ಬೆಂಗಳೂರು[ಆ. 09]  ಕೊಡಗಿನ‌ ಮೂವರು ಮಹಾಲಕ್ಷ್ಮೀಯರು ವರ ಮಹಾಲಕ್ಷ್ಮಿ ಹಬ್ಬದಂದು ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜನರನ್ನು ರಕ್ಷಿಸಲು ಮುಂದಾಗಿದ್ದು ಹೀಗೆ.. ಹೌದು.. ಹೀಗೊಂದು ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. 

ಅದಕ್ಕೆ ಕಾರಣ ಹೇಳಿಬಿಡುತ್ತೇವೆ.. ಯಾಕಂದ್ರೆ ಇಲ್ಲಿನ ಆಯಕಟ್ಟಿಜನ ಸ್ಥಾನದಲ್ಲಿರುವ ಮೂವರು ಅಧಿಕಾರಿಗಳು ಮಹಿಳೆಯರು.  ಡಿಸಿ ಅನೀಸ್ ಕಣ್ಮಣಿ, ಜಾಯ್, ಎಸ್ಪಿ ಡಾ. ಸಿಮನ್ ಡಿ ಪನೇಕರ್ ಮತ್ತು ಜಿಪಂ ಸಿಇಒ ಲಕ್ಷ್ಮೀ ಪ್ರಿಯಾ ಮೂವರು ಪರಿಹಾರ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ 58 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 15 ಪ್ರದೇಶಗಳಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುತ್ತದೆ. ಜಿಲ್ಲೆಯಲ್ಲಿ ಒಟ್ಟಾಗಿ 34 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 817 ಕುಟುಂಬಗಳ ಒಟ್ಟು 2866 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ.  ಜಿಲ್ಲೆಯಲ್ಲಿ  ಈವರೆಗೆ 247 ಜನರನ್ನು ಮತ್ತು 11  ಜಾನುವಾರಗಳನ್ನು ರಕ್ಷಿಸಲಾಗಿದೆ. ಹಾಗೂ ಹೆಗ್ಗಳ ಗ್ರಾಮದ ತೋರ ಪ್ರದೇಶದಲ್ಲಿ 300 ಕುಟುಂಬಗಳನ್ನು ರಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 07 ಜೀವಹಾನಿಯಾಗಿರುವ ಪ್ರಕರಣಗಳು ವರದಿಯಾಗಿದೆ.

ರೈಲು ಸಂಚಾರ ಸ್ಥಗಿತ: ಚಿಕ್ಕಮಗಳೂರಿನಿಂದ ತೆರಳಬೇಕಿದ್ದ 2 ರೈಲು ಸಂಚಾರ ಸ್ಥಗಿತವಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲೂ ಮಳೆ ಅಬ್ಬರ ಮುಂದುವರಿದೆ. ರೈಲ್ವೆ ಹಳಿ ಮೇಲೆ ಗುಡ್ಡ  ಕುಸಿದಿದೆ. ಚಿಕ್ಕಮಗಳೂರು ತಾಲೂಕಿನ ಕಣಿವೆ ಹಳ್ಳಿ ಬಳಿ ಗುಡ್ಡ ಕುಸಿದ ಪರಿಣಾಮ ಚಿಕ್ಕಮಗಳೂರು ನಿಂದ ಶಿವಮೊಗ್ಗ ಚಿಕ್ಕಮಗಳೂರು ನಿಂದ ಯಶವಂತಪುರ ತೆರಳುವ ರೈಲು ಸಂಚಾರ ವ್ಯತ್ಯಯ ಆಗಿದೆ.