Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ ಬೆಂಗಳೂರಿನಲ್ಲಿ 1.50 ಲಕ್ಷ ಆಟೋ ರಿಕ್ಷಾಗಳಿಗೆ ಪರ್ಮಿಟ್‌, ಷರತ್ತುಗಳು ಅನ್ವಯ!

ರಾಜಧಾನಿ ಬೆಂಗಳೂರಿನಲ್ಲಿ 1.50 ಲಕ್ಷ ಆಟೋರಿಕ್ಷಾಗಳಿಗೆ ಪರ್ಮಿಟ್‌ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Karnataka government decided permit New  Eco-Friendly Autos in Bengaluru gow
Author
First Published Jul 7, 2024, 1:28 PM IST

ಬೆಂಗಳೂರು (ಜು.7): ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಹೊಸ ಬಡಾವಣೆಗಳ ನಿರ್ಮಾಣದಿಂದ ಆಟೋರಿಕ್ಷಾ ಪರ್ಮಿಟ್‌ ನೀಡಬೇಕೆಂಬ ಬೇಡಿಕೆಯ ಜೊತೆಗೆ ವಾಯು ಹಾಗೂ ಶಬ್ಧ ಮಾಲಿನ್ಯ ನಿಯಂತ್ರಿಸಲು ಮುಂದಿನ 5 ವರ್ಷದಲ್ಲಿ ಹೆಚ್ಚುವರಿಯಾಗಿ 1.50 ಲಕ್ಷ ಆಟೋರಿಕ್ಷಾಗಳಿಗೆ ಪರ್ಮಿಟ್‌ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದುಬೈನಲ್ಲಿ ಕುಳಿತು ಬೆಂಗಳೂರಿನಲ್ಲಿ ತಾಯಿ, ಮಗಳ ಡ್ರಗ್ ದಂಧೆ!

ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಳ್ಳುವ ಜತೆಗೆ ಆಟೋರಿಕ್ಷಾ ಪಡೆಯಲು ಅನಗತ್ಯವಾದ ಸ್ಪರ್ಧೆ ತಡೆಯಲು, ಪರ್ಮಿಟ್‌ ಪಡೆಯಲು ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಈ ತೀರ್ಮಾನ ತೆಗೆದುಕೊಂಡಿದೆ.

ಪ್ರಸ್ತುತ ಬೆಂಗಳೂರು ನಗರದಲ್ಲಿ 1.55 ಲಕ್ಷ ಆಟೋಗಳಿಗೆ ಮಾತ್ರ ಪರ್ಮಿಟ್‌ ನೀಡಲು ಮಿತಿ ಇದೆ. ಇದನ್ನು ಬರುವ 5 ವರ್ಷದ ಅವಧಿಯಲ್ಲಿ ಈ ಮಿತಿಯನ್ನು 2.55ಕ್ಕೆ ಹೆಚ್ಚಿಸಲಾಗುವುದು.

ಡ್ರಗ್ಸ್‌ ಸ್ಮಗ್ಲಿಂಗ್ ಮಾಡುತ್ತಿದ್ದ ಮಗನನ್ನೇ ಪೊಲೀಸರಿಗೆ ಹಿಡಿದು ಕೊಟ್ಟ ತಾಯಿ!

ಹೊಸ ಪರ್ಮಿಟ್‌ಗೆ ಷರತ್ತು: ಅಧಿಕೃತ ಎಲ್‌ಪಿಜಿ/ಸಿಎನ್‌ಜಿ/ಎಲೆಕ್ಟ್ರಿಕ್‌ ಕಿಟ್‌ ಹಾಗೂ ಡಿಜಿಟಲ್‌ ಫೇರ್‌ ಮೀಟರ್‌ ಅಳವಡಿಸಿರುವ ನಾಲ್ಕು ಸ್ಟ್ರೋಕ್‌ಗಳ ಬಿಎಸ್‌ 4 ಹೊಂದಿರುವ ಹಸಿರು ಆಟೋಗಳಿಗೆ ಮಾತ್ರ ಪರ್ಮಿಟ್‌ ನೀಡಲಾಗುವುದು. ಈಗಾಗಲೇ ಆಟೋ ರಿಕ್ಷಾ ಪರ್ಮಿಟ್‌ ಹೊಂದಿದವರಿಗೆ ಪರ್ಮಿಟ್‌ ನೀಡಲಾಗುವುದಿಲ್ಲ. ಅರ್ಜಿದಾರರು ಆಟೋರಿಕ್ಷಾ ಕ್ಯಾಬ್‌ ಚಲಾಯಿಸುವ ಲೈಸೆನ್ಸ್‌ ಹೊಂದಿರಬೇಕು. ವೈಯಕ್ತಿಕ ಅರ್ಜಿದಾರರು ಸಲ್ಲಿಸುವ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪಡಿತರ ಚೀಟಿ, ಪಾನ್‌ ಕಾರ್ಡ್‌ಗಳ ಪೈಕಿ ಒಂದನ್ನು ಪರಿಗಣಿಸಲಾಗುವುದು ಎಂದು ಸಾರಿಗೆ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios