ಬೆಂಗಳೂರು(ಜ. 27 ) ಗಣಿ ಅಕ್ರಮ,ಸಕ್ರಮದ ಬಗ್ಗೆ ಅದಾಲತ್ ನಡೆಸುತ್ತೇವೆ.  ಇದರಿಂದ ಶೇ. 70 ರಷ್ಟು ಸಮಸ್ಯೆ ಪರಿಹಾರವಾಗುತ್ತದೆ.  ಮೈನ್ ಪರ್ಮಿಷನ್ ಗೆ ಹತ್ತಾರು ಅನುಮತಿಗಳು ಬೇಕು. ಕಲಾಪ ಮುಗಿದ ನಂತರ ಈ ಅದಾಲತ್ ಆರಂಭವಾಗಲಿದೆ ಎಂದು  ಗಣಿ ಮತ್ಭೂತು ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಉಸುಕು,ಕಡಿ,ಅದಿರು ಮೈನಿಂಗ್ ಬೇಕೇ ಬೇಕು. ಕೈಗಾರಿಕೆಗಳಿಗೆ ಇವು ಅತ್ಯವಶ್ಯಕವೂ ಹೌದು.ಹೀಗಾಗಿ ಅಕ್ರಮಕ್ಕೆ ಸಕ್ರಮ ಮಾಡುವ ಪ್ರಯತ್ನ ಮಾಡ್ತೇವೆ. ಸಣ್ಣಕೈಗಾರಿಕೆಗಳ ಬೆಳವಣಿಗೆಗೆ ಇದು ಸಹಾಯಕಾರಿ. ಬೇರೆ ರಾಜ್ಯಕ್ಕಿಂತ ಹೆಚ್ಚು ಅದಿರು ನಮ್ಮಲ್ಲಿದೆ. ಇದರ ಸದುಪಯೋಗ ನಾವು ಮಾಡಿಕೊಳ್ಳಬೇಕಿದೆ. ಆರ್ ಎಂಡಿ ಗಳಿಗೆ ಅನುಮತಿ ಅಗತ್ಯವಿದೆ ಎಂದರು.

ನಿರಾಣಿಗೆ ಮಂತ್ರಿಗಿರಿ ಕೊಡಿಸಿದ್ದೇ ಇವರು, ರೋಚಕ ಆಪರೇಶನ್

ಹಟ್ಟಿ ಚಿನ್ನದ ಗಣಿ ಲಾಭದಾಯಕವಾಗಿದೆ. 760 ಕೋಟಿ ಆದಾಯ ಹರಿದುಬರುತ್ತಿದೆ. ಆದರೆ ಪವರ್ ಜನರೇಟ್ ಕ್ಯಾಪಾಸಿಟಿ ಅವರಿಗಿಲ್ಲ. ತಮಗೆ ಬೇಕಾದ ಪವರ್ ಅವರೇ ಜನರೇಟ್ ‌ಮಾಡಬಹುದು. ಗೋಲ್ಡ್ ನಂತರ ಹಲವು ಪದಾರ್ಥ ಉಳಿಯುತ್ತವೆ. ಈ ಉಳಿಕೆ ಪದಾರ್ಥಗಳನ್ನ ಸದುಪಯೋಗ ಮಾಡಿಕೊಳ್ಳಬಹುದು. ಇದನ್ನ ಪವರ್ ಜನರೇಟ್ ಗೆ ಬಳಸಿಕೊಳ್ಳಬಹುದು ಎಂದರು.

ಇದೇ ಕಾರಣಕ್ಕೆ ಮೈನಿಂಗ್ ಸ್ಕೂಲ್ ಪ್ರಾರಂಭಿಸಲಾಗುತ್ತದೆ.  ಸೇಫ್ಟೀ ಮೆಜರ್ ಮೆಂಟ್ ಗಾಗಿ ಈ ಸ್ಕೂಲ್ ಸ್ಥಾಪಿಸಬೇಕಿದೆ. ಮೈನಿಂಗ್ ಸ್ಥಾಪನೆಗೆ ಇದು ಅನುಕೂಲವಾಗಲಿದೆ.  ಮೈನಿಂಗ್ ಇರುವ ಕಡೆಯೂ ಈ ಸ್ಕೂಲ್ ಪ್ರಾರಂಭಕ್ಕೆ ಅವಕಾಶವಿದೆ. ಮುಚ್ಚಿರುವ ಕಾರ್ಖಾನೆಗಳ ಬಳಿಯೂ ಮಾಡಬಹುದು ಎಂದುನ ಅಭಿಪ್ರಾಯಪಟ್ಟರು .