ಗದಗದ ನಗರ ಮತದಾರ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಜೈ ಎಂದಿದ್ದಾನೆ. ರಾಜ್ಯದ ಆಡಳಿತದಲ್ಲಿ ಪಾಲು ಹಂಚಿಕೊಂಡಿರುವ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಸಿಕ್ಕಿದೆ. ಎಚ್.ಕೆ.ಪಾಟೀಲರಿಗೆ ಸಚಿವ ಸ್ಥಾನ ಸಿಗದಿದ್ದರೂ ಅವರ ಪ್ರಭಾವ ಮಾತ್ರ ಕಡಿಮೆ ಆಗಿಲ್ಲ.

ಗದಗ[ಸೆ.3] ಎಚ್.ಕೆ ಪಾಟೀಲ್ ನಾಯಕತ್ವದಲ್ಲಿ ಕಾಂಗ್ರೆಸ್ಗೆ ಮೇಲುಗೈ ಸಾಧಿಸಿದೆ. 3 ಪುರಸಭೆ ಪೈಕಿ 1 ಕಾಂಗ್ರೆಸ್, 1 ಬಿಜೆಪಿಗೆ ಸಿಕ್ಕಿದೆ. * 3 ಪಪಂ ಪೈಕಿ 2 ಕಾಂಗ್ರೆಸ್, 1 ಬಿಜೆಪಿ ಪಾಲಾಗಿದೆ. ಲಕ್ಷ್ಮೇಶ್ವರ ಅತಂತ್ರ ಆಗಿದ್ದರೂ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ.

ರೋಣದ ಶಾಸಕ ಕಳಕಪ್ಪ ಬಂಡಿ ಅವರಿಗೆ ಸಿಹಿ-ಕಹಿ ಎರಡೂ ಸಿಕ್ಕಿದೆ. ರೋಣ ಪುರಸಭೆ ಕಾಂಗ್ರೆಸ್ ಪಾಲಾಗಿ, ಅದೇ ಕ್ಷೇತ್ರದ ಗಜೇಂದ್ರಗಢ ಬಿಜೆಪಿಗೆ ಒಲಿದಿದೆ. ಒಟ್ಟಿನಲ್ಲಿ ಗದಗ ಕಾಂಗ್ರೆಸ್ ಪ್ರಭಾವನನ್ನು ಹಾಗೆ ಉಳಿಸಿಕೊಂಡಿರುವುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ.

ಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ರೋಣ ಪುರಸಭೆ 2307150001
ಗಜೇಂದ್ರಗಡ ಪುರಸಭೆ2318050000
ಲಕ್ಷ್ಮೇಶ್ವರ ಪುರಸಭೆ2307090205
ನರೇಗಲ್ ಪ.ಪಂ.1712030002
ಮುಳಗುಂದ ಪ.ಪಂ.1903150001
ಶಿರಹಟ್ಟಿ ಪ.ಪಂ.1807100001
ಒಟ್ಟು12354570210