ರಾಜ್ಯದಲ್ಲಿ ಕಾಂಗ್ರೆಸ್​ ಗೆಲುವು ಬೆನ್ನಲ್ಲೆ ಬಾಗಲಕೋಟೆಯಲ್ಲಿ ವಿಜಯ ರಥಯಾತ್ರೆಗೆ ಸಿದ್ಧತೆ

ರಾಜ್ಯದಲ್ಲಿ ಕಾಂಗ್ರೆಸ್​ ಗೆಲುವು ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್​ ವಿಜಯ ರಥಯಾತ್ರೆಗೆ ಮುಂದಾದ  ಕೈ ನಾಯಕರು. ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಟಾರ್ಗೆಟ್.

karnataka election results 2023 After Congress victory procession in Bagalkot gow

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಮೇ.23): ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಭರ್ಜರಿ ಜಯಭೇರಿ ಸಾಧಿಸಿರುವ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯಲ್ಲಿ ಜನತೆಗೆ ಕೃತಜ್ಞತೆ ಸಲ್ಲಿಸುವುದು ಸೇರಿದಂತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನ ಮನೆ ಮನೆ ತಲುಪಿಸಲು ಜಿಲ್ಲೆಯಲ್ಲಿ ಕೈ ನಾಯಕರು ಪ್ಲ್ಯಾನ್​ ಮಾಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್​ ವಿಜಯ ರಥ ಯಾತ್ರೆಯನ್ನ ಹಮ್ಮಿಕೊಳ್ಳಲು ಸಿದ್ದತೆ ನಡೆಸಿಕೊಂಡಿದ್ದಾರೆ. ಈ ಮಧ್ಯೆ ಜಿಲ್ಲೆಯ ಕೈ ನಾಯಕರು ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಟಾರ್ಗೆಟ್​ ಶುರು ಮಾಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ. 

ರಾಜ್ಯಾದ್ಯಂತ ಎಲ್ಲೆಡೆ ಭರ್ಜರಿ ವಿಜಯೋತ್ಸವದಲ್ಲಿರೋ ಕಾಂಗ್ರೆಸ್ ಕಾರ್ಯಕರ್ತರು, ತಮ್ಮನ್ನು ಬೆಂಬಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಿ ಗ್ಯಾರಂಟಿಗಳನ್ನ ಮನೆ ಮನೆಗೆ ತಲುಪಿಸಲು ಯೋಚಿಸುತ್ತಿರೋ ಕೈ ಮುಖಂಡರು, ಇವುಗಳ ಮಧ್ಯೆ ಕಾಂಗ್ರೆಸ್​ ವಿಜಯ ರಥಯಾತ್ರೆಗೆ ಸಿದ್ದತೆ ನಡೆಸಿರುವ ಜಿಲ್ಲೆಯ ಕಾಂಗ್ರೆಸ್​ ನಾಯಕರು. ಅಂದಹಾಗೆ ಇಂತಹವೊಂದು ರಾಜಕೀಯ ಚಿತ್ರಣ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಹೌದು. ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಜಯಭೇರಿ ಗಳಿಸಿರೋ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯಲ್ಲಿಯೂ 7 ಮತಕ್ಷೇತ್ರಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿದೆ. ಈ ನಡುವೆ ರಾಜ್ಯದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್​ ಸರ್ಕಾರ ಸಹ ಅಸ್ಥಿತ್ವಕ್ಕೆ ಬಂದಿದೆ. ಹೀಗಾಗಿ ಈ ಬಾರಿ ತಮ್ಮ ಪಕ್ಷವನ್ನ ಬೆಂಬಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುವುದು, ಪ್ರತಿ ಮನೆಮನೆಯ ಜನರಿಗೆ ಕಾಂಗ್ರೆಸ್​ ನ ಗ್ಯಾರಂಟಿಗಳನ್ನ ಮುಟ್ಟಿಸುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್​ ವಿಜಯ ರಥಯಾತ್ರೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. 

ಕಾಂಗ್ರೆಸ್ ಪಕ್ಷದ ವಿಜಯ ರಥಯಾತ್ರೆಗೆ ಸಿಎಂ ಸಿದ್ದರಾಮಯ್ಯ ಮತ್ತು  ಕೆಪಿಸಿಸಿ ಅಧ್ಯಕ್ಷರಿಂದ ಚಾಲನೆ 
ಹೌದು, ಬಾಗಲಕೋಟೆ ಜಿಲ್ಲೆಯಲ್ಲಿ ಆತ್ಮ ವಿಶ್ವಾಸದೊಂದಿಗೆ ಹುರುಪಿನಲ್ಲಿರುವ ಕೈ ನಾಯಕರು ಇದೀಗ ಜಿಲ್ಲೆಯ 7 ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿಜಯ ರಥ ಯಾತ್ರೆ ಕೈಗೊಳ್ಳಲು ಮುಂದಾಗಿದ್ದಾರೆ. ಮುಖ್ಯವಾಗಿ ಈ ರಥಯಾತ್ರೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನ ಕರೆತರಲು ನಿರ್ಧರಿಸಿದ್ದು, ಇನ್ನು ಈ ರಥಯಾತ್ರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೂರ್ನಾಲ್ಕು ದಿನ ಸಂಚರಿಸಲಿದೆಯಂತೆ. ಈಗಾಗಲೇ ಜಿಲ್ಲೆಯಾದ್ಯಂತ ಪ್ರತಿ ತಾಲೂಕು, ಹೋಬಳಿ, ಪಟ್ಟಣ, ಗ್ರಾಮ ಹೀಗೆ ಪ್ರತಿಯೊಂದು ಹಂತದಲ್ಲಿ ಕೈ ಕಾರ್ಯಕರ್ತರನ್ನ, ಮುಖಂಡರನ್ನ ಸಂಪರ್ಕಿಸಿ ಭರ್ಜರಿ ವಿಜಯ ರಥಯಾತ್ರೆ ಮಾಡಲು ನಿರ್ಧರಿಸಿರೋದಾಗಿ  ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್​.ಜಿ.ನಂಜಯ್ಯನಮಠ ತಿಳಿಸಿದ್ದಾರೆ.

ಕೈ ನಾಯಕರಿಗೆ ಲೋಕಸಭೆ ಚುನಾವಣೆ ಟಾರ್ಗೆಟ್:
ಇನ್ನು ಜಿಲ್ಲೆಯ ಕೈ ನಾಯಕರಿಗೆ ಕಾಂಗ್ರೆಸ್​ ವಿಜಯ ರಥಯಾತ್ರೆಯನ್ನ ಮಾಡುವುದರಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಟಾರ್ಗೆಟ್​ ಸಹ ಇದೆ. ಹೀಗಾಗಿಯೇ ಮತ್ತೇ ಜನರನ್ನ ತಮ್ಮತ್ತ ಸೆಳೆದು ಲೋಕಸಭೆ ಚುನಾವಣೆಯಲ್ಲೂ ಗೆಲವು ಸಾಧಿಸಬೇಕೆಂಬ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ನಡುವೆ ಸೋತಿರುವ ಜಮಖಂಡಿ ಮತ್ತು ತೇರದಾಳ ಮತಕ್ಷೇತ್ರಗಳಲ್ಲಿಯೂ ಸಹ ತಮ್ಮ ಪರಾಜಿತ ವಿಧಾನಸಭೆ ಅಭ್ಯರ್ಥಿಗಳ ನೇತೃತ್ವದಲ್ಲಿಯೇ ಮನೆ ಮನೆಗೆ ತೆರಳಿ ತಮ್ಮ ಪಕ್ಷದ ಗ್ಯಾರಂಟಿಗಳನ್ನ ನೀಡುವ ಉದ್ದೇಶವನ್ನ ಕೈ ನಾಯಕರು ಹೊಂದಿದ್ದು, ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಜೊತೆಗೆ ಮುಂಬರುವ ಲೋಕಸಭೆಯಲ್ಲೂ ಗೆಲ್ಲುವ ಆಶಯವನ್ನ ಕೈ ನಾಯಕರು ಹೊಂದಿದ್ದಾರೆ.

ಉರಿಗೌಡ-ನಂಜೇಗೌಡ ಕೇಸಲ್ಲಿ ನಮ್ಮ ವಿರುದ್ಧ ನಿಂತ್ರಿ, ಇನ್ನು ಅದೆಲ್ಲ ನಡೆಯಲ್ಲ: ಪೊಲೀಸರಿಗೆ

ಮಹಿಳೆಯರಿಗೆ ಗ್ಯಾರಂಟಿ ತಲುಪಿಸಿ ಉತ್ತೇಜಿಸುವುದೇ  ಗುರಿ:
ಇನ್ನು ಕಾಂಗ್ರೆಸ್​ ಪಕ್ಷದ ಪ್ರಣಾಳಿಕೆಯಂತೆ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ಮತ್ತು ಮಹಿಳೆಯರಿಗೆ ಬಸ್​ ಪಾಸ್ ಸೇರಿದಂತೆ ವಿವಿಧ ಯೋಜನೆಗಳನ್ನ ಮಹಿಳೆಯರಿಗೆ ತಲುಪಿಸಲು ಜಿಲ್ಲಾ ಮಹಿಳಾ ಕಾಂಗ್ರೆಸ್​ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ನೇತೃತ್ವದಲ್ಲಿ  ಟೀಮ್  ಮಾಡಲು ನಿರ್ಧರಿಸಿದ್ದು, ಈ ಮೂಲಕ ಗ್ಯಾರಂಟಿಗಳು ಮನೆ ಮುಟ್ಟಿರೋ ಬಗ್ಗೆ ಅಥವಾ ಬಿಟ್ಟು ಹೋಗಿದ್ದರೆ ಅವರಿಗೆ ಕೊಡಿಸುವ ಬಗ್ಗೆ ಕಾರ್ಯನಿರ್ವಹಿಸಲಿವೆ. ಹೀಗಾಗಿ ಮತ ನೀಡಿದ ಜನರಿಗೆ ಕೃತಜ್ಷತೆ ಸಲ್ಲಿಸುವುದು ಮತ್ತು ಮನೆ ಮನೆಗೂ ಪಕ್ಷ ನೀಡಿದ ಗ್ಯಾರಂಟಿಗಳನ್ನ ತಲುಪಿಸುವುದು ಹಾಗೂ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮತ್ತಷ್ಟು ಪಕ್ಷವನ್ನ ಬಲಗೊಳಿಸುವುದು ಈ ಕಾಂಗ್ರೆಸ್​ ಪಕ್ಷದ ವಿಜಯ ರಥಯಾತ್ರೆಯ ಮೂಲಉದ್ದೇಶವಾಗಿದೆ ಅಂತಾರೆ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ.

ಪೊಲೀಸ್ ಇಲಾಖೆಯನ್ನೇ ಕೇಸರಿಕರಣ ಮಾಡಲು ಹೊರಟಿದ್ದೀರಾ... ಅಧಿಕಾರಿಗಳ

ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ಗೆಲವು ಸಂಭ್ರಮಿಸಲು ಕಾಂಗ್ರೆಸ್​ ವಿಜಯ ರಥಯಾತ್ರೆಗೆ ಮುಂದಾಗಿರೋ ಬಾಗಲಕೋಟೆ ಜಿಲ್ಲೆಯ ಕೈ ನಾಯಕರು ಇದರೊಟ್ಟಿಗೆ ಮುಂಬರುವ ಲೋಕಸಭಾ ಚುನಾವಣೆಯನ್ನ ಸಹ ಟಾರ್ಗೆಟ್​ ಮಾಡಿದ್ದು, ಇದಕ್ಕೆ ಮುಂಬರುವ ದಿನಗಳಲ್ಲಿ ಯಾವ ರೀತಿ ರೆಸ್ಪಾನ್ಸ್ ದೊರೆಯುತ್ತೇ ಅಂತ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios