ಮಂಗಳೂರು(ಜು.21): ಬಂಟ್ವಾಳದ ಎರಡು ವಿದ್ಯಾರ್ಥಿನಿಲಯಗಳು ಸುಧಾರಣೆಯಾಗಬೇಕಾಗಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಒಂದು ತಿಂಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಂದು ಲೋಕಾಯುಕ್ತ ಸಿ.ವಿಶ್ವನಾಥ ಶೆಟ್ಟಿ ಅವರು ಹೇಳಿದರು.

'ನಾನು ಬರ್ತೀನಂತ ಶಾಲೆ ಸ್ವಚ್ಛ ಮಾಡಿದ್ರಾ':

ಶನಿವಾರ ಬಂಟ್ವಾಳ ತಾಲೂಕಿಗೆ ಭೇಟಿ ನೀಡಿದ ಅವರು, ವಿವಿಧ ಸರ್ಕಾರಿ ಇಲಾಖೆಗಳಿಗೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮವರ ಜೊತೆ ಮಾತನಾಡಿದರು. ಬಿ.ಸಿ. ರೋಡಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗೆ ಭೇಟಿ ನೀಡಿ, ಶಾಲಾ ಕಟ್ಟಡದ ಗುಣಮಟ್ಟದ ಬಗ್ಗೆ ವಿವರಣೆ ಕೇಳಿದ ಸಂದರ್ಭ ಅಲ್ಲಿನ ಅಧಿಕಾರಿಗಳು ನೀಡಿದ ಉತ್ತರವೊಂದಕ್ಕೆ ಗರಂ ಅದ ಲೋಕಾಯುಕ್ತರು, ಗೋಡೆಗಳಲ್ಲಿ ಪಾಚಿ ಹಿಡಿದಿದೆ, ಕಟ್ಟಡದಲ್ಲಿ ಬಿರುಕು ಬಿಟ್ಟು ನೀರು ಸೋರಿಕೆಯಾಗುತ್ತಿದೆ, ನಾನು ಬರುತ್ತೇನೆಂದು ತಿಳಿದು ವಸತಿ ಶಾಲೆಯನ್ನು ಶುಚಿತ್ವ ಮಾಡಿ ಇಟ್ಟಿದ್ದೀರಾ..? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಹಿತಿ:

ಕೈಕಂಬದ ಮೊಡಂಕಾಪು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡರು. ಹಳೆಯ ಕಟ್ಟಡವಾಗಿದ್ದರಿಂದ ಈ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯುವಂತೆಯೂ ತಿಳಿಸಿದರು. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು ಇದ್ದು, ಇಲ್ಲಿನ ವಠಾರ ಶುಚಿತ್ವ ಕಾಪಾಡಲು ಮತ್ತು ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ತಿಳಿಸಿದರು.

ಲೋಕಾಯುಕ್ತ ಅಧಿಕಾರಿ ಪುತ್ರನ ಅಪಹರಣಕ್ಕೆ ಯತ್ನ

ಅಲ್ಲಿನ ವಿದ್ಯಾರ್ಥಿಗಳು ಇಲಾಖೆಯ ವತಿಯಿಂದ ಪ್ರವಾಸದ ಅವಕಾಶ ಮಾಡಿಕೊಡುವಂತೆ ಲೋಕಾಯುಕ್ತರಲ್ಲಿಕೇಳಿಕೊಂಡಾಗ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು