ಚಿಕ್ಕಬಳ್ಳಾಪುರ : ಈಡೇರಿತು ಡಾ.ಸುಧಾಕರ್ ಬಹುದಿನಗಳ ಬೇಡಿಕೆ
ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದರಿಂದ ಇಲ್ಲಿನ ಮುಖಂಡ ಡಾ. ಸುಧಾಕರ್ ಅವರ ಬಹುದಿನದ ಕನಸೊಂದು ಈಡೇರಿದಂತಾಗಿದೆ..
ಚಿಕ್ಕಬಳ್ಳಾಪುರ [ಸೆ.01]: ಇಲ್ಲಿನ ಶಾಸಕ ಸುಧಾಕರ್ ಅವರಿಗೆ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಎದುರಾಗಿದ್ದ ಅಸಮಾಧಾನವನ್ನು ಉಪಶಮನ ಮಾಡಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
2014 ರ ಜೂ.12 ರಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿ ಅಂದಿನ ಸರ್ಕಾರ ಆದೇಶ ನೀಡಿತ್ತು. ಆದರೆ ನಂತರ ಅದಕ್ಕೆ ಅಗತ್ಯವಿರುವ ಆಡಳಿತಾತ್ಮಕ ಅನುಮೋದನೆಯೆ ಆಗಲೀ, ಅನುದಾನವಾಗಲೀ ನಂತರದ ಯಾವುದೇ ಸರ್ಕಾರ ನೀಡಿರಲಿಲ್ಲ. ಹಾಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸುಧಾಕರ್ ಅವರ ಅಸಮಾಧಾನಕ್ಕೆ ಅವರದೇ ಕನಸಿನ ಕೂಸು ಮೆಡಿಕಲ್ ಕಾಲೇಜು ಪ್ರಮುಖ ವಾಗಿತ್ತು.
ಏನಿದು ಮೆಡಿಕಲ್ ಕಾಲೇಜು ಕತೆ?: 2014 ರ ಜೂ.12 ರಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿ ಅಂದಿನ ಸರ್ಕಾರ ಆದೇಶ ನೀಡಿತ್ತು. 2017 - 18 ರಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾಪ ಮಾಡಲಾಗಿತ್ತು. ಅಲ್ಲದೆ ಜೂ. 19, 2014 ರಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಯನ್ನು 300 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಯಿತು.
ವೈದ್ಯಕೀಯ ಕಾಲೇಜಿಗಾಗಿ 300 ಹಾಸಿಗೆ ಆಸ್ಪತ್ರೆ ಅಗತ್ಯವಿರುವ ಕಾರಣ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆ ಗೇರಿಸಲಾಯಿತು. ಆದರೆ ನಂತರ ಬಂದ ಸಿದ್ದರಾಮಯ್ಯ ಸರ್ಕಾರ ಅನುಮೋದನೆ, ಅನುದಾನ ಎರಡನ್ನೂ ನೀಡಲಿಲ್ಲ. ಜೊತೆಗೆ ನಂತರ ಬಂದ ಜೆಡಿಎಸ್ ಕಾಂಗ್ರೆಸ್ ಸರ್ಕಾರವೂ ಈ ಯೋಜನೆಯನ್ನು ಮೂಲೆಗೆ ತಳ್ಳಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದರೆ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್ .ಡಿ. ಕುಮಾರಸ್ವಾಮಿ ಅವರು, ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜು ಘೋಷಣೆ ಮಾಡಿದರು. ಜಿಲ್ಲಾ ಕೇಂದ್ರದ ವೈದ್ಯಕೀಯ ಕಾಲೇಜಿಗೆ ಅನು ದಾನ ನೀಡದೆ, ಒಂದು ವೈದ್ಯಕೀಯ ಕಾಲೇಜು ಈಗಾ ಗಲೇ ಇರುವ ರಾಮ ನಗರ ಜಿಲ್ಲೆಗೆ ಮತ್ತೊಂ ದು ಕಾಲೇಜು ಘೋಷಣೆ ಮಾಡಿದ್ದು ಸುಧಾಕರ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಕಳೆದ ಆ. 9 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡಲಾಗಿದೆ.