ಬೆಂಗಳೂರು[ಡಿ.06] ಬೆಂಗಳೂರಿನ ವರ್ತೂರು, ಬೆಳ್ಳಂದೂರು, ಸುಬ್ರಹ್ಮಣ್ಯಪುರ ಕೆರೆಗಳಲ್ಲಿ ನೊರೆ ತುಂಬಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಬೆಳ್ಳಂದೂರು ಕೆರೆ ಶುದ್ದೀಕರಣಕ್ಕೆ ಅಂದಿನ ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದರು. ಆದರೆ ಯಾವ ನಿಯಮಗಳು ಸರಿಯಾಗಿ ಪಾಲನೆಯಾಗದ ಕಾರಣ ನ್ಯಾಯಾಧೀಕರಣ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.

ಕೆರೆ ರಕ್ಷಣೆಗೆ ಒತ್ತುವರಿ ತೆರವು ಮಾಡದೆ ನಿರ್ಲಕ್ಷ್ಯ ವಹಿಸಿರುವುದರಿಂದ ರಾಜ್ಯ ಸರ್ಕಾರಕ್ಕೆ 50 ಕೋಟಿ ರೂ. ದಂಡ ಹಾಗೂ ಬಿಬಿಎಂಪಿಗೆ 25 ಕೋಟಿ‌ ರೂ. ದಂಡ ವಿಧಿಸಲಾಗಿದೆ.ಬೆಳ್ಳಂದೂರು ಕೆರೆ ಅಭಿವೃದ್ಧಿ ಕ್ರಿಯಾ ಯೋಜನೆಯ ಮೀಸಲು ನಿಧಿಗೆ 500 ಕೋಟಿ ರೂ. ಹಣ ವರ್ಗಾವಣೆ ಮಾಡುವಂತೆ ಆದೇಶಿಸಿದೆ. ತಪ್ಪಿದರೆ ಮತ್ತೆ 100ಕೋಟಿ ರೂ. ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ದಂಡದ ಹಣದಲ್ಲಿ 15 ಕೋಟಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಾಗೂ 10 ಕೋಟಿ ರೂ. ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದಲ್ಲಿಸಮಿತಿ ರಚನೆಗೆ ಮೀಸಲಿಡಬೇಕು.  ಇನ್ನು ಮುಂದೆಯೂ ಇದೆ ನಿರ್ಲಜ್ಜ ಭಾವನೆ ಮುಂದುವರಿಸಿದರೆ ಹುಷಾರ್ ಎಂದು ಹೇಳಿದೆ.