ರಾಯಚೂರು(ಫೆ. 26) ' ಕಂಪನಿಯಲ್ಲಿ ಕೆಲಸ ಮಾ ಡುವಾಗ ಮರಣಕ್ಕೆ ಗುರಿಯಾದರೆ ಅವರ ಮಕ್ಕಳಿಗೆ ಕೆಲಸ ಇಲ್ಲ, ಕಳೆದ ಮೂರು ವರ್ಷಗಳಿಂದ ಯಾರಿಗೂ ಕೆಲಸ ಕೊಟ್ಟಿಲ್ಲ' ಇದು ರಾಯಚೂರು ಹಟ್ಟಿ ಗಣಿ ಕಾರ್ಮಿಕರ ಆರೋಪ

ಭೇಟಿ ನೀಡಿದ್ದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಒಂದು ಕಡೆ ಬಿಡದಿಯಲ್ಲಿ ಟೋಯೋಟಾ ಪ್ರತಿಭಟನೆ ನಡೆಯುತ್ತಿದ್ದರೆ ಇಲ್ಲಿಯ ಕಾರ್ಮಿಕರು ತಮ್ಮ ನೋವು ಹೇಳಿಕೊಂಡರು.

ಟೊಯೋಟಾದ ಅಸಲಿ ಕತೆ ತೆರೆದಿರಿಸಿದ ಕವರ್ ಸ್ಟೋರಿ

ಸಚಿವರಿಗೆ ಬಾಯಿಗೆ ಬಂದಂತೆ ಬೈದು ಆಕ್ರೋಶ ಹೊರಹಾಕಿದ ಘಟನೆಯೂ ನಡೆಯಿತು.  60 ಜನ ಸಂತ್ರಸ್ತರಿಗೆ ಹಟ್ಟಿ ಕಂಪನಿಯಲ್ಲಿ ಕೆಲಸ ಕೊಟ್ಟಿಲ್ಲ. ನಾವು ಸತ್ತ ಮೇಲೆ ನಮ್ಮ ಕುಟುಂಬದವರು ಏನು ಮಾಡಬೇಕು? ಎಂದು ಕಾರ್ಮಿಕರು ಪ್ರಶ್ನೆ ಮಾಡಿದರು.

ಮುರುಗೇಶ್ ನಿರಾಣಿಗೆ ಘೇರಾವ್  ಹಾಕಲು ಯತ್ನ ನಡೆಯಿತು.  ಕಾರ್ಮಿಕರ ಆಕ್ರೋಶ ನೋಡಿ ಮೌನದಿಂದಲೇ ಸಚಿವರು ಹೊರನಡೆದರು. ಅನುಕಂಪದ ಆಧಾರದಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬುದು ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ.