ತಿಪಟೂರು [ಸೆ.10]:   ಇಂದಿನ ಬಿಜೆಪಿ ಸರ್ಕಾರದ ಆಯಸ್ಸು ಕೇವಲ 4 ತಿಂಗಳು ಎಂದು ಜನರೇ ಹೇಳುತ್ತಿದ್ದು, ಜನರ ಸಂಪೂರ್ಣ ಆಶೀರ್ವಾದವನ್ನು ಪಡೆದೇನೂ ಅವರು ಅಧಿಕಾರಕ್ಕೆ ಏರಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. 

ತುಮಕೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಿಜೆಪಿಗರು  ವಾಮ ಮಾರ್ಗದ ಮೂಲಕವೇ ಆಧಿಕಾರಕ್ಕೆ ಏರಿದ್ದಾರೆ. ಆದ್ದರಿಂದ ಹೆಚ್ಚು ಸಮಯ ಆಡಳಿತ ನಡೆಸುವುದಿಲ್ಲ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನಗೆ ಅಧಿಕಾರದ ಅಗತ್ಯವಿಲ್ಲ, ದಾಹವಿಲ್ಲ. ಜನರು ನನ್ನೊಂದಿಗಿದ್ದರೆ ಅದೇ ನನಗೆ ಅಧಿಕಾರ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಸೋಲಿಸಲು ಹಲವು ಕಾಣದ ಕೈಗಳು ಕೆಲಸ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಇದರಿಂದ ನಾನಾಗಲಿ, ನಮ್ಮ ಪಕ್ಷವಾಗಲಿ ಧೃತಿಗೆಟ್ಟಿಲ್ಲ ಎಂದಿ ಸಿಎಂ ಕುಮಾರಸ್ವಾಮಿ ಹೇಳಿದರು.