Asianet Suvarna News Asianet Suvarna News

ನೆರೆ ಪರಿಹಾರಕ್ಕೆ 1 ಕೋಟಿ ರೂ. ಬಿಡುಗಡೆ ಮಾಡಿದ ರಾಜೀವ್ ಚಂದ್ರಶೇಖರ್

ಕರ್ನಾಟಕದ ಪ್ರವಾಹ ಪರಿಸ್ಥಿತಿ ನಿವಾರಣೆಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಮ್ಮ ನಿಧಿಯಿಂದ 1 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗ ಮಳೆಯಿಂದ ತತ್ತರಿಸಿ ಹೋಗಿದೆ.

 

Karnataka floodsRajya Sabha MP Rajeev Chandrasekhar announces Rs 1 crore for relief work
Author
Bengaluru, First Published Aug 9, 2019, 9:39 PM IST
  • Facebook
  • Twitter
  • Whatsapp

ಬೆಂಗಳೂರು[ಆ. 09]  ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗ ಪ್ರವಾಹದಿಂದ ಮುಳುಗಡೆಯಾಗಿದ್ದು ಪರಿಹಾರಕ್ಕೆ ಸಂಸದ ರಾಜೀವ್ ಚಂದ್ರಶೇಖರ್ 1 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

ಎಂಪಿಎಲ್ ಎಡಿ ಅಂದರೆ ಸಂಸದರ ಪ್ರವೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ. ಬಿಡುಗಡೆ ಮಾಡಿದ್ದು ಉದ್ದಿಮೆದಾರರು ಸಂತ್ರಸ್ತರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ಕೇರಳ ಪ್ರವಾಹಕ್ಕೆ 30 ಬಲಿ, ಕಾಸರಗೋಡು ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ನಮ್ಮ ರಾಜ್ಯದಲ್ಲಿ ಪ್ರವಾಹವು ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ಸಾವಿರಾರು ಜನರು ಮತ್ತು ಮನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ನನ್ನ ರಾಜ್ಯಸಭಾ ನಿಧಿಯಿಂದ ಪ್ರವಾಹ ಪೀಡಿತರಿಗೆ 1 ಕೋಟಿ ರೂ ಘೋಷಿಸುತ್ತಿದ್ದೇನೆ ಈ ಕಷ್ಟದ ಪರಿಸ್ಥಿತಿಯಲ್ಲಿ ಜನತೆ ಮತ್ತು ಉದ್ಯಮಿಗಳು ಸಾಧ್ಯವಿರುವ ಎಲ್ಲ ರೀತಿಯ ಸಹಾಯ ನೀಡಬೇಕೆಂದು ವಿನಂತಿ ಎಂದು ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

 

Follow Us:
Download App:
  • android
  • ios