ತಂತ್ರಜ್ಞಾನ ದೈತ್ಯವಾಗಿ ದೇಶ ಮುನ್ನಡೆಸುತ್ತಿರುವ ಕರ್ನಾಟಕ
ಕರ್ನಾಟಕವು ತಂತ್ರಜ್ಞಾನ ದೈತ್ಯವಾಗಿ ದೇಶವನ್ನು ಮುನ್ನಡೆಸುತ್ತಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ತಿಳಿಸಿದರು.
ಮೈಸೂರು : ಕರ್ನಾಟಕವು ತಂತ್ರಜ್ಞಾನ ದೈತ್ಯವಾಗಿ ದೇಶವನ್ನು ಮುನ್ನಡೆಸುತ್ತಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ತಿಳಿಸಿದರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಎಚ್. ಕೆಂಪೇಗೌಡ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ಆಯೋಜಿಸಿದ್ದ ಯುವ-20 ಶೃಂಗಸಭೆಯ ಉದ್ಘಾಟಿಸಿ ಮಾತನಾಡಿದ ಅವರು, ಪರಿಣಾಮಕಾರಿ ತಾಂತ್ರಿಕ ಜ್ಞಾನ, ವಿಶ್ಲೇಷಣಾತ್ಮಕ, ಸಮಸ್ಯೆ ಪರಿಹಾರ, ಸೃಜನಶೀಲ ಚಿಂತನೆ, ಪರಸ್ಪರ, ಸಂವಹನ, ತಂಡದ ಕೆಲಸ ಮತ್ತು ವಾಣಿಜ್ಯ ಬಳಕೆಯಂತಹ ಪ್ರಮುಖ ಕೌಶಲ್ಯಗಳನ್ನು ಯುವಕರು ಹೊಂದಿರಬೇಕು ಎಂದು ಸಲಹೆ ನೀಡಿದರು.
ಕೈಗಾರಿಕೆ- ಅಕಾಡೆಮಿಯ ಕೌಶಲ್ಯ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಶೃಂಗಸಭೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ವಿವಿಸಿಇ ಪ್ರಾಂಶುಪಾಲ ಡಾ.ಬಿ. ಸದಾಶಿವೇಗೌಡ ಮಾತನಾಡಿ, ಹೊಸ ಆಲೋಚನೆಗಳನ್ನು ರೂಪಿಸಲು ಮತ್ತು ಮುಂದಿನ ಒಂದು ವರ್ಷದಲ್ಲಿ ಸಾಮೂಹಿಕ ಕ್ರಿಯೆಯನ್ನು ವೇಗಗೊಳಿಸಲು ಜಿ20 ಜಾಗತಿಕ ಪ್ರಧಾನ ಮೂವರ್ ಆಗಿ ಕಾರ್ಯನಿರ್ವಹಿಸುತ್ತದೆಂದು ಖಚಿತಪಡಿಸಿಕೊಳ್ಳಲು ಭಾರತವು ಶ್ರಮಿಸುತ್ತದೆ ಎಂದು ತಿಳಿಸಿದರು.
ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ವಿವಿಧ ಎಂಜಿನಿಯರಿಂಗ್ ಸಂಸ್ಥೆಗಳ ಪ್ರಾಂಶುಪಾಲರು, 5000 ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪಾಲ್ಗೊಂಡಿದ್ದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್ ಮೊದಲಾದವರು ಇದ್ದರು.
ಗ್ರಾಮ ಒನ್‌ಗೆ ಇನ್ನಷ್ಟು ಶಕ್ತಿ
ಬೆಂಗಳೂರು (ಫೆ.23): ರಾಜ್ಯ ಸರ್ಕಾರದ ‘ಗ್ರಾಮ ಒನ್’ ಅತ್ಯಂತ ಕ್ರಾಂತಿಕಾರಿ ಹಾಗೂ ನನ್ನ ಕನಸಿನ ಯೋಜನೆಯಾಗಿದ್ದು ರಾಜ್ಯದ ಜನರ ವಿಶ್ವಾಸಗಳಿಸಿದೆ. ಸರ್ಕಾರದ ನೂರಾರು ಸೇವೆಗಳು ಈ ಯೋಜನೆ ಮೂಲಕ ಮನೆ ಮನೆಗೆ ತಲುಪುತ್ತಿದ್ದು ಬರುವ ದಿನಗಳಲ್ಲಿ ಇದನ್ನು ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಇನ್ನಷ್ಟು ಬಲಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸರ್ಕಾರದ ಮಹತ್ವಾಕಾಂಕ್ಷಿ ‘ಗ್ರಾಮ ಒನ್’ ಯೋಜನೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಮತ್ತು ಸೇವಾ ಮನೋಭಾವ ಜೊತೆಗೂಡಿದರೆ, ದೇಶದಲ್ಲಿ ಸರ್ಕಾರದ ವ್ಯವಸ್ಥೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಿಗೂ ತಲುಪಿಸಲು ಸಾಧ್ಯ ಎನ್ನುವುದನ್ನು ‘ಗ್ರಾಮ ಒನ್’ ಕಾರ್ಯಕ್ರಮದ ಯಶಸ್ಸು ನಿರೂಪಿಸಿದೆ. ಇದೊಂದು ಕ್ರಾಂತಿಕಾರಿ ಯೋಜನೆ. ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಒನ್‌ಗಳಲ್ಲಿ ಇನ್ನಷ್ಟುಸೇವೆಗಳು, ಅಂತರ್ಜಾಲಕ್ಕೆ ವೇಗ ಮತ್ತು ಮೆಮೋರಿ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತನ್ಮೂಲಕ ಆರ್ಥಿಕ ಮತ್ತು ತಂತ್ರಜ್ಞಾನದ ಮೂಲಕ ಯೋಜನೆಯನ್ನು ಇನ್ನಷ್ಟುಉತ್ತಮಗೊಳಿಸಲಾಗುವುದು ಎಂದರು.
ರಾಜಕೀಯ ಪಕ್ಷಗಳಿಗೆ ದೇಶದ ನಿಜವಾದ ಬಡತನದ ಬಗ್ಗೆ ಅರಿವಿಲ್ಲ: ಎಚ್.ಡಿ.ಕುಮಾರಸ್ವಾಮಿ
ಮನೆ ಮನೆಗೆ ಸೇವೆ ತಲುಪಿಸುವ ಉದ್ದೇಶದಿಂದ ತಂತ್ರಜ್ಞಾನ ಬಳಕೆಯೊಂದಿಗೆ ಗ್ರಾಮ ಒನ್ ಯೋಜನೆ ಜಾರಿಯಾಗಿದೆ. ಜಾತಿ ಆದಾಯ ಪ್ರಮಾಣ ಪತ್ರದಿಂದ ಹಿಡಿದು ಸರ್ಕಾರದಿಂದ ಸಿಗಬೇಕಾದ ಅನೇಕ ಪ್ರಮಾಣ ಪತ್ರ, ಸೇವೆಗಳನ್ನು ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಗ್ರಾಮ ಒನ್ ಸೇವೆ ಆರಂಭಿಸಿ ಮನೆ ಮನೆಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುತ್ತಿದೆ. ಈ ಸೇವೆ ಸೇವೆಯಾಗಿಯೇ ಉಳಿಯಬೇಕು. ಈ ಯೋಜನೆ ಮೂಲಕ ಸರ್ಕಾರದ ಅಧಿಕಾರವನ್ನು ಗ್ರಾಮಮಟ್ಟಕ್ಕೆ ನೀಡಲಾಗಿದೆ. ಸೇವಾ ಮನೋಭಾವ ಹೆಚ್ಚಾದಂತೆ ಜನರಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯವಿದೆ. ಇದು ಜೀವನೋಪಾಯ ಹಾಗೂ ಜ್ಞಾನಾರ್ಜನೆಗೂ ಕೂಡ ಸಹಕಾರಿ.
ಸೇವೆಗಳ ಮೂಲಕ ನಿಮ್ಮನ್ನು ಸಬಲರಾಗಿಸಲಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಬೇಕು ಎಂದು ಯೋಜನೆಯ ಭಾಗೀದಾರರಿಗೆ ಸಲಹೆ, ಸೂಚನೆಗಳನ್ನು ನೀಡಿದರು. ಗ್ರಾಮ ಒನ್ ಕೇಂದ್ರದಿಂದ ಬಂದ ಅರ್ಜಿಗಳು ವಿಲೇವಾರಿ ಆಗಲು ವಿಳಂಬವಾದರೆ ತಹಸಿಲ್ದಾರ್ ಕಚೇರಿಗೂ ಇದಕ್ಕೂ ವ್ಯತ್ಯಾಸ ಇರುವುದಿಲ್ಲ. ಪ್ರಾಮಾಣಿಕತೆಯಿಂದ, ದಕ್ಷತೆಯಿಂದ, ವೇಗವಾಗಿ ಕೆಲಸಮಾಡಬೇಕು. ಗ್ರಾಮ ಒನ್ ನಿಂದ ಉತ್ತಮ ಕೆಲಸಗಳಾಗುತ್ತಿದೆ. ಇದರಿಂದ ಜನರಲ್ಲಿ ವಿಶ್ವಾಸ ಮೂಡಿದೆ. ಒಂದು ವರ್ಷದಲ್ಲಿ ಒಂದೂವರೆ ಕೋಟಿಗೂ ಮೀರಿದ ಸೇವೆಗಳನ್ನು ನೀಡಲಾಗಿದ್ದು, ಮುಂದಿನ ವರ್ಷದಲ್ಲಿ ಮೂರು ಕೋಟಿಗೆ ಮುಟ್ಟುವ ಗುರಿ ಹಾಕಿಕೊಳ್ಳಬೇಕು ಎಂದು ಕರೆ ನೀಡಿದರು.