Asianet Suvarna News Asianet Suvarna News

ಬೆಂಗಳೂರು ಸುತ್ತ 23 ಕಡೆ ಅವಕಾಶ, ಸ್ಮಶಾನದ ಪಟ್ಟಿ ಕೊಡಬೇಕಾದ ದುಸ್ಥಿತಿ!

ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಭೂಮಿ ಗುರುತಿಸಿದ ಸರ್ಕಾರ/ ಬೆಂಗಳೂರು ಮತ್ತು ಹೊರವಲಯದ 23 ಕಡೆ 230 ಎಕರೆ ಭೂಮಿ ಗುರುತಿಸಿದ ಸರ್ಕಾರ/ ಬೆಂಗಳೂರು‌ ದಕ್ಷಿಣದಲ್ಲಿ 5 ಕಡೆ ಭೂಮಿ ಮೀಸಲಿಟ್ಟು ಆದೇಶ/ ಬೆಂಗಳೂರು ಉತ್ತರದಲ್ಲಿ 5 ಕಡೆ ಅಂತ್ಯಸಂಸ್ಕಾರಕ್ಕೆ ಭೂಮಿ‌ ಗುರುತು

Karnataka Govt Identifies 23 Cremation Grounds on Outskirts of Bengaluru mah
Author
Bengaluru, First Published Apr 28, 2021, 5:00 PM IST

ಬೆಂಗಳೂರು(ಏ. 28)  ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಸರ್ಕಾರ ಭೂಮಿ ಗುರುತು ಮಾಡಿ ನೀಡಿದೆ ಬೆಂಗಳೂರು ಮತ್ತು ಹೊರವಲಯದ 23 ಕಡೆ 230 ಎಕರೆ ಭೂಮಿ ಗುರುತಿಸಿದೆ. ಬೆಂಗಳೂರು‌ ದಕ್ಷಿಣದಲ್ಲಿ 5 ಕಡೆ ಭೂಮಿ ಮೀಸಲಿಟ್ಟು ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಉತ್ತರದಲ್ಲಿ 5 ಕಡೆ ಅಂತ್ಯಸಂಸ್ಕಾರಕ್ಕೆ  ಅವಕಾಶ ಮಾಡಿಕೊಡಲಾಗಿದೆ.ಬೆಂಗಳೂರು ಪೂರ್ವದಲ್ಲಿ 4 ಕಡೆ ಕರೊನಾ ಸೋಂಕಿತರ ಸಂಸ್ಕಾರ ಜಮೀನು ನಿಗದಿ  ಮಾಡಲಾಗಿದೆ.  ಆನೇಕಲ್ ಸಮೀಪ 9 ಕಡೆ ಕರೊನಾ ಸೋಂಕಿತರ ಸಂಸ್ಕಾರಕ್ಕೆ ಭೂಮಿ ಒದಗಿಸಲಾಗಿದೆ. 

ಶವಸಂಸ್ಕಾರಕ್ಕೆ ಬಂದವರ ಬಳಿಯೂ ಹಣ ಪೀಕಿದರು

ಬೆಂಗಳೂರು ದಕ್ಷಿಣ ವಲಯ; ಮುದ್ದಯ್ಯನಪಾಳ್ಯ, ಮಾರಗೊಂಡನಹಳ್ಳಿ, ವಿಟ್ಟಸಂದ್ರ(ಬೊಮ್ಮನಹಳ್ಳಿ), ಮೈಲಸಂದ್ರ(ಬೊಮ್ಮನಹಳ್ಳಿ),  ಗೊಲ್ಲಹಳ್ಳ(ಬೊಮ್ಮನಹಳ್ಳಿ)

ಬೆಂಗಳೂರು ಉತ್ತರ; ಬೆಟ್ಟಹಲಸೂರು(ಯಲಹಂಕ), ಮೀಸಗಾನಹಳ್ಳಿ(ದಾಸರಹಳ್ಳಿ), ಬಾಗಲೂರು(ಪೂರ್ವ ವಲಯ), ಚಾಲಗಟ್ಟಿ(ಪೂರ್ವ ವಲಯ), ಬೆಳ್ಳಹಳ್ಳಿ(ಪೂರ್ವ ವಲಯ)

ಬೆಂಗಳೂರು ಪೂರ್ವ; ಕಾಡಗ್ರಹಾರ(ಮಹದೇವಪುರ), ಕಣ್ಣೂರು(ಮಹದೇವಪುರ), ಮಿಟ್ಟಗಾನಹಳ್ಳಿ(ಮಹದೇವಪುರ), ದೊಣ್ಣೇನಹಳ್ಳಿ(ಮಹದೇವಪುರ)

ಆನೇಕಲ್: ಮಹಾತಂಗಲಿಂಗಪುರ(ಮಹದೇವಪುರ), ಹಳೆಸಂಪಿಗೆಹಳ್ಳಿ(ಪೂರ್ವ ವಲಯ), ಮಂಟಪ (ಪೂರ್ವ ವಲಯ), ಹುಲಿಮಂಗಲ (ಪೂರ್ವ ವಲಯ), ಎಸ್‌ ಬಿಂಗಿಪುರ(ದಕ್ಷಿಣ ವಲಯ) , ಹುಲ್ಲಹಳ್ಳಿ(ರಾರಾ ನಗರ), ಲಕ್ಷ್ಮೀ ಪುರ(ರಾರಾ ನಗರ), ಗೊಲ್ಲಹಳ್ಳಿ(ರಾರಾ ನಗರ), ಸಕಲವಾರ (ರಾರಾ ನಗರ)

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"

Follow Us:
Download App:
  • android
  • ios