ಕಗ್ಗತ್ತಲಲ್ಲಿ ಕರ್ನಾಟಕ ಮುಳುಗುತ್ತಿದೆ - ಶಾಸಕ ಬಿ. ಸುರೇಶಗೌಡ

ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಹಾಗೂ ಬಿಟ್ಟಿಭಾಗ್ಯಗಳಿಗೆ ಹಣ ಹೊಂದಿಸಲು ಹೋಗಿ ವಿದ್ಯುತ್‌ ನಿಗಮಗಳಿಗೆ ಸಮರ್ಪಕ ಹಣ ನೀಡದೆ ಒಂದಿಲ್ಲೊಂದು ನೆಪವೊಡ್ಡಿ ವಿದ್ಯುತ್‌ ಪೂರೈಕೆ ಕಡಿತ ಮಾಡುತ್ತಿರುವುದಕ್ಕೆ ಪ್ರತಿನಿತ್ಯ, ನಾಗರಿಕರು, ರೈತರು, ವಿದ್ಯಾರ್ಥಿಗಳು ಮಹಿಳೆಯರು ನರಕಯಾತನೆ ಅನುಭವಿಸುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.

Karnataka is drowning in chaos - MLA B. Suresh Gowda snr

  ತುಮಕೂರು :  ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಹಾಗೂ ಬಿಟ್ಟಿಭಾಗ್ಯಗಳಿಗೆ ಹಣ ಹೊಂದಿಸಲು ಹೋಗಿ ವಿದ್ಯುತ್‌ ನಿಗಮಗಳಿಗೆ ಸಮರ್ಪಕ ಹಣ ನೀಡದೆ ಒಂದಿಲ್ಲೊಂದು ನೆಪವೊಡ್ಡಿ ವಿದ್ಯುತ್‌ ಪೂರೈಕೆ ಕಡಿತ ಮಾಡುತ್ತಿರುವುದಕ್ಕೆ ಪ್ರತಿನಿತ್ಯ, ನಾಗರಿಕರು, ರೈತರು, ವಿದ್ಯಾರ್ಥಿಗಳು ಮಹಿಳೆಯರು ನರಕಯಾತನೆ ಅನುಭವಿಸುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಬಾಣಾವರದಲ್ಲಿ ಪಕ್ಷದ ಕಾರ್ಯಾಲಯದಲ್ಲಿ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್‌ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.ನಿತ್ಯ ಮೂರು ನಾಲ್ಕು ಗಂಟೆ ಕೂಡ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಉಚಿತ ವಿದ್ಯುತ್‌ ನೀಡುವ ಗ್ಯಾರಂಟಿ ನೀಡಿದ್ದ ಕಾಂಗ್ರೆಸ್‌ ಪಕ್ಷದ ಸರ್ಕಾರ ಸಮರ್ಪಕ ವಿದ್ಯುತ್‌ ಪೂರೈಸದೆ ಸಂಪೂರ್ಣ ವಿಫಲವಾಗಿದೆ. ಕಡಿತಗೊಳ್ಳುತ್ತಿರುವ ವಿದ್ಯುತ್‌ ಸರಬರಾಜು ಮಾಡುವಲ್ಲಿ ರಾಜ್ಯ ರಾಜ್ಯ ಕಾಂಗ್ರೆಸ್‌ ಸರ್ಕಾರ ತೋರುತ್ತಿರುವ ನಿಷ್ಕಾಳಜಿಗೆ ಜನಸಾಮಾನ್ಯರು ಹೀಗಾಗಲೇ ಹಿಡಿಶಾಪ ಹಾಕುತ್ತಿದ್ದಾರೆ. ಈ ಗ್ಯಾರಂಟಿಯೂ ಬೇಡ ಈ ಸಮಸ್ಯೆಯೂ ಬೇಡ. ಗ್ಯಾರಂಟಿ ಯೋಜನೆಯಲ್ಲಿ ಉಚಿತ ವಿದ್ಯುತ್‌ ಬೇಡ ಸಮರ್ಪಕ ವಿದ್ಯುತ್‌ ಸರಬರಾಜು ಮಾಡಿ ಎಂದು ಕೇಳುವ ಕಾಲ ದೂರ ಇಲ್ಲ ಎಂದರು.

ರಾಜ್ಯದಲ್ಲಿ ಗಾಳಿಯಿಂದ ಉತ್ಪಾದನೆ ಆಗುವ ವಿಂಡ್‌ ಪವರ್‌ ಸಪ್ಲೆ ಆಗುವ ಪ್ರಮಾಣ ಕಡಿಮೆ ಆಗಿದೆ ಎಂದು ಕಾಂಗ್ರೆಸ್‌ ಸರ್ಕಾರ ಕುಂಟು ನೆಪ ಹೇಳಿಕೊಂಡು ವಿದ್ಯುತ್‌ ಕಡಿತ ಮಾಡುತ್ತಿದೆ. ಇದಕ್ಕೆಲ್ಲಾ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹಣ ಪೂರೈಕೆ ಆಗದೆ ಇರುವುದರಿಂದ ಒಲ್ಲದ ಮನಸ್ಸಿನ ವ್ಯಕ್ತಿಗೆ ಮೊಸರಲ್ಲಿ ಕಲ್ಲು ಎಂಬಂತೆ ವಿದ್ಯುತ್‌ ಪೂರೈಕೆ ಮಾಡಲು ಸಮರ್ಥ ಇಲ್ಲದ ಕಾಂಗ್ರೆಸ್‌ ಪಕ್ಷ ಈ ರೀತಿಯ ಕಾರಣಗಳನ್ನು ಹೇಳಿಕೊಂಡ ನಾಗರಿಕರ ಬಗ್ಗೆ ಗಮನ ಇಲ್ಲದೆ ದಿವ್ಯ ನಿರ್ಲಕ್ಷ್ಯ ಮಾಡುತ್ತಿದೆ. ಕಳೆದ ನಾಲ್ಕು ದಿನಗಳಿಂದ ಕರ್ನಾಟಕ ಕಗ್ಗತ್ತಲಲ್ಲಿ ಮುಳುಗಿದೆ ಇದು ಇನ್ನು ಮುಂದೆ ಹೀಗೇ ಮುಂದುವರಿಯುವ ಆತಂಕ ಎದುರಾಗಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ಶೇಕಡಾ 45ರಷ್ಟುವಿದ್ಯುತ್‌ ಪೂರೈಕೆ ಮಾಡುವ ರಾಯಚೂರಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಎಂಟು ಘಟಕಗಳಲ್ಲಿ ನಾಲ್ಕು ಘಟಕಗಳು ವಿದ್ಯುತ್‌ ಉತ್ಪಾದನೆ ನಿಲ್ಲಿಸಿವೆ. 1720 ಮೆಗಾ ವ್ಯಾಚ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯದ ಆರ್‌ಟಿಪಿಎಸ್‌ ಕೇವಲ 500 ಮೆಗಾವ್ಯಾಚ್‌ನಷ್ಟುವಿದ್ಯುತ್‌ ಉತ್ಪಾದಿಸಿದೆ. ಬಳ್ಳಾರಿಯ ಕುಡಿತಿನಿ ಬಳಿ ಇರುವ ಬಿಟಿಪಿಎಸ್‌ ಶಾಖೋತ್ಪನ್ನ ಸ್ಥಾವರದಲ್ಲೂ ಕಡಿಮೆ ಆಗಿದೆ. ಇದೆಲ್ಲವನ್ನು ನೋಡಿದರೆ ಇರುವ ವಿದ್ಯುತ್‌ ಸಂಪೂರ್ಣ ಖಾಲಿಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ ಅವರು ರಾಜ್ಯವನ್ನು ಸಂಪೂರ್ಣವಾಗಿ ಕತ್ತಲಿಗೆ ದೂಡುವ ಕಾಲ ದೂರ ಇಲ್ಲ ಇದರ ಸಾಧ್ಯತೆ ಹೆಚ್ಚಿದೆ ಎಂದರು.

ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಆಗುತ್ತಿಲ್ಲ, ಇದರ ಬಿಸಿ ಈಗಾಗಲೇ ನಾಗರಿಕರಿಗೆ ತಟ್ಟಿದೆ. ಎರಡು ತಿಂಗಳಲ್ಲೇ ಈ ಪರಿಸ್ಥಿತಿ ಆದರೆ ಮುಂದೆ 5 ವರ್ಷದ ಪರಿಸ್ಥಿತಿ ಏನು? ಹಾಗಾಗಿ ಜನಸಾಮಾನ್ಯರು ಮತ್ತು ಮತದಾರ ಪ್ರಭುಗಳು ಎಚ್ಚೆತ್ತುಕೊಳ್ಳಬೇಕು. ಉಚಿತ ಯೋಜನೆಗಳಿಗೆ ಮಾರು ಹೋಗಿ ಇಂದು ಅನುಭವಿಸುತ್ತಿರುವ ಕಷ್ಟನೋಡುತ್ತಿರುವ ಜನತೆ ಮುಂದಿನ ದಿನಗಳಲ್ಲಿ ಬರುವಂತಹ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Latest Videos
Follow Us:
Download App:
  • android
  • ios