ಇಲ್ಲಿನ ವಿಧಾನಸಭೆ ಚುನಾವಣೆಯ ಕೈ ಪಕ್ಷದ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಸಮ್ಮುಖದಲ್ಲಿ ತಾಲೂಕಿನ ವೈ.ಎನ್‌.ಹೊಸಕೋಟೆ ಪಟ್ಟಣದ ಸುಮಾರು 20ಕ್ಕೂ ಹೆಚ್ಚು ಮುಸ್ಲಿಂ ಸಮಾಜದ ಮುಖಂಡರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

 ಪಾವಗಡ: ಇಲ್ಲಿನ ವಿಧಾನಸಭೆ ಚುನಾವಣೆಯ ಕೈ ಪಕ್ಷದ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಸಮ್ಮುಖದಲ್ಲಿ ತಾಲೂಕಿನ ವೈ.ಎನ್‌.ಹೊಸಕೋಟೆ ಪಟ್ಟಣದ ಸುಮಾರು 20ಕ್ಕೂ ಹೆಚ್ಚು ಮುಸ್ಲಿಂ ಸಮಾಜದ ಮುಖಂಡರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಮುಖಂಡರಾದ ಸೈಯದ್‌ ಡಿ.ಟಿ.ಮುಜೀಬ…, ಡಿ.ಟಿ.ಮಜರ್‌ ಸೈಯದ್‌ ನೂರ್‌ ಮೊಹಮ್ಮದ್‌, ಮುಜೀಬ…,ಮಜರ್‌ (ಎಲ್‌ಐಸಿ) ಡಿ.ಟಿ.ಮುಕ್ತಿಯಾರ್‌ ನೂರ್‌ ಮಹಮ್ಮದ್‌, ಟೈಲರ್‌ ಮಹಬೂಬ್‌ ಬಾಷ, ಮನ್ಸೂರ್‌ (ಗೋಲ್ಡ… ಸ್ಮಿತ್‌)ಝುಬೈರ್‌ (ಡ್ರೈವರ್‌) ಚಿಕನ್‌ ಸೆಂಟರ್‌ ಝಬಿ ಇತರೆ 20ಕ್ಕಿಂತ ಹೆಚ್ಚು ಮುಸ್ಲಿಂ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ - ಡಿಕೆಎಸ್

ಗುರುಮಠಕಲ್‌ (ಮಾ.26): ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್‌ ಕಾರ್ಯಕರ್ತರು ತಮ್ಮ ಮತ ವ್ಯರ್ಥ ಮಾಡಿಕೊಳ್ಳಬಾರದು ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಡಿ.ಕೆ.ಶಿವಕುಮಾರ್‌ ಹೇಳಿದರು. ಗುರುಮಠಕಲ್‌ ಮತಕ್ಷೇತ್ರದ ಸೈದಾಪುರ ಗ್ರಾಮದಲ್ಲಿ ಕಾಂಗ್ರೆಸ್‌ ವತಿಯಿಂದ ನಡೆದ ನೂತನ ಕಾಂಗ್ರೆಸ್‌ ಕಚೇರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಬಿಜೆಪಿ ಒಂದು ಸಲ ಮುಖ್ಯಮಂತ್ರಿ ಅವಕಾಶ ನೀಡಿದರು. ನಾವು ಸಹ ನೀಡಿದ್ದೇವು. ಆದರೆ, ನಿಭಾಯಿಸಿಕೊಂಡು ಹೋಗಲು ಅವರಿಂದ ಆಗಲಿಲ್ಲ. ಮುಂದೆಯು ಅಧಿಕಾರಕ್ಕೆ ಬರುವುದಿಲ್ಲ ಎಂದರು. ಗುರುಮಠಕಲ್‌ ಮತ್ತೆ ಕಾಂಗ್ರೆಸ್‌ ಭದ್ರಕೋಟೆ ಆಗುವಂತೆ ಮಾಡಿ ಡಾ. ಮಲ್ಲಿಕಾರ್ಜುನ ಖರ್ಗೆಗೆ ಶಕ್ತಿ ನೀಡಬೇಕು. ಅವರ ಕೈ ಬಲಪಡಿಸಬೇಕು. 

ಗೆಲುವಿನ ಕಾಣಿಕೆಯಾಗಿ ಕೊಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಖರ್ಗೆ ಅವರ ಋುಣ ತೀರಿಸಲು ನೀವು ಮುಂದಾಗಬೇಕು. ಅವರು ಗುರುಮಠಕಲ್‌ ಕ್ಷೇತ್ರಕ್ಕೆ ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು. ಆ ರೀತಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಬರಲು ಗುರುಮಠಕಲ್‌ ಕ್ಷೇತ್ರದಲ್ಲಿ ಜನರು ಅವರಿಗೆ ವಿಶ್ವಾಸ ತುಂಬಬೇಕು ಎಂದರು. ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರದಿಂದ ಕೂಡಿದೆ. ಇದರಿಂದ ರಾಜ್ಯದ ಜನರಿಗೆ ಒಳ್ಳೆಯದಾಗಲು ಪ್ರಿಯಾಂಕಾ ಗಾಂಧಿ ಇಲ್ಲಿನ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯವಾಗಲು 2000 ರು.ಗಳು ನೀಡಲು ಹೇಳಿದ್ದಾರೆ ಮತ್ತು ನಮ್ಮ ನಾಯಕ ರಾಹುಲ್‌ ಗಾಂಧಿ ಸಲಹೆಯಂತೆ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ 4000 ರು.ಗಳು ನೀಡಲು ಹೇಳಿದ್ದಾರೆ. ಉಚಿತ ವಿದ್ಯುತ್‌ ಕೊಡಲಾಗುವುದು ಎಂದು ಕಾಂಗ್ರೆಸ್‌ ಗ್ಯಾರಂಟಿ ಕುರಿತು ಮಾಹಿತಿ ನೀಡಿದರು.

ರಾಹುಲ್‌ ಗಾಂಧಿ ಒಪ್ಪಿದರಷ್ಟೇ 2 ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ?

ರಾಹುಲ್‌ ಧ್ವನಿ ಹತ್ತಿಕ್ಕಲು ಬಿಜೆಪಿ ಯತ್ನ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ಕಾಂಗ್ರೆಸ್‌ ಹೆದರುವುದಿಲ್ಲ ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಗುರುಮಠಕಲ್‌ ಮತಕ್ಷೇತ್ರದ ಸೈದಾಪುರ ಗ್ರಾಮದಲ್ಲಿ ನಡೆದ ನೂತನ ಕಾಂಗ್ರೆಸ್‌ ಕಚೇರಿ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರದಿಂದ ಕೂಡಿದೆ. ರಾಜ್ಯದ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಸಲಹೆಯಂತೆ 2000 ರು. ಹಾಗೂ ನಿರುದ್ಯೋಗಿ ಯುವಕರಿಗೆ ರಾಹುಲ್‌ ಗಾಂಧಿ ಸಲಹೆಯಂತೆ 4000 ರು. ನೀಡಲಾಗುವುದು. ಅಲ್ಲದೆ, ಉಚಿತ ವಿದ್ಯುತ್‌ ಕೊಡಲಾಗುವುದು ಎಂದು ಕಾಂಗ್ರೆಸ್‌ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದರು.

ಬೊಮ್ಮಾಯಿ, ಎಚ್‌ಡಿಕೆ, ಅಶೋಕ್‌, ಈಶ್ವರಪ್ಪ, ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ಘೋಷಣೆ ಇಲ್ಲ!

ಗುರುಮಠಕಲ್‌ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‌ ಭದ್ರಕೋಟೆ ಆಗುವಂತೆ ಮಾಡಿ ಡಾ.ಮಲ್ಲಿಕಾರ್ಜುನ ಖರ್ಗೆಗೆ ಶಕ್ತಿ ನೀಡಬೇಕು. ಖರ್ಗೆ ಅವರ ಋುಣ ತೀರಿಸಲು ನೀವು ಮುಂದಾಗಿ, ಗೆಲುವಿನ ಕಾಣಿಕೆ ಕೊಡಬೇಕು ಎಂದು ಕಾರ‍್ಯಕರ್ತರಿಗೆ ಕರೆ ನೀಡಿದರು. ಜೆಡಿಎಸ್‌ ಅಧಿಕಾರಕ್ಕೆ ಬರಲ್ಲ: ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್‌ ಕಾರ್ಯಕರ್ತರು ತಮ್ಮ ಮತ ವ್ಯರ್ಥ ಮಾಡಿಕೊಳ್ಳಬಾರದು ಎಂದ ಅವರು, ಕುಮಾರಸ್ವಾಮಿ ಅವರನ್ನು ಬಿಜೆಪಿ ಒಂದು ಸಲ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದರು. ನಾವೂ ಸಹ ನೀಡಿದ್ದೆವು. ಆದರೆ, ನಿಭಾಯಿಸಿಕೊಂಡು ಹೋಗಲು ಅವರಿಂದ ಆಗಲಿಲ್ಲ. ಮುಂದೆಯೂ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದರು.