Asianet Suvarna News Asianet Suvarna News

ಕೊಡಗು ಜಿಲ್ಲೆಯಲ್ಲಿ ಹೊಸ ತಾಲೂಕು: ರಾಜ್ಯ ಸರ್ಕಾದಿಂದ ಹೊರಬಿತ್ತು ಅಧಿಕೃತ ಆದೇಶ

ಕೊಡಗು ಜಿಲ್ಲೆಯಲ್ಲಿ ಹೊಸ ತಾಲೂಕು ರಚನೆಗೆ ರಾಜ್ಯ ಸರ್ಕಾದಿಂದ ಅಧಿಕೃತ ಆದೇಶ ಹೊರಬಿದ್ದಿದ್ದು, ದಶಕಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. 

Karnataka govt issued to constitute ponnampet as new taluk In Kadagu District
Author
Bengaluru, First Published Jul 7, 2020, 10:22 PM IST

ಕೊಡಗು, (ಜುಲೈ. 07):  ಕೊಡಗು ಜಿಲ್ಲೆಯ ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ರಚನೆ ಮಾಡಲು ಕರ್ನಾಟಕ ಸರ್ಕಾರ  ಅಧಿಕೃತ ಆದೇಶ ಹೊರಡಿಸಿದೆ.

ಈ ಮೂಲಕ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಪೊನ್ನಂಪೇಟೆಯನ್ನು ತಾಲೂಕು ರಚನೆಗೆ ಕರ್ನಾಟಕ ಸರ್ಕಾರ ಕರಡು ಆದೇಶ ಪ್ರಕಟ ಮಾಡಿತ್ತು. ಯಾವುದೇ ಆಕ್ಷೇಪಣೆ ಬರದ ಹಿನ್ನಲೆಯಲ್ಲಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ಪೊನ್ನಂಪೇಟೆ, ಕುಶಾಲನಗರ ಸೇರಿ ಮತ್ತೆ 12 ಹೊಸ ತಾಲೂಕು ರಚನೆ

ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸರ್ಕಲ್ ಅನ್ನು ಹೊಸ ತಾಲೂಕು ಆಗಿ ರಚನೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಪೊನ್ನಂಪೇಟೆ ತಾಲ್ಲೂಕು ಉದ್ಘಾಟನೆ ಎಪ್ರಿಲ್ ತಿಂಗಳಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ನೆರವೇರಿಸುವ ನಿರ್ಧಾರವನ್ನು ಪೊನ್ನಂಪೇಟೆ ಪ್ರತ್ಯೇಕ ತಾಲೂಕು ಹೋರಾಟ ಸಮಿತಿ ಹಾಗೂ ನಾಗರಿಕ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು.  ಆದರೆ, ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಕಾರ್ಯಕ್ರಮ ನಡೆಯಲಿಲ್ಲ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ಮಾತ್ರವಲ್ಲದೇ ಕುಶಾಲನಗರವನ್ನು ಸಹ ತಾಲೂಕು ರಚಿಸಲು ಸರ್ಕಾರ ತಾತ್ವಿಕವಾಗಿ ಅನುಮೋದನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. 

Follow Us:
Download App:
  • android
  • ios