ಪ್ರವಾಹ ಸಂತ್ರಸ್ತರ ಬದುಕೇ ಬರ್ಬಾದ್! ರಸ್ತೆಯಲ್ಲೇ ಬದುಕು

  • ಅಥಣಿ ತಾಲೂಕಿನ ಪ್ರವಾಹ ಸಂತ್ರಸ್ತರ ಬದುಕೇ ಬರ್ಬಾದ್ ಆಗಿದೆ. ಪ್ರವಾಹದ ಹೊಡೆತಕ್ಕೆ ಬದುಕು ಬೀದಿಗೆ ಬಿದ್ದಿದೆ.
  • ಮನೆ-ಮಠ ಬಿಟ್ಟು ಜನ ರಸ್ತೆ ಬದಿಗೆ ಬಂದು ನಿಂತಿದ್ದಾರೆ. 
Karnataka Floods Flood Victims Vacate Homes, But Clueless About Shelter SNR

ಬೆಳಗಾವಿ/ಅಥಣಿ (ಜು.27): ಅಥಣಿ ತಾಲೂಕಿನ ಪ್ರವಾಹ ಸಂತ್ರಸ್ತರ ಬದುಕೇ ಬರ್ಬಾದ್ ಆಗಿದೆ. ಪ್ರವಾಹದ ಹೊಡೆತಕ್ಕೆ ಬದುಕು ಬೀದಿಗೆ ಬಿದ್ದಿದೆ. ಮನೆ-ಮಠ ಬಿಟ್ಟು ಜನ ರಸ್ತೆ ಬದಿಗೆ ಬಂದು ನಿಂತಿದ್ದಾರೆ.  

"

ಪ್ರವಾಹಕ್ಕೆ ಸಂಪೂರ್ಣ ಮುಳುಗಿದ ಸೇತುವೆ : ಸಂಪರ್ಕ ಕಟ್

ಟ್ರಾಕ್ಟರ್‌ಗಳಲ್ಲಿ ತಿಜೋರಿ, ಗ್ಯಾಸ್, ಸೇರಿ ಮನೆಯ ಸಾಮಾನು ಹೇರಿಕೊಂಡು ಮನೆ ಬಿಟ್ಟು ಬಂದಿದ್ದಾರೆ. ಬಾಣಂತಿ, ವಯಸ್ಸಾದವರು, ಪ್ರಾಣಿಪಕ್ಷಗಳನ್ನೆಲ್ಲಾ ಕರೆದುಕೊಂಡು ಬಂದು ನೆಲೆ ಇಲ್ಲದೆ ಪರದಾಡುತ್ತಿದ್ದಾರೆ.

ಶ್ವಾನ, ಬೆಕ್ಕು, ಕುದುರೆ ರಕ್ಷಿಸಿ ಪ್ರವಾಹದಿಂದ ಹೊರ ತಂದ ಮತ್ತೊಬ್ಬ ಸಂತ್ರಸ್ತ ಸಾಕಿದ್ದೀವಿ ಅವುಗಳನ್ನ ಕೊಲ್ಲೊದಕ್ಕೆ ಆಗುತ್ತಾ? ಅದಕ್ಕೆ ರಕ್ಷಿಸಿ ತಂದಿದ್ದೀನಿ ಎಂದು ತಮ್ಮ ಗೋಳು ತೋಡಿಕೊಂಡಿದ್ದಾರೆ.

 ಪ್ರವಾಹದ ಹೊಡೆತಕ್ಕೆ ವಿಶೇಷಚೇತನರು ಕಂಗಾಲಾಗಿದ್ದು, ತ್ರಿಚಕ್ರ ಸೈಕಲ್ ಮೇಲೆ ಒಬ್ಬನೆ ಬಂದು ಜೀವ ಉಳಿಸಿಕೊಳ್ಳಲು ಹರಸಾಹಸಪಟ್ಟದನ್ನು  ನೆನೆದು ಮನೆ ಇಲ್ಲ ಎಲ್ಲಿಗೆ ಹೋಗಲಿ ಎಂದು ಅಳಲು ತೋಡಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios