ಕುರುಗೋಡು(ಜೂ.11): ಸಮೀಪದ ಕುಡುತಿನಿ ಸುತ್ತಮುತ್ತಲಿನ ಜಿಂದಾಲ್‌ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ಪದಾಧಿಕಾರಿಗಳು ಕುಡುತಿನಿ ಪಪಂ ಅಧಿಕಾರಿಗಳಿಗೆ ಮತ್ತು ಪೊಲೀಸ್‌ ಅಧಿಕಾರಿ ಹಾಗೂ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದರು.

"

ಇದೇ ವೇಳೆ ಸಂಘದ ಅಧ್ಯಕ್ಷ ಬಾವಿ ಶಿವಕುಮಾರ್‌ ಮಾತನಾಡಿ, ಜಿಂದಾಲ್‌ನಲ್ಲಿ ಕೆಲಸ ಮಾಡಲು ಉತ್ತರ -ಪ್ರದೇಶ, ತಮಿಳನಾಡು, ಕೇರಳ, ಆಂ​ಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯ ಹಾಗೂ ದೇಶಗಳಿಂದ ಬರುತ್ತಾ​ರೆ. ಇಲ್ಲಿಗೆ ವಲಸೆ ಬಂದಿರುವ ಕಾರ್ಮಿಕರು ಮತ್ತು ಉದ್ಯೋಗಿಗಳಿಂದ ಈ ಕಾಯಿಲೆ ಜಿಂದಾಲ್‌ನಲ್ಲಿ ಅತಿ ಹೆಚ್ಚು ಹರಡುತ್ತಿದೆ. ಜಿಂದಾಲ್‌ ಕಾರ್ಖಾನೆ ರೋಗಿಗಳ ಸಂಖ್ಯೆಯನ್ನು ಸರಿಯಾಗಿ ಹೊರಬಿಡುತ್ತಿಲ್ಲ ಎಂದು ಹೇಳಿದ್ದಾರೆ. 

ಬಳ್ಳಾರಿ: ಹಂಪಿ ದೇವ​ಸ್ಥಾನಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ

ಹೊರಬಂದ ಮಾಹಿತಿ ಲೆಕ್ಕಕ್ಕಿಂತ ಹೆಚ್ಚು ಜನರಿಗೆ ಕೊರೊನಾ ಸೋಂಕು ಹರಡಿರಬಹುದೆಂದು ಎಲ್ಲರಲ್ಲೂ ಸಂಶಯ ಮೂಡಿದೆ. ಇದರಿಂದಾಗಿ ವಡ್ಡು, ತಾಳೂರು, ಸುಲ್ತಾನಪುರ, ಚಿಕ್ಕಂತಾಪುರ, ತೋರಣಗೊಲ್ಲು ಠಾಣೆ, ತೋರಣಗಲ್ಲು, ಕುಡುತಿನಿ ಈ ಎಲ್ಲ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಕೊರೋನಾ ಕಾಯಿಲೆಯ ಆತಂಕ ಶುರು​ವಾಗಿದೆ. ಆದ್ದರಿಂದ, ತಾತ್ಕಾಲಿಕವಾಗಿ ಕಾರ್ಖಾನೆಯನ್ನು ಮುಚ್ಚಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕೆ. ಜಂಗ್ಲಿಸಾಬ್‌, ಗುರುಬಸಪ್ಪ, ಮಲ್ಲಯ್ಯ, ಭೀಮ ಮತ್ತಿತರರು ಇದ್ದರು.