ಕಲಬುರಗಿ[ಸೆ.17] ಪ್ರತಿ ವರ್ಷ ಚಳಿಗಾಲದ ವಿಧಾನಸಭಾ ಅಧಿವೇಶನ ಬೆಳಗಾವಿಯಲ್ಲಿ ನಡೆಯುವುದು ವಾಡಿಕೆ. ಆದರೆ ಈ ಬಾರಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುವುದಿಲ್ಲ.

ಪ್ರವಾಹದ ಹಿನ್ನೆಲೆ ಬೆಳಗಾವಿ ಅಧಿವೇಶನ ರದ್ದು ಮಾಡಲಾಗಿದೆ. ಪ್ರವಾಹದಿಂದ ಅಧಿವೇಶನ ನಡೆಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ಬಾರಿ ಅಧಿವೇಶನ ಬೆಂಗಳೂರಿನಲ್ಲಿಯೇ ಮಾಡುತ್ತೇವೆ. ಮುಂದಿನ ಅಧಿವೇಶನ ಬೆಳಗಾವಿಯಲ್ಲಿ ಮಾಡುತ್ತೇವೆ ಎಂದು ಕಲಬುರಗಿಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಕೊನೆಗೂ ಹಿಂದಿ ಹೇರಿಕೆ ವಿಚಾರಕ್ಕೆ ತಕ್ಕ ಠಕ್ಕರ್ ಕೊಟ್ಟ ಬಿಎಸ್ ವೈ

ಉತ್ತರ ಕರ್ನಾಟಕದ ಜನರನ್ನು ಸಮಗ್ರವಾಗಿ ನೋಡಲು ಜತೆಗೆ ಆಡಳಿತ ವಿಕೇಂದ್ರೀಕರಣಕ್ಕೆ ಬೆಳಗಾವಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ಚಳಿಗಾಲದ ಅಧಿವೇಶನ ನಡೆಯುವುದಿಲ್ಲ.​​​​​​