರಾಜನ ದೇಗುಲ ನಿರ್ಮಿಸಿರುವ ಜಾಗ ತನ್ನದು ಎಂದು ತಗಾದೆ ತೆಗೆದು ನಿರ್ಮಾಣ ಹಂತದಲ್ಲಿದ್ದ ದೇಗುಲವನ್ನು ಕೆಡವಿದ್ದಾರೆ ಎಂದು ಆರೋಪಿಸಲಾಗಿದೆ.

ಯಾಕೆ ಯಮರಾಜನ ದೇಗುಲ?:

ರಾಜ್ಯದ ಮೂಲೆ ಮೂಲೆಗಳಲ್ಲೂ ಶಿವ, ವಿಷ್ಣು, ಗಣಪತಿ, ಆಂಜನೇಯ ಹೀಗೆ ನಾನಾ ಹಿಂದೂ ದೇವತೆ ಗಳಗೆ ದೇವಸ್ಥಾನ ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ಸಾವನ್ನು ಹೊತ್ತುಕೊಂಡು ಹೋಗುವ ಯಮಧರ್ಮರಾಜನಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡುವ ಪದ್ಧತಿ ಮಾತ್ರ ಇಲ್ಲ. ಹೀಗಾಗಿ ಹುಂಡವಾಡಿ ಗ್ರಾಮದ ಗುತ್ತಿಗೆದಾರ ರಾಜು ಎಂಬವರು ಯಮರಾಜನಿಗಾಗಿ 4 ಲಕ್ಷ ರು. ವೆಚ್ಚ ಮಾಡಿ ದೇವಸ್ಥಾನ ಕಟ್ಟಿ ಪೂಜೆ ಮಾಡುವ ಸಂಕಲ್ಪ ಮಾಡಿದ್ದರು. ಪತ್ನಿ, ಇಬ್ಬರು ಮಕ್ಕಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರೂ ಮುಂದು ವರಿದ ರಾಜು ದೇವಸ್ಥಾನ ಕಟ್ಟಲು ಹೊರಟಿದ್ದರು.

ದೇವಾಲಯವು ಸದ್ಯ ಇನ್ನೂ ರಚನೆ ಹಂತದಲ್ಲಿತ್ತು. ಬುಷ್ ಹ್ಯಾಂಡಲ್, ಬಾರ್ ಮೀಸೆ ಇರುವ ಯಮನ ವಿಗ್ರಹವನ್ನು ಸಿದ್ಧಪಡಿ ಸಲಾಗಿತ್ತು. ಪುರಾಣಗಳಿಗೆ ಅನುಗುಣವಾಗಿ ಯಮನು ಎಮ್ಮೆ ಮೇಲೆ ಕುಳಿತಿರುವಂತೆ ಕೆತ್ತನೆ ಮಾಡಲಾಗಿತ್ತು. 12*12 ಅಡಿ ವಿಸ್ತೀರ್ಣದ ಗರ್ಭಗುಡಿಯೊಳಗೆ ಈ ವಿಗ್ರಹ ಇಡುವುದೆಂದು ತೀರ್ಮಾನ ಆಗಿತ್ತು.

ಈಗಾಗಲೇ ಸಾಯಿಬಾಬಾ, ಶನಿ ಮತ್ತು ನಾಗದೇವತರಿಗಾಗಿ ದೇವಾಲಯಗಳನ್ನು ನಿರ್ಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಬ್ರಹ್ಮ ಭಗವಂತನ ದೇವಾಲಯ ನಿರ್ಮಿಸುವ ಸಂಕಲ್ಪ ವೂ ಇದೆ. ಈ ಎಲ್ಲ ದೇವಾಲಯಗಳ ಮಾಲೀ ಕತ್ವವನ್ನು ನನ್ನ ಮರಣದ ನಂತರ ಕರ್ನಾಟಕ ದತ್ತಿ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ರಾಜು ತಿಳಿಸಿದ್ದರು.

110 ದೇಗುಲಗಳಲ್ಲಿ ಸಾಮೂಹಿಕ ವಿವಾಹ : ಚಿನ್ನ, ಸೀರೆ ಉಡುಗೊರೆ