ಕರ್ನಾಟಕದಲ್ಲಿ ಕೊರೋನಾ ಸ್ಫೋಟ: ಭಾನುವಾರ ಒಂದೇ ದಿನ 1267 ಕೇಸ್
ಭಾನುವಾರ ಕರ್ನಾಟಕದಲ್ಲಿ ಕೊರೋನಾ ಮಾಹಾ ಸ್ಫೋಟವಾಗಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 1267 ಜನರಿಗೆ ಸೊಂಕು ತಗುಲಿರುವುದು ಧೃಡವಾಗಿದೆ.ಇನ್ನೂ ಜಿಲ್ಲಾವಾರು ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಜೂನ್.28): ಕರ್ನಾಟಕದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು, ಇಂದು (ಭಾನುವಾರ) ಒಂದೇ ದಿನದಲ್ಲಿ ಬರೋಬ್ಬರಿ 1267 ಕೇಸ್ ಪತ್ತೆಯಾಗಿವೆ.
ಈ ಮೂಲಕ ಸೋಂಕಿತರ ಸಂಖ್ಯೆ 13190 ಕ್ಕೆ ಏರಿಕೆಯಾಗಿದೆ. ಇನ್ನು 220 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 7507 ಡಿಸ್ಚಾರ್ಜ್ ಆದಂತಾಗಿದೆ. ಇನ್ನು 5472 ಸಕ್ರಿಯ ಪ್ರಕರಣಗಳು ಇದ್ದು, ಈ ಪೈಕಿ 207 ಸೋಂಕಿತರು ಐಸಿಯುನಲ್ಲಿ ಇದ್ದಾರೆ.
ಸಂಡೇ ಲಾಕ್‌ಡೌನ್ ಎಲ್ಲಿಂದ ಎಲ್ಲಿವರೆಗೆ? ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಭಾನುವಾರ ಒಂದೇ ದಿನ 16 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 207 ಕ್ಕೆ ಏರಿಕೆಯಾಗಿದೆ.
ಭಾನುವಾರದ ಜಿಲ್ಲಾವಾರು ಅಂಕಿ-ಅಂಶ
ಬೆಂಗಳೂರು 783, ಕಲಬುರಗಿ 34 , ದಕ್ಷಿಣ ಕನ್ನಡ 97 , ಬಳ್ಳಾರಿ 71 , ಧಾರವಾಡ 18 , ಮೈಸೂರು 18 , ಬಾಗಲಕೋಟೆ 17 , ಉಡುಪಿ 40 , ಹಾಸನ 31 , ಬೆಂಗಳೂರು ಗ್ರಾಮಾಂತರ 27 , ಉತ್ತರ ಕನ್ನಡ 14 , ವಿಜಯಪುರ 5 , ಗದಗ 30 , ಹಾವೇರಿ 12 , ಮಂಡ್ಯ 6 , ಬೀದರ್ 7 , ದಾವಣಗೆರೆ 6 , ಬೆಳಗಾವಿ 8 , ಚಿತ್ರದುರ್ಗ 7, ರಾಯಚೂರು 6, ಶಿವಮೊಗ್ಗ 4 , ಕೊಪ್ಪಳ 3, ಕೋಲಾರ 11 , ಚಿಕ್ಕಬಳ್ಳಾಪುರ 3 , ಕೊಡಗು 3, ತುಮಕೂರು 2 , ಚಿಕ್ಕಮಗಳೂರು 3 , ಯಾದಗಿರಿ 1 ಪ್ರಕರಣಗಳು ಪತ್ತೆಯಾಗಿವೆ.
"