Asianet Suvarna News Asianet Suvarna News

ವಿಶ್ವ ಬಿದಿರು ದಿನಾಚರಣೆ ಸಂಪೂರ್ಣ ಇಂಗ್ಲಿಷ್ ಮಯ, ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ಕರ್ನಾಟಕ ರಕ್ಷಣಾ ವೇದಿಕೆಯಿಂದ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಭಾಷೆ ಬಳಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇಂದು ಮಲ್ಲೇಶ್ವರಂ ನ ಅರಣ್ಯ ಇಲಾಖೆಯಲ್ಲಿ, ವಿಶ್ವ ಬಿದಿರು ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Karnataka  rakshana vedike Protest against  English usage in World Bamboo Day gow
Author
First Published Sep 19, 2022, 10:38 PM IST

ಬೆಂಗಳೂರು (ಸೆ.19): ಕರ್ನಾಟಕ ರಕ್ಷಣಾ ವೇದಿಕೆಯಿಂದ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಭಾಷೆ ಬಳಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇಂದು ಮಲ್ಲೇಶ್ವರಂ ನ ಅರಣ್ಯ ಇಲಾಖೆಯಲ್ಲಿ, ವಿಶ್ವ ಬಿದಿರು ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅರಣ್ಯ ಇಲಾಖೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ, ಸಮಾರಂಭವು ಸಂಪೂರ್ಣವಾಗಿ ಇಂಗ್ಲಿಷ್ ಮಯವಾಗಿರುವುದನ್ನ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಕೆಲ ವರ್ಷದ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಬಳಕೆ ಮಾಡದ ಕಾರಣ ಅನ್ಯಾಯ ಆಗುತ್ತಿತ್ತು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇಂಗ್ಲಿಷ್ ಕೂಗು ಹೆಚ್ಚಾಗುತ್ತಿದೆ. ಈಗ ಅರಣ್ಯ ಇಲಾಖೆಯು ಕೂಡ ಅದೇ ರೀತಿಯ ನಡುವಳಿಕೆಯನ್ನು ಎತ್ತಿ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಕನ್ನಡ ಭಾಷೆ ಬಳಕೆ ಮಾಡುತ್ತಿಲ್ಲವೆಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ನಡೆದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಬ್ಯಾನರ್ ಕೂಡ ಇಂಗ್ಲಿಷ್ ನಲ್ಲಿ ಮುದ್ರಿಸಲಾಗಿತ್ತು. ಈ ಎಲ್ಲ ಮಾಹಿತಿಗಳು ಕರವೇ ಕಾರ್ಯಕರ್ತರಿಗೆ ತಿಳಿದಾಗ ಕಾರ್ಯಕ್ರಮವು ಒಟ್ಟಾರೆಯಾಗಿ ಇಂಗ್ಲಿಷ್ ನಲ್ಲೇ ನಡೆಯುತ್ತಿತ್ತು.

ಧರ್ಮರಾಜ್ ಗೌಡ ನೇತೃತ್ವದಲ್ಲಿ ಸಮಾರಂಭಕ್ಕೆ ಮುತ್ತಿಗೆ ಹಾಕಿದ್ದ ಕಾರ್ಯಕರ್ತರು ಕನ್ನಡ ಬಳಕೆ ಮಾಡಲೇ ಬೇಕು ಎನ್ನುವ ಒತ್ತಾಯ ಹೇರಿ ಕನ್ನಡ ಬಳಸುವಂತೆ ಖಡಕ್ ಎಚ್ಚರಿಕೆಯನ್ನು ನೀಡಿದ್ದರಿಂದ ಸಭೆಯಲ್ಲಿ ಇಂಗ್ಲಿಷ್ ಭಾಷೆಯ ಬಳಕೆಗೆ ಪೂರ್ಣವಿರಾಮ ನೀಡಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಮಾತಿನಂತೆ ಒಪ್ಪಿಕೊಂಡ ಆಡಳಿತ ಮಂಡಳಿಯು ಇಂಗ್ಲಿಷ್ ಭಾಷೆಯಲ್ಲಿ ಇದ್ದ ಕಾರ್ಯಕ್ರಮವನ್ನ ಸಂಪೂರ್ಣವಾಗಿ ಕನ್ನಡಮಯ ದೃಶ್ಯ ಮಾಡುವಲ್ಲಿ ಯಶಸ್ವಿಯಾಯಿತು. ಕರವೇ ಕಾರ್ಯಕರ್ತರ ಆಗಮನದಿಂದ ಇಂಗ್ಲೀಷ ಭಾಷೆ ಬದಲಾಗಿ ಕಾರ್ಯಕ್ರಮವು ಕನ್ನಡಮಯವಾಯಿತು.

ಕೆನಡಾ ಸಂಸತ್ತಲ್ಲಿ ಸಂಸದ ಚಂದ್ರ ಕನ್ನಡ ಭಾಷಣ: ವಿದೇಶದ ಸಂಸತ್ತಿನಲ್ಲಿ ಕನ್ನಡ ಭಾಷಣ ಇದೇ ಮೊದಲು 

ಹಿಂದಿ ಭಾಷಾ ಹೇರಿಕೆ ವಿರೋಧಿಸಿ ವಾಟಾಳ್‌ ಪ್ರತಿಭಟನೆ, ಅ.15 ರಿಂದ ಎಲ್ಲ ಡಿಸಿ ಕಚೇರಿಗಳ ಮುಂಭಾಗ ಕಪ್ಪುಬಾವುಟ ಪ್ರದರ್ಶನ 
ಚಾಮರಾಜನಗರ: ಕೇಂದ್ರ ಸರ್ಕಾರದ ಹಿಂದಿ ಭಾಷಾ ಹೇರಿಕೆ ವಿರೋಧಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು ತಮ್ಮ ಬೆಂಬಲಿಗರೊಂದಿಗೆ ನಗರದ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಕನ್ನಡ ಚಳವಳಿ ವಾಟಾಳ್‌ ಪಕ್ಷ ಅ.15 ರಿಂದ ರಾಜ್ಯಾದ್ಯಂತ ಭಾರೀ ಚಳುವಳಿ ಹಮ್ಮಿಕೊಂಡಿದ್ದು, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕಪ್ಪುಬಾವುಟ ಪ್ರದರ್ಶನ, ಎಲ್ಲೆಲ್ಲಿ ಹಿಂದಿ ನಾಮಫಲಕ ಇದೆ ಅದನ್ನು ಕಿತ್ತು ಹಾಕುವುದು. ನಾಮಫಲಕಗಳಿಗೆ ಮಸಿ ಬಳಿಯಲು ವಾಟಾಳ್‌ ಪಕ್ಷ ತೀರ್ಮಾನಿಸಿದೆ ಎಂದರು.

‘ಕಿಸಾನ್‌ ಸಮ್ಮಾನ್‌’ ವೆಬ್‌ನಲ್ಲಿ ಕನ್ನಡ ಕಡೆಗಣನೆ: ಹಿಂದಿ ಸೇರಿ 8 ಭಾಷೆಗಳಲ್ಲಿ ಲಭ್ಯ, ಕನ್ನಡ ಇಲ್ಲ!

ರಾಜ್ಯದಲ್ಲಿ ತಮಿಳರು, ತೆಲುಗರು, ಮಳಯಾಳಿ, ಗುಜರಾತಿಗಳು, ಮಾರ್ವಾಡಿಗಳು, ಹಿಂದಿಗರು ಸೇರಿದಂತೆ ಅನ್ಯಭಾಷಿಗರೇ ತುಂಬಿದ್ದಾರೆ. ಕನ್ನಡಿಗರು ಅಲ್ಪಸಂಖ್ಯಾತರರಾಗಿದ್ದಾರೆ. ಬೆಂಗಳೂರು ಪರಭಾಷಿಗರ ಕೈಗೆ ಹೋಗಿದೆ. ಇಡೀ ಬೆಂಗಳೂರು ಕನ್ನಡ ವಿರೋಧಿಯಾಗಿದೆ. ಇಡೀ ರಾಜ್ಯಕ್ಕೆ ಪರ ರಾಜ್ಯದ ಜನರು ಬಂದು ಸೇರುತ್ತಿದ್ದಾರೆ. ಸರ್ಕಾರ ಕನ್ನಡ ಭಾಷೆಗಾಗಿ ಮಸೂದೆ ಜಾರಿ ಮಾಡುವುದಾಗಿ ಹೇಳುತ್ತಿದೆ. ನಿಮ್ಮ ಮಸೂದೆಯನ್ನು ಕಸದ ತೊಟ್ಟಿಗೆ ಹಾಕಿ ಕನ್ನಡವನ್ನು ಕೇಳುವವರೇ ಇಲ್ಲ. ಪ್ರಾದೇಶಿಕ ಭಾಷೆಗಳನ್ನು ತುಳಿಯುವುದು ಪ್ರಧಾನಿ ಮೋದಿ, ಅಮಿತ್‌ ಶಾ ಅವರ ಗುರಿಯಾಗಿದೆ. ಇದರ ವಿರುದ್ಧ ಸಮಗ್ರ ಕನ್ನಡಿಗರು ಎಚ್ಚರ ಆಗಬೇಕಾಗಿದೆ ಎಂದರು.

ಪ್ರಧಾನಿ ಮೋದಿ, ಶಾ ಅವರು ಹಿಂದಿ ಹೇರಲು ಹೊರಟಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್‌ ಅವರಿಗೆ ಹಿಂದಿ ಬೇಕಾಗಿದೆ. ಕನ್ನಡ ನಮ್ಮ ಮಾತೃಭಾಷೆ ಅವರಿಗೆ ಬೇಕಾಗಿಲ್ಲ ಎಂದು ಹರಿಹಾಯ್ದರು. ಚಾಮರಾಜನಗರವನ್ನು ಸರ್ಕಾರ ಕಡೆಗಣಿಸಿದೆ ಹಿಂದುಳಿದ ಗಡಿಪ್ರದೇಶವಾದ ಚಾಮರಾಜನಗರವನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ವಾಟಾಳ್‌ ನಾಗರಾಜ ಆರೋಪಿಸಿದರು.

ರಾಜ್ಯ ಸರ್ಕಾರಕ್ಕೆ ಚಾಮರಾಜನಗರ ಇದೆ ಎಂಬುವುದೇ ಗೊತ್ತಿಲ್ಲ. ಆಯವ್ಯಯದಲ್ಲಿ ನಯಾ ಪೈಸೆ ನೀಡಿಲ್ಲ. ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡುವವರು ಯಾರು ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಜಿಲ್ಲಾಭಿವೃದ್ಧಿ ಬಗ್ಗೆ ಚಿಂತನೆ ನಡೆಸಿಲ್ಲ. ಜಿಲ್ಲೆಯಾಗಿ 25 ವರ್ಷ ತುಂಬಿದೆ. ರಜತ ಮಹೋತ್ಸವ ಮಾಡಿಲ್ಲ ಇದು ಅತ್ಯಂತ ಅಗೌರವವಾಗಿದೆ. ಮುಖ್ಯಮಂತ್ರಿಗಳು ಗಡಿಯಂಚಿನ ಚಾಮರಾಜನಗರವನ್ನು ಕಡೆಗಣಿಸಿದ್ದಾರೆ. ನಿರಂತರ ಮಳೆ, ಪ್ರವಾಹದಿಂದ ಚಂದಕವಾಡಿ ಹೋಬಳಿಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟಉಂಟಾಗಿದ್ದು, ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಜನತೆ ಸಂಕಷ್ಟದಲ್ಲಿದ್ದಾರೆ. ತಕ್ಣಣವೇ ಪರಿಹಾರ ನೀಡಬೇಕು ಎಂದು ವಾಟಾಳ್‌ ನಾಗರಾಜ ಆಗ್ರಹಿಸಿದರು.

Follow Us:
Download App:
  • android
  • ios