Asianet Suvarna News Asianet Suvarna News

ವೃದ್ಧಾಪ್ಯ ವೇತನಕ್ಕೆ 7000 ಕೋಟಿ ರು.

ರಾಜ್ಯ ಸರ್ಕಾರ ವೃದ್ಧ ಜೀವಗಳ ಜೀವನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದೆ. ಇದೀಗ ವೃದ್ಧಾಪ್ಯ ವೇತನಕ್ಕೆ ಬರೋಬ್ಬರಿ 7 ಸಾವಿರ ಕೋಟಿ ಖರ್ಚು ಮಾಡುತ್ತಿದೆ. 

Karnataka Govt Spent 7 thousand Crore For Old Age pension
Author
Bengaluru, First Published Sep 11, 2020, 12:13 PM IST

ಶಿರಾ (ಸೆ.11):  ರಾಜ್ಯದಲ್ಲಿ ವೃದ್ಧಾಪ್ಯ ವೇತನಕ್ಕಾಗಿ ಪ್ರತಿ ವರ್ಷ ರಾಜ್ಯ ಸರಕಾರ ಸುಮಾರು 7000 ಕೊಟಿ ರು. ಖರ್ಚು ಮಾಡುತ್ತಿದೆ. ಇನ್ನು ಮುಂದೆ ವೃದ್ಧಾಪ್ಯ ವೇತನಕ್ಕೆ ಫಲಾನುಭವಿಗಳು ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಅವರ ಮನೆ ಬಾಗಿಲಿಗೆ ಆದೇಶ ಪತ್ರ ತಲುಪುವ ವ್ಯವಸ್ಥೆಯನ್ನು ಮಾಡಿದ್ದೇನೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಅವರು ಶಿರಾ ನಗರದ ಬುಕ್ಕಾಪಟ್ಟಣ ರಸ್ತೆಯಲ್ಲಿ 9.80 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಮಿನಿ ವಿಧಾನಸೌಧ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಸದ್ಯ ಬಳ್ಳಾರಿ, ಉಡುಪಿಯಲ್ಲಿ ಪ್ರಾಥಮಿಕವಾಗಿ ಜಾರಿ ಮಾಡಲಾಗಿದ್ದು, ಇದು ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಯಾರಿಗೆ ಆಧಾರ್‌ ಕಾರ್ಡ್‌ ಪ್ರಕಾರ 60 ವರ್ಷ ತುಂಬುತ್ತದೆಯೋ ಅಂತಹ ಫಲಾನುಭವಿಗೆ ಜಿಲ್ಲಾಧಿಕಾರಿಯೇ ಪತ್ರ ಬರೆದು ಫಲಾನುಭವಿಯನ್ನು ಅವರೇ ಕರೆಸಿ ಸ್ಥಳದಲ್ಲಿಯೇ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ ನೀಡುತ್ತಾರೆ ಎಂದರು.

ಶಿರಾ ರಾಜ​ಕೀಯ ಜಟಾ​ಪ​ಟಿ: ಜಯ​ಚಂದ್ರಗಿಲ್ಲ ಆಹ್ವಾನ ...

ರಾಜ್ಯದಲ್ಲಿ ಎಲ್ಲಾ ಹಳ್ಳಿಗಳಲ್ಲೂ ಕಡ್ಡಾಯವಾಗಿ ಸ್ಮಶಾನ ಇರಬೇಕು. ಸತ್ತ ವ್ಯಕ್ತಿಗೆ ಗೌರವಯುತ ಸಂಸ್ಕಾರ ಸಿಗಬೇಕು ಎಂಬುದು ಇದರ ಉದ್ದೇಶದಿಂದ ಸರಕಾರಿ ಜಮೀನು ಎಲ್ಲೆಲ್ಲಿ ಇದೆ ಆ ಜಾಗವನ್ನು, ಶಾಲಾ, ಕಾಲೇಜು, ಆಸ್ಪತ್ರೆ, ಸ್ಮಶಾನಗಳಿಗೆ ಮೀಸಲಿಡಲು ತಹಸೀಲ್ದಾರ್‌ಗಳಿಗೆ ಪತ್ರ ಬರೆದಿದ್ದೇನೆ. ತುಮಕೂರು ಜಿಲ್ಲೆಗೂ 180 ಮಂಜೂರು ಮಾಡಲಾಗಿದೆ ಎಂದರು.

ಶಿರಾದಲ್ಲಿ ಸುಮಾರು 10 ಕೋಟಿ ರು.ವೆಚ್ಚದಲ್ಲಿ ಸುಸಜ್ಜಿತವಾಗಿ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆಯಾಗಿದೆ. ಕಟ್ಟಡ ದೊಡ್ಡದಾಗಿದೆ, ಎಲ್ಲಾ ವ್ಯವಸ್ಥೆ ಇದೆ ಎಂದು ಅಧಿಕಾರಿಗಳು ಕೆಲಸ ಮಾಡದೆ ಕಾಲ ಹರಣ ಮಾಡಿದರೆ. ರೈತರ, ಸಾರ್ವಜನಿಕರ ಬಡವರ ಕೆಲಸ ಮಾಡಲು ದರ್ಪ ತೋರಿದರೆ ಅಂತಹ ಅಧಿಕಾರಿಗಳನ್ನು ಮುಲಾಜಿಲ್ಲದೆ ನಮ್ಮ ಸರ್ಕಾರ ಎತ್ತಂಗಡಿ ಮಾಡುತ್ತದೆ ಎಂದರು.

ಕಾರ್ಯಕ್ರಮದ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಿನಿ ವಿಧಾನಸೌಧ ಉದ್ಘಾಟನೆಗೆ ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರನ್ನು ಕರೆದಿಲ್ಲ ಎಂಬ ಬಗ್ಗೆ ಉತ್ತರಿಸಿ ಜಯಚಂದ್ರ ಅವರನ್ನು ಕರೆಯಬೇಕೆಂಬುದೆನಿಲ್ಲ. ಅಧಿಕಾರದಲ್ಲಿರುವ ಸರಕಾರದ ಶಿಷ್ಟಾಚಾರದಂತೆ ಮಾಡುತ್ತೇವೆ. ನಾವು ಸಹ ನಮ್ಮ ಅಧಿಕಾರದಲ್ಲಿ ಹಲವಾರು, ಬಸ್‌ ನಿಲ್ದಾಣ ಕಟ್ಟಡಗಳನ್ನು ಕಟ್ಟಿದ್ದೇವೆ. ಅವುಗಳನ್ನು ಕಾಂಗ್ರೆಸ್‌ ಸರಕಾರ ಉದ್ಘಾಟನೆ ಮಾಡಿದ್ದಾರೆ ಎಂದರು.

'ಬಿಜೆಪಿಯಿಂದ ಎಲೆಕ್ಷನ್‌ ಹೈ ಡ್ರಾಮಾ' ...

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಸಚಿವ ಆನಂದ್‌ ಸಿಂಗ್‌, ವಿಧಾನಪರಿಷತ್‌ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ತಾ.ಪಂ. ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥ್‌ ಗೌಡ, ಎಸ್ಪಿ ಡಾ.ವಂಶಿಕೃಷ್ಣ, ಎಸಿ ನಂದಿನಿ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ, ಅಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ್‌.ಎಂ.ಗೌಡ, ತಹಸೀಲ್ದಾರ್‌ ನಾಹಿದಾ ಜಮ್‌ ಜಮ್‌ ಮತ್ತಿತರರು ಹಾಜರಿದ್ದರು.

Follow Us:
Download App:
  • android
  • ios