Asianet Suvarna News Asianet Suvarna News

ಝೀರೋ ಟ್ರಾಫಿಕ್ ಬೇಡವೆಂದ ಗೃಹ ಸಚಿವ ಜ್ಞಾನೇಂದ್ರ

* ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದ ಗೃಹ ಸಚಿವ
* ಪೊಲೀಸ್  ಇಲಾಖೆಗೆ ಮೌಖಿಕ ಸೂಚನೆ ನೀಡಿದ ಸಚಿವ
* ಸರಳ ವ್ಯಸಸ್ಥೆ ಬಳಕೆಗೆ ಮುಂದಾದ ಸಚಿವ
* ತೀರ್ಥಹಳ್ಳಿ ಶಾಸಕ ಕರ್ನಾಟಕದ ಗೃಹ ಸಚಿವ

Karnataka home minister araga jnanendra rejects zero traffic privileges mah
Author
Bengaluru, First Published Aug 9, 2021, 7:13 PM IST

ಬೆಂಗಳೂರು(ಆ.  09)  'ಜೀರೋ ಟ್ರಾಫಿಕ್ ಬೇಡ, ಸಿಗ್ನಲ್ ಫ್ರೀ ವ್ಯವಸ್ಥೆ ನನಗೆ ಬೇಡ'  ಹೌದು  ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಸರಳತೆಗೆ ನಾಂದಿ ಹಾಡಿದ್ದಾರೆ. ವಿಶೇಷ ಸವಲತ್ತು ಬೇಡ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ತೀರಾ ಅವಶ್ಯಕತೆ ಇದ್ದಾಗ ಮಾತ್ರ ಈ ಸೌಲಭ್ಯ ಬಳಸಿಕೊಳ್ತೀನಿ. ವಿಶೇಷ ಸವಲತ್ತು ಬೇಡ ಎಂದಿರುವ ಸಚಿವರು ಪೋಲೀಸ್ ಇಲಾಖೆಗೆ ಮೌಖಿಕ ಸೂಚನೆ ನೀಡಿದ್ದಾರೆ.

ಇದು ನರೇಂದ್ರ ಮೋದಿಯವರ ಜಮಾನ ಎಂದ ಗೃಹ ಸಚಿವ

ಆಯಕಟ್ಟಿನ ಸ್ಥಾನದಲ್ಲಿ ಇರುವವರು ಇಂಥ ಸೌಲಭ್ಯ ಬಳಸಿಕೊಳ್ಳುವುದು ಹಲವು ಸಾರಿ ಟೀಕೆಗೆ ಗುರಿಯಾಗುತ್ತಿತ್ತು. ಹಿಂದೆ ಡಾ. ಜಿ. ಪರಮೇಶ್ವರ ಗೃಹ ಸಚಿವರಾಗಿದ್ದಾಗ ಝೀರೋ ಟ್ರಾಫಿಕ್ ವ್ಯವಸ್ಥೆ ಬಳಸಿಕೊಂಡು ಟೀಕೆಗೆ ಗುರಿಯಾಗಿದ್ದರು. 

 ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಏರಿದರು. ಇದಾದ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ಒಲಿದು ಬಂದಿತ್ತು.

Follow Us:
Download App:
  • android
  • ios